ಕಾಮಕಸ್ತೂರಿ ಎಲೆ ಮತ್ತು ಬೀಜಗಳಿಂದ ಏನೆಲ್ಲಾ ಲಾಭ ಪಡೆಯಬಹುದು ನಿಮಗೆ ಗೊತ್ತೇ?? ಹೀಗೆ ಮಾಡಿದರೆ ಸಾಕು.

ನಮಸ್ಕಾರ ಸ್ನೇಹಿತರೇ ಕಾಮಕಸ್ತೂರಿ ಬೀಜ ನಿಮಗೆಲ್ಲರಿಗೂ ತಿಳಿದಿರುತ್ತದೆ. ಆಯುರ್ವೇದದಲ್ಲಿ ಈ ಬೀಜಗಳ ಮಹತ್ವವನ್ನ ಸಾಕಷ್ಟು ವಿವರಿಸಲಾಗಿದೆ. ಕಾಮಕಸ್ತೂರಿ ಶಿವನಿಗೆ ಪ್ರಿಯವಾದ ಗಿಡವಾಗಿದೆ. ಪುರಾಣದ ಗ್ರಂಥಗಳಲ್ಲಿಯೂ ಈ ಕಾಮಕಸ್ತೂರಿ ಗಿಡ, ಎಲೆ ಮತ್ತುಶಬೀಜಗಳ ಮಹತ್ವದ ಬಗ್ಗೆ ತಿಳಿಸಲಾಗಿದೆ. ಈಗಿನ ಪೀಳಿಗೆಯವರಿಗೆ ಕಾಮಕಸ್ತೂರಿ ಬೀಜದ ಮಹತ್ವ ತಿಳಿದಿರುತ್ತದೆ. ಆದರೇ ಬೀಜದಷ್ಟೇ ಉಪಯೋಗಗಳು ಕಾಮಕಸ್ತೂರಿಯ ಎಲೆಗಳಲ್ಲೂ ಇದೆ. ಬನ್ನಿ ಕಾಮಕಸ್ತೂರಿ ಎಲೆಗಳ ಮಹತ್ವವನ್ನು ತಿಳಿಯೋಣ.

ಮೊದಲನೆಯದಾಗಿ ಅತಿಯಾದ ವಾಂತಿಯ ಸಮಸ್ಯೆಯಿಂದ ಬಳಲುತ್ತಿರುವವರು ಎರಡು ಕಾಮಕಸ್ತೂರಿ ಎಲೆಯನ್ನು ಜಜ್ಜಿ ಅದರ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೇ ವಾಂತಿ ಶೀಘ್ರವಾಗಿ ಶಮನವಾಗುತ್ತದೆ. ಕಜ್ಜಿ, ಚರ್ಮದ ನವೆ ಮುಂತಾದ ಚರ್ಮ ಸಂಭಂದಿತ ರೋಗಗಳಿಂದ ಬಳಲುತ್ತಿರುವವರು ಕಾಮಕಸ್ತೂರಿ ಎಲೆಗಳನ್ನ ನುಣ್ಣಗೆ ಅರೆದು, ಅದಕ್ಕೆ ಅರಿಶಿಣ ಸೇರಿಸಿ ಮೈಗೆ ಹಚ್ಚಿಕೊಂಡರೇ ಚರ್ಮ ರೋಗಗಳಿಂದ ಮುಕ್ತರಾಗಬಹುದು.

ಇನ್ನು ದೇಹದಲ್ಲಿ ಉಷ್ಣಾಂಶ ಹೆಚ್ಚಿದರೇ, ಕಾಮಕಸ್ತೂರಿ ಬೀಜಗಳನ್ನ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಿದರೇ, ದೇಹದ ಉಷ್ಣಾಂಶ ಕಡಿಮೆಯಾಗುವುದು. ಗಿಡದ ಬೇರನ್ನು ತಂದು, ಅದರ ಕಷಾಯ ಮಾಡಿ ಪ್ರತಿದಿನ ಕುಡಿಯುವದರಿಂದ ಹೃದಯಕ್ಕೆ ಸಂಭಂದಿಸಿದ ರೋಗಗಳು ವಾಸಿಯಾಗುವುದಲ್ಲದೇ, ರಕ್ತ ಶುದ್ದಿಯಾಗುತ್ತದೆ. ದೇಹದಲ್ಲಿನ ಬೇಡವಾದ ಕೊಬ್ಬನ್ನು ಹೋಗಿಸಲು ಕಾಮಕಸ್ತೂರಿ ಬೀಜಗಳು ರಾಮಬಾಣವಾಗಿದೆ. ಪ್ರತಿನಿತ್ಯ ಸೇವಿಸಿದರೇ ದೇಹದ ತೂಕ ಕಡಿಮೆಯಾಗುತ್ತದೆ. ಹೆಸರೇ ಹೇಳುವಂತೆ ಕಾಮಕಸ್ತೂರಿ ಉತ್ತಮ ಕಾಮೋತ್ತೇಜಕವಾಗಿದ್ದು, ಒಂದು ಚಮಚ ಕಾಮಕಸ್ತೂರಿ ಬೀಜ, ಎರಡು ಚಮಚ ಬೆಲ್ಲವನ್ನ ಒಂದು ಲೋಟ ನೀರಿನಲ್ಲಿ ಕಾಯಿಸಿ ಕುಡಿದರೇ, ಉತ್ತಮ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.