ಎಲ್ಲರೂ ಮತ್ತೆ ಮತ್ತೆ ಕೇಳಿ ಮಾಡಿಸಿಕೊಳ್ಳುವ ಕಾಯಿ ಸಾಸಿವೆ ಅನ್ನವನ್ನು ಮಾಡುವುದು ಎಷ್ಟು ಸುಲಭ ಗೊತ್ತೇ?? ಹೀಗೆ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ ಅತ್ಯಂತ ರುಚಿಕರವಾದ ಕಾಯಿ ಸಾಸಿವೆ ಅನ್ನವನ್ನು ಮಾಡುವ ರೆಸಿಪಿಯನ್ನು ನಾವಿಂದು ತಿಳಿಸಿಕೊಡ್ತೀವಿ. ಇದು ಮಕ್ಕಳಿಗೆ ಕೂಡ ಇಷ್ಟವಾಗುವಂತ ರೆಸಿಪಿ ಕೂಡ ಹೌದು. ಕಾಯಿ ಸಾಸಿಮೆ ಮಾಡಲು ಬೇಕಾಗುವ ಸಾಮಗ್ರಿಗಳು ಹೀಗಿವೆ:

ಒಂದು ಕಪ್ ಅಕ್ಕಿ (ನಿಮಗೆ ಬೇಕಾದ ಅಕ್ಕಿಯನ್ನು ಬಳಸಬಹುದು), ಕಾಯಿ ತುರಿ ಒಂದು ಕಪ್, ಸಾಸಿವೆ ೨ ಚಮಚ, ಎಣ್ಣೆ ೩ ಚಮಚ, ಇಂಗು ಕಾಲು ಚಮಚ, ಸಣ್ನ ನಿಂಬೆ ಗಾತ್ರದ ಹುಣಸೆ ಹಣ್ಣು, ಕರಿಬೇವು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸ್ವಲ್ಪ, ಉದ್ದಿನಬೇಳೆ ಮತ್ತು ಕಡಲೇಬೇಳೆ ಅರ್ಧ ಚಮಚ, ಕಡಲೇಕಾಯಿ ಒಂದು ಚಮಚ.

ಮಾಡುವ ವಿಧಾನ ನೋಡೋಣ ಬನ್ನಿ- ಮೊದಲಿಗೆ ಅಕ್ಕಿಯನ್ನು ಹದಿನೈದು ನಿಮಿಷ ನೆನೆಸಿಟ್ಟು ನಂತರ ಉದುರುದುರಾದ ಅನ್ನವನ್ನು ಮಾಡಿಟ್ಟುಕೊಳ್ಳಿ. ನಂತರ ಒಂದು ಮಿಕ್ಸರ್ ಜಾರ್ ಗೆ ಕಾಯಿ ತುರಿ, ಒಣಮೆಣಸು, ಬೆಲ್ಲ, ಹುಣಸೆಹಣ್ಣು, ಸಾಸಿವೆಯನ್ನು ಹಾಕಿ ನೀರನ್ನು ಹಾಕದೇ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಎಣ್ಣೆ, ಕಡಲೆ ಕಾಳು, ಉದ್ದಿನ ಬೇಳೆ, ಕಡಲೆಬೇಳೆ, ಒಣಮೆಣಸು, ಕರಿಬೇವು ಇವುಗಳನ್ನು ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ. ಸಣ್ನ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು, ಅರಿಶಿನ ಹಾಗೂ ಇಂಗನ್ನು ಸೇರಿಸಿಕೊಳ್ಳಬೇಕು. ಈಗ ಮಸಾಲೆ ರೆಡಿಯಾಗಿದೆ. ಈ ಮಸಾಲೆಯನ್ನು ಅನ್ನಕ್ಕೆ ಸೇರಿಸಿಕೊಂಡು ಸವಿದರೆ ಆಯಿತು. ಅನ್ನಕ್ಕೆ ಸೇಸಿರುವ ಮೊದಲು ಈ ಮಸಾಲೆ ಮಿಶ್ರಣವನ್ನು ಒಂದು ಡಬ್ಬದಲ್ಲಿ ಹಾಕಿ ಪ್ರಿಡ್ಜ್ ನಲ್ಲಿಟ್ಟರೆ ವಾರದವರೆಗೂ ಕೆಡದೇ ಹಾಗೇ ಇರುತ್ತದೆ. ನೀವು ಒಮ್ಮೆ ಈ ಅದ್ಭುತ ಸಾಸಿವೆ ಅನ್ನವನ್ನು ಮಾಡಿ ನೋಡಿ.

Comments are closed.