ಕನ್ನಡದ ಹೀರೋಗಳ ಜೊತೆ 32 ಸಿನಿಮಾಗಳಲ್ಲಿ ನಟಿಸಿದ ಪುಟಾಣಿ ಇದೀಗ ಯುಪಿಎಸ್ಸಿ ಯಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ !

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಹಲವಾರು ಮೇರು ನಟರ ಜೊತೆ ಬಾಲ ಪ್ರತಿಭೆಯಾಗಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಬಾಲ್ಯದಲ್ಲಿಯೇ ಉತ್ತಮ ನಟನೆಯಿಂದ ಜನರ ಮನ ಗೆದ್ದಿದ್ದ ಬಾಲ ನಟಿಯೊಬ್ಬರು ಇದೀಗ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತಹ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಯುಪಿಎಸ್ಸಿ ಫಲಿತಾಂಶದಲ್ಲಿ ಅಂದು ಬಾಲ ಪ್ರತಿಭೆಯಾಗಿ ಮಿಂಚಿದ ಇವರು ಇದೀಗ 167 ನೇ ರಾಂಕ್ ಪಡೆದುಕೊಂಡು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ಹೊತ್ತಿರುವ ಇವರು ಖಂಡಿತ ಕರ್ನಾಟಕಕ್ಕೆ ಮತ್ತಷ್ಟು ಕೀರ್ತಿ ತರಲಿದ್ದಾರೆ. ಅಷ್ಟಕ್ಕೂ ಇವರು ಯಾರು? ಇವರ ಸಂಪೂರ್ಣ ಡೀಟೇಲ್ಸ್ ಅನ್ನು ನಾವು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ ಇದೀಗ ಐಪಿಎಸ್ ಅಧಿಕಾರಿಯಾಗಿ ಉತ್ತಮ ಆಡಳಿತ ಸೇವೆ ನೀಡುವ ಮೂಲಕ ಮಿಂಚಲು ತಯಾರಾಗಿರುವುದು ಮತ್ತ್ಯಾರು ಅಲ್ಲ ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡ ಕೀರ್ತನ. ಇವರು ಬಾಲ್ಯದಲ್ಲಿ ಇದ್ದಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ರವರ ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಎ, ಕರ್ಪೂರದ ಗೊಂಬೆ, ಹಬ್ಬ, ಲೇಡಿ ಕಮಿಷನರ್, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ 32 ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.

ಬಾಲನಟಿಯಾಗಿ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದ ಕೀರ್ತನ ರವರು ಇದೀಗ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿನಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದು, 167ನೇ ರ್ಯಾಂಕ್ ಪಡೆದಿದ್ದಾರೆ. ಇವರು ಡಾಕ್ಟರ್ ರಾಜಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ಉದ್ಯೋಗ ಮಾಡುತ್ತಾ ಪರೀಕ್ಷೆಗೆ ತಯಾರಿ ನಡೆಸಿ ಸತತ 5 ಪ್ರಯತ್ನಗಳ ನಂತರ 6ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಸ್ಯಾಂಡಲ್ವುಡ್ನಲ್ಲಿ ಬಾಲನಟಿಯಾಗಿ ಜನರ ಮನಗೆದ್ದಿದ್ದ ಕೀರ್ತನ ರವರು ಇದೀಗ ಐಎಎಸ್ ಕನಸು ಹೊತ್ತಿದ್ದಾರೆ, ಇವರು ಯಶಸ್ವಿಯಾಗಿ ಕರ್ನಾಟಕದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಉತ್ತಮ ಸೇವೆ ನೀಡಲಿ.

Comments are closed.