ಅಮೆರಿಕದಲ್ಲಿ ಮನೆಗೆಲಸ ಮಾಡುತ್ತಿರುವ 150 ಚಿತ್ರ ನಟಿಸಿದ ಖ್ಯಾತ ನಟಿ..!

ಅದೃಷ್ಟ ಕರಾಬ್ ಆಗಿದ್ರೆ ಅರಮನೆ ಎಲ್ಲಿದ್ದರೂ ಬೀದಿಗೆ ಬೀಳುತ್ತಾರೆ ಅನ್ನುವುದು ನೂರಕ್ಕೆ ನೂರು ಸತ್ಯ ಕಣ್ರೀ. ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ, ನಟಿ ಕೃಷ್ಣವೇಣಿಗೂ ಸಹ ಆಗಿದ್ದು ಅದೇ. 1970 ರಲ್ಲಿ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ, ಈ ನಟಿ ಯವ್ವನದಲ್ಲಿ ಇದ್ದಾಗಲೇ ಖ್ಯಾತ ನಿರ್ದೇಶಕರಾಗಿದ್ದ ರಾಮಚಂದ್ರನ್ ಜೊತೆ ಪ್ರೀತಿಯಲ್ಲಿ ಬಿದ್ದರು, ಹಾಗೂ ಅವರನ್ನೇ ಮದುವೆಯಾಗುತ್ತಾರೆ ನಟಿ ಕೃಷ್ಣವೇಣಿ.

ಹೀಗೆ ಅವರ ವಿವಾಹ ಜೀವನ ಸುಖಕರವಾಗಿ ಸಾಗುತ್ತಿತ್ತು ಮತ್ತು ನಟಿ ಕೃಷ್ಣವೇಣಿ ಸಹ ಗಂಡ ರಾಮಚಂದ್ರನ್ ಜೊತೆ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ನಟಿ ಕೃಷ್ಣವೇಣಿ ಗೆ ಒಂದು ದೊಡ್ಡ ಆಘಾತ ಕಾದಿತ್ತು. ಗಂಡ ರಾಮಚಂದ್ರ ರವರು ರೋಡ್ ಮೇಲೆ ಆಕ್ಸಿಡೆಂಟಾಗಿ ವಿಧಿ ವಾಸವಾದರು ಇದು ಆಕಸ್ಮಿಕವಾಗಿ ನಡೆದ ಆಕ್ಸಿಡೆಂಟ್ ಎಂದು ನಿರ್ಧರಿಸಿದ್ದರು ಪೊಲೀಸರು, ಆದರೆ ಎಷ್ಟು ವರ್ಷ ಕಳೆದರೂ ಸಹ ಅಪಘಾತ ಮಾಡಿದ್ದು ಯಾರು ಎಂಬ ಸಂಗತಿ ತಿಳಿಯಲಿಲ್ಲ.

ಈ ಆಘಾತದಿಂದ ಹೊರಬಂದ ನಂತರ ನಟಿ ಕೃಷ್ಣವೇಣಿ ತೆಲುಗು ಚಿತ್ರರಂಗದಲ್ಲಿ ಹಲವರು ಪೋಷಕ ಹಾಗೂ ಕಾಮಿಡಿ ಪಾತ್ರಗಳನ್ನು ಮಾಡಿಕೊಂಡು ಬಂದರು. ಹಾಗೆಯೇ ತಮಗಿದ್ದ ಒಬ್ಬಳೇ ಮಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ನಟಿ ಕೃಷ್ಣವೇಣಿ. ಆದರೆ ಇವರಿಗೆ ಕಾಲ ಕಳೆಯುತ್ತಿದ್ದಂತೆ ಚಿತ್ರರಂಗದಲ್ಲಿನ ಅವಕಾಶಗಳು ಕಡಿಮೆಯಾದವು. ಆಗ ತಮ್ಮ ಜೀವನವನ್ನು ನಡೆಸುವುದಕ್ಕೆ ವಿಧಿ ಇಲ್ಲದೆ ಅಮೇರಿಕದ ಒಂದು ಮನೆಯಲ್ಲಿ  ಸುಮಾರು ಆರು ವರ್ಷಗಳ ಕಾಲ ಮನೆ ಕೆಲಸ ಮಾಡಲು ಸೇರಿಕೊಳ್ಳುತ್ತಾರೆ,

ಕೃಷ್ಣವೇಣಿ ಕೆಲಸಮಾಡುತ್ತಿದ್ದ ಮನೆ ಯಜಮಾನ ಈ ನಟಿ ನಮ್ಮ ಮನೆಯ ಕೆಲಸದವಳು ಎಂದು ಹೇಳಿಕೊಳ್ಳಲು ಬೇಜಾರಾಗಿ ಬದಲಿಗೆ ಇವರು ನಮ್ಮ ಅಜ್ಜಿ ನೋಡಲು ಖ್ಯಾತನಟಿ ಕೃಷ್ಣವೇಣಿ ರವರು ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ, ನಂತರ ಆರು ವರ್ಷಗಳ ಕಾಲ ಕೆಲಸ ಮಾಡಿ ಒಂದಷ್ಟು ಹಣವನ್ನು ಸಂಪಾದಿಸಿಕೊಂಡ ಈ ನಟಿ, ಹೈದರಾಬಾದಿನಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ. ಕೃಷ್ಣವೇಣಿ ಅವರ ತಂಗಿಯರಾದ ರಚಿತ ಮತ್ತು ರಾಗಿಣಿ ಈಗಲೂ ಸಹ ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರವನ್ನು ಮಾಡುತ್ತಿದ್ದಾರೆ.

150 ಚಿತ್ರಗಳಲ್ಲಿ ನಟಿಸಿರುವ ಕೃಷ್ಣವೇಣಿ ರವರು ಹಲವಾರು ಕಷ್ಟಗಳನ್ನು ತಮ್ಮ ಜೀವಮಾನದಲ್ಲಿ ನೋಡಿದ್ದಾರೆ. ಹಾಗೆ ನಾನು ಅನ್ನೋದನ್ನು ಪಕ್ಕಕ್ಕಿಟ್ಟು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿದ್ದಾರೆ. ಕಾಯಕವೇ ಕೈಲಾಸ ಅಲ್ವೇ ಕಳ್ಳತನ ಬಿಟ್ಟು ಯಾವ ಕೆಲಸ ಮಾಡಿದರು ನಾವು ಅದರ ಬಗ್ಗೆ ಹೆಮ್ಮೆ ಪಡಬೇಕು, ಇನ್ನಾದರೂ ಕೃಷ್ಣವೇಣಿ ರವರು ಸಂತೋಷವಾಗಿರಲಿ ಎಂದು ಆಶಿಸೋಣ.

Comments are closed.