ಒಳ್ಳೆಯವರಿಗೆ ಮಾತ್ರ ಯಾಕೆ ಕಷ್ಟ?? ಅರ್ಜುನನಿಗೆ ಉತ್ತರ ನೀಡಿದ ಕೃಷ್ಣ ! ನಿಜಕ್ಕೂ ಅದ್ಭುತ !

ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲೂ ಸಹ ಕಷ್ಟಗಳು ಇದ್ದೇ ಇರುತ್ತದೆ.ಆದರೂ ಸಹ ಜನರು ಕಷ್ಟಗಳನ್ನು ಎದುರಿಸುತ್ತಾ ಜೀವನ ನಡೆಸುತ್ತಿದ್ದಾರೆ.ಸಾಮಾನ್ಯವಾಗಿ ಜನರು ತಮಗೆ ಕಷ್ಟಗಳು ಬಂದ ತಕ್ಷಣವೇ ಮತ್ತೊಬ್ಬರನ್ನು ತೋರಿಸಿ ನೋಡು ಅವನು ಎಷ್ಟೆಲ್ಲಾ ಪಾಪಗಳನ್ನು ಮಾಡುತ್ತಿದ್ದಾನೆ. ಆದರೂ ಕೂಡ ಅವನು ಶ್ರೀಮಂತನಾಗಿ ಬೆಳೆಯುತ್ತಿದ್ದಾನೆ. ನಾವು ಯಾವುದೇ ರೀತಿಯ ಪಾಪಗಳನ್ನು ಮಾಡದೇ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೇವೆ. ಆದರೂ ಕೂಡ ನಮಗೆ ಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳನ್ನು ಕೆಲವರು ಹೇಳುತ್ತಾರೆ . ಅಂದರೆ ಒಳ್ಳೆಯವರಿಗೆ ಮಾತ್ರ ಕಷ್ಟ ಬರುತ್ತದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇದೇ ರೀತಿಯ ಪ್ರಶ್ನೆ ಒಮ್ಮೆ ಅರ್ಜುನನಿಗೆ ಕೂಡ ಮೂಡಿತ್ತು,‌ ಕೂಡಲೇ ಅರ್ಜುನನು ತಡ ಮಾಡದೆ ಭಗವಾನ್ ಶ್ರೀ ಕೃಷ್ಣನ ಬಳಿ ಈ ಪ್ರಶ್ನೆಯನ್ನು ಕೇಳುತ್ತಾನೆ.

ಅರ್ಜುನನ ಈ ಪ್ರಶ್ನೆಗೆ ಶ್ರೀ ಕೃಷ್ಣನು ಉದಾಹರಣೆ ಸಮೇತ ಉತ್ತರದ ನೀಡುವ ಮೂಲಕ ನಮಗೆಲ್ಲರಿಗೂ ಕೂಡ ಒಂದು ಜೀವನ ಪಾಠವನ್ನು ತಿಳಿಸಿದ್ದಾನೆ. ಇಂದು ಆ ಕಥೆಯ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೇ ಒಮ್ಮೆ ಅರ್ಜುನನು ಶ್ರೀಕೃಷ್ಣನ ಬಳಿ ಹೋಗಿ ವಾಸುದೇವನೇ ಎಲ್ಲರಿಗೂ ಒಳ್ಳೆಯದನ್ನು ಮಾಡುವವನು, ಒಳ್ಳೆಯವನು ಮತ್ತು ಸದಾಕಾಲ ಧರ್ಮದ ಹಾದಿಯಲ್ಲಿ ನಡೆಯುವವನು ಯಾಕೆ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿಯನ್ನು ಹೊಂದುತ್ತಾನೆ. ಸದಾ ಒಳ್ಳೆಯದು ಮಾಡಿದರೂ ಕೂಡ ಆತನಿಗೆ ಯಾಕೆ ಕಷ್ಟಗಳು ಬರುತ್ತವೆ ಎಂದು ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಮುಗುಳ್ನಕ್ಕ ಶ್ರೀಕೃಷ್ಣನು ನಾನು ನಿನಗೆ ಒಂದು ಕಥೆ ಹೇಳುತ್ತೇನೆ, ಈ ಕಥೆಯ ಮೂಲಕ ನಿನ್ನ ಪ್ರಶ್ನೆಗೆ ಖಂಡಿತಾ ಉತ್ತರ ಸಿಗಲಿದೆ ಎಂದು ಕಥೆ ಹೇಳುವುದನ್ನು ಆರಂಭಿಸುತ್ತಾನೆ.

ಅರ್ಜುನ, ಒಂದು ಊರಿನಲ್ಲಿ ಒಬ್ಬ ಉದ್ಯಮಿ ಮತ್ತು ಮತ್ತೊಬ್ಬ ಕಳ್ಳನಿದ್ದನು. ಉದ್ಯಮಿ ಬಹಳ ಒಳ್ಳೆಯ ಮನುಷ್ಯ, ವ್ಯಾಪಾರದಲ್ಲಿ ನಿಯತ್ತು, ಧರ್ಮ ಮತ್ತು ನೀತಿಯನ್ನು ಅನುಸರಿಸಿ ಜೀವನವನ್ನು ನಡೆಸುತ್ತಿದ್ದನು. ಪ್ರತಿದಿನವೂ ದೇವಾಲಯಕ್ಕೆ ಹೋಗಿ ದೇವರ ಬಳಿ ಮನವಿ ಮಾಡಿಕೊಂಡು ವ್ಯಾಪಾರ ಚೆನ್ನಾಗಿ ನಡೆಯುವಂತೆ ಬೇಡಿಕೊಳ್ಳುತ್ತಿದ್ದನು. ಯಾವುದೇ ತಪ್ಪು ಕೆಲಸಗಳನ್ನು ಆತ ಮಾಡುತ್ತಿರಲಿಲ್ಲ, ಆದರೂ ಕೂಡ ಆತನ ವ್ಯಾಪಾರ ಹೆಚ್ಚು ನಡೆಯುತ್ತಿರಲಿಲ್ಲ. ಇನ್ನು ಅದೇ ಊರಿನಲ್ಲಿ ಇದ್ದ ಕಳ್ಳನು ಪ್ರತಿದಿನ ‌ಹಲವಾರು ಕಳ್ಳತನಗಳನ್ನು ಮಾಡುತ್ತಿದ್ದನು, ಮನಸ್ಸಿಗೆ ಬಂದಂತೆ ಸುಳ್ಳು ಹೇಳಿಕೊಂಡು ಜೀವನ ನಡೆಸುತ್ತಿದ್ದನು. ಈತನು ಕೂಡ ದೇವಾಲಯಕ್ಕೆ ಬರುತ್ತಿದ್ದನು. ಆದರೆ ಅಲ್ಲಿ ಬರುವ ಜನರಿಂದ ಹಣ ಹಾಗೂ ಚಪ್ಪಲಿಗಳನ್ನು ಕದಿಯುವ ಕಾರಣಕ್ಕಾಗಿ ದೇವಾಲಯಕ್ಕೆ ತೆರಳುತ್ತಿದ್ದನು.

ಪ್ರತಿದಿನದ ಹಾಗೆ ಒಂದು ದಿನ ಚಪ್ಪಲಿ ಕದಿಯಲು ಕಳ್ಳನು ದೇವಸ್ಥಾನಕ್ಕೆ ಹೋಗುತ್ತಾನೆ. ಆದರೆ ಭಾರಿ ಮಳೆಯಿಂದ ದೇವಸ್ಥಾನದಲ್ಲಿ ಜನರು ಹೆಚ್ಚಾಗಿ ಇರುವುದಿಲ್ಲ, ಇದೇ ಸರಿಯಾದ ಸಮಯ ಎಂದು ತಿಳಿದ ಕಳ್ಳನು ಅರ್ಚಕನ ಕಣ್ಣು ತಪ್ಪಿಸಿ ಬಹಳ ಸುಲಭವಾಗಿ ದೇವರ ಹುಂಡಿಯ ದುಡ್ಡನ್ನು ಎತ್ತುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಎಂದಿನಂತೆ ವ್ಯಾಪಾರಿಯು ದೇವಸ್ಥಾನಕ್ಕೆ ತೆರಳಿದ, ಈತ ಹೋಗಿ ಕೆಲವು ಕ್ಷಣಗಳ ಬಳಿಕ ಮತ್ತು ಬಂದು ನೋಡಿ ದೇವಸ್ಥಾನದಲ್ಲಿ ಇರುವುದು ವ್ಯಾಪಾರಿಯೊಬ್ಬನೇ ಆದ ಕಾರಣ ಆತನೇ ದೇವರ ಹುಂಡಿಯ ಹಣವನ್ನು ಕದ್ದಿದ್ದಾನೆ ಎಂದು ಹೇಳಿ ಸುತ್ತಮುತ್ತಲಿನ ಜನರನ್ನು ಸೇರಿಸುತ್ತಾನೆ. ಜನರು ವ್ಯಾಪಾರಿಯೇ ಕಳ್ಳತನ ಮಾಡಿದ್ದಾನೆ ಎಂದು ಕೊಂಡು ಮನಬಂದಂತೆ ನಿಂದಿಸುತ್ತಾರೆ ಹಾಗೂ ಕೈ ಮಾಡುತ್ತಾರೆ.

ಇದರಿಂದ ಬಾರಿ ಅವಮಾನಕ್ಕೆ ಒಳಗಾದ ವ್ಯಾಪಾರಿಯು ಬೇಸರದಿಂದ ತನ್ನ ಮನೆಗೆ ವಾಪಸ್ಸಾಗುವಾಗ ದಾರಿಯಲ್ಲಿ ಒಂದು ವಾಹನ ಬಂದು ಡಿಕ್ಕಿ ಹೊಡೆಯುತ್ತದೆ. ಚಿಕ್ಕಪುಟ್ಟ ಪೆ’ಟ್ಟಿನಿಂದ ವ್ಯಾಪಾರಿಯು ಪ್ರಾ’ಣಾಪಾಯದಿಂದ ಪಾರಾಗುತ್ತಾನೆ, ಅದೇ ಸಮಯದಲ್ಲಿ ಅಲ್ಲಿದ್ದ ಕಳ್ಳನಿಂದ ನೂರಕ್ಕೂ ಹೆಚ್ಚು ಚಿನ್ನದ ನಾಣ್ಯಗಳಿದ್ದ ಒಂದು ಬ್ಯಾಗ್ ಸಿಗುತ್ತದೆ. ಇದನ್ನು ಕಣ್ಣಾರೆ ಕಂಡ ವ್ಯಾಪಾರಿಯು ನಾನೇನು ತಪ್ಪು ಮಾಡಿದೇ ನನಗೆ ಯಾಕೆ ಇಂತಹ ಶಿಕ್ಷೆ, ಆ ಕಳ್ಳನಿಗೆ ಚಿನ್ನದ ನಾಣ್ಯಗಳು ಕೂಡ ಸಿಕ್ಕಿದವು ಎಂದು ಮನಸ್ಸಿನಲ್ಲಿಅಂದುಕೊಂಡು ಬೇಜಾರಾಗಿ ಮನೆಗೆ ಬಂದ ತಕ್ಷಣವೇ ದೇವರ ಫೋಟೋಗಳನ್ನು ಹೊರಗೆ ಹಾಕಿ ದೇವರ ಮೇಲೆ ನಂಬಿಕೆ ಇಲ್ಲದೆ ತನ್ನ ಜೀವನವನ್ನು ಸಾಗಿಸುತ್ತಾನೆ. ಕೆಲವು ವರ್ಷಗಳ ಬಳಿಕ ಕಳ್ಳ ಹಾಗೂ ಉದ್ಯಮಿ ಇಬ್ಬರಿಗೂ ಆಯಸ್ಸು ಮುಗಿಯುತ್ತದೆ.

ಇಬ್ಬರು ಯಮಲೋಕಕ್ಕೆ ತೆರಳುತ್ತಾರೆ, ಅಂದು ಕಳ್ಳನನ್ನು ಕಂಡ ವ್ಯಾಪಾರಿಯು ಯಮ ಧರ್ಮರಾಜನನ್ನು ನೇರವಾಗಿ ಕೇಳಿ ಬಿಡುತ್ತಾನೆ. ಓ ಯಮ ಧರ್ಮರಾಜ ‌ನನ್ನ ಜೀವನದಲ್ಲಿ ಹಲವಾರು ಕಷ್ಟಗಳನ್ನು ನಾನು ಕಂಡಿದ್ದೇನೆ ಹಾಗೂ ಈ ಕಳ್ಳನು ಕೂಡ ಯಾರೆಂದು ನನಗೆ ತಿಳಿದಿದೆ ಎಂದು ಸಂಪೂರ್ಣವಾಗಿ ಇಬ್ಬರ ನಡುವೆ ನಡೆದ ಪ್ರಸಂಗಗಳನ್ನು ವಿವರಿಸುತ್ತಾನೆ. ಹೀಗೆ ಮೇಲಿನ ಎಲ್ಲಾ ವಿವರಣೆಗಳನ್ನೂ ನೀಡಿದ ಬಳಿಕ ಉದ್ಯಮಿಯೂ ಯಾಕೆ ನನಗೆ ಕಷ್ಟ ಬಂದಿತ್ತು ಎಂದು ಯಮ ಧರ್ಮರಾಜನನ್ನು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರಿಸಿದ ಯಮಧರ್ಮರಾಜ ಓ ಉದ್ಯಮಿಯೇ ನಿನ್ನ ಆಯಸ್ಸು ಮುಗಿದು ಬಹಳ ವರ್ಷಗಳು ಕಳೆದಿವೆ, ನೀನು ಅಂದು ದೇವಸ್ಥಾನಕ್ಕೆ ತೆರಳಿದ್ದ ದಿನವೇ ನಿನ್ನ ಆಯಸ್ಸು ಮುಗಿದಿತ್ತು.

ಆದರೆ ನೀನು ಮಾಡಿದ ಒಳ್ಳೆಯ ಕೆಲಸಗಳಿಂದ ದೊರೆತ ಪುಣ್ಯದಿಂದ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ನೀನು ಹೊರಗಡೆ ಹೋಗುವ ಸಮಯವನ್ನು ಹೆಚ್ಚಿಸಿತು, ಇದರಿಂದ ನಿನ್ನ ವಾಹನಕ್ಕೆ ಚಿಕ್ಕ ವಾಹನವೊಂದು ಡಿ’ಕ್ಕಿ ಹೊ’ಡೆಯುತು. ಆಗ ನಿನಗೆ ಹೆಚ್ಚಿನ ಗಾ’ಯಗಳು ಕೂಡ ಆಗಲಿಲ್ಲ. ಇನ್ನು ಆ ಕಳ್ಳನ ಕುರಿತು ಹೇಳುವುದಾದರೆ ಆತನಿಗೆ ಆತನ ಜಾತಕದ ಪ್ರಕಾರ ಮರು ದಿನದಿಂದ ರಾಜಯೋಗ ಆರಂಭವಾಗಬೇಕಾಗಿತ್ತು. ಆದರೆ ಆ ದಿನ ಆತನು ಮಾಡಿದ ಕೆಲಸದಿಂದ ಆತ ರಾಜ ಯೋಗದಿಂದ ದೂರವಾದ. ನಿನ್ನ ಆಯಸ್ಸು ಮುಗಿದಿದ್ದರೂ ಸಹ ನೀನು ಮಾಡಿದ ಒಳ್ಳೆಯ ಕಾರ್ಯಗಳು ಇಷ್ಟು ವರ್ಷ ನಿನ್ನನ್ನು ಬದುಕುವಂತೆ ಮಾಡಿತು.ಒಂದು ವೇಳೆ ಆ ರೀತಿಯ ಕೆಲಸಗಳನ್ನು ನೀನು ಮಾಡಿ ಸುಖವಾಗಿ ಬದುಕಿದ್ದರೇ, ನೀನು ಇದಕ್ಕೂ ಮುನ್ನವೇ ಇಲ್ಲಿಗೆ ಬರಬೇಕಾಗಿತ್ತು ಎಂದರು. ಈ ಕಥೆಯ ಪ್ರಮುಖ ಸಾರಾಂಶವೆಂದರೆ ನೀವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಕೂಡ ನಿಮಗೆ ಕಷ್ಟ ಗಳು ಯಾಕೆ ಬರುತ್ತೇವೆ ಎಂದರೇ ಅದಕ್ಕಿಂತ ಹೆಚ್ಚಿನ ಕಷ್ಟಗಳನ್ನು ನಿಮ್ಮನ್ನು ತಲುಪದಂತೆ ಕಾಪಾಡಿ ನೀವು ಎದುರಿಸಬಹುದಾದ ಚಿಕ್ಕ ಚಿಕ್ಕ ಕಷ್ಟಗಳನ್ನು ದೇವರು ನೀಡುತ್ತಿದ್ದಾನೆ ಎಂದರ್ಥ. ಆದಕಾರಣ ಸದಾ ಒಳ್ಳೆಯ ಹಾದಿಯಲ್ಲಿ ನಡೆದು ಇರುವಷ್ಟು ದಿನ ಸುಖವಾಗಿ ಬಾಳಿ.

Comments are closed.