ನಗರದಲ್ಲಿ ಕೆಲಸ ಬಿಟ್ಟು, ನಿಮ್ಮ ಊರಿನಲ್ಲಿ ಸಿಗುವ ಮಾವಿನ ಎಲೆಗಳಿಂದ ಲಕ್ಷಾಂತರ ಆದಾಯ ಗಳಿಸುವುದು ಹೇಗೆ ಗೊತ್ತೇ?? ಹೇಗೆ ಮಾರಾಟ ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಮ್ಮಲ್ಲಿ ಸ್ವಲ್ಪ ಬುದ್ಧಿವಂತಿಕೆ, ಸ್ಮಾರ್ಟ್ನೆಸ್, ಆಲೋಚನಾಶಕ್ತಿ ಇದ್ರೆ ಕೂಡ ಮಾಡಬಹುದು. ಮನಸ್ಸಿದ್ದಲ್ಲಿ ಮಾರ್ಗ ಅಂತಾರಲ್ಲ ಹಾಗೆ. ಉದಾಹರಣೆಗೆ ಮಾವಿನಕಾಯಿಯನ್ನು ಮಾವಿನಹಣ್ಣನ್ನು ಮಾರಾಟಮಾಡಿ ವ್ಯಾಪಾರ ಮಾಡುವುದು ನಿಮಗೆ ಗೊತ್ತಿರಬಹುದು. ಒಣಗಿದ ಮಾವಿನ ಎಲೆಗೂ ಎಂಥ ಬೇಡಿಕೆ ಇದೆ ಗೊತ್ತಾ. ನೀವು ಸ್ವಲ್ಪ ಮುತುವರ್ಜಿಯಿಂದ ಈ ವ್ಯಾಪಾರವನ್ನು ಏನಾದರೂ ಮಾಡಲು ಶುರುಮಾಡಿದರೆ ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳೋಣ.

ಹಬ್ಬ-ಹರಿದಿನಗಳಲ್ಲಿ ಅಥವಾ ಯಾವುದಾದರೂ ವಿಶೇಷ ಸಮಾರಂಭಗಳಲ್ಲಿ ಮಾವಿನ ಎಲೆಗಳ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸುವುದು ವಾಡಿಕೆ. ಹಾಗಾಗಿ ಆನ್ಲೈನ್ ಅಲ್ಲಿಯೂ ಕೂಡ ಮಾವಿನ ಎಲೆಗಳು ಈಗ ಲಭ್ಯ. ಆದರೆ ಇದೀಗ ಒಣ ಮಾವಿನ ಎಲೆಗಳಿಗೆ ತುಂಬಾನೇ ಬೇಡಿಕೆ ಇದೆ. ಒಣ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಹಾಗಾಗಿ ಪೆಸ್ಟ್ ಗಳ ತಯಾರಿಕೆಯಲ್ಲಿ ಒಣ ಮಾವಿನ ಎಲೆಗಳ ಪುಡಿಯನ್ನು ಬಳಸಲಾಗುತ್ತದೆ.

ಕೇರಳದ ಟೂತ್ಪೇಸ್ಟ್ ಉತ್ಪಾದನಾ ಕಂಪನಿಯೊಂದು ಒಣ ಮಾವಿನ ಎಲೆಗಳ ಪೇಸ್ಟನ್ನು ತಯಾರಿಸುತ್ತದೆ. ಹಾಗೆಯೇ ಹಲ್ಲಿನ ಪುಡಿಗಳಲ್ಲಿಯೂ ಬಳಸಲಾಗುತ್ತದೆ. ಹಾಗಾಗಿ ರೈತರಿಂದ ನೇರವಾಗಿ ಒಣ ಮಾವಿನ ಎಲೆಗಳನ್ನು ಕಂಡುಕೊಳ್ಳುತ್ತಿದೆ. ಕೇರಳದ ಕಾಸರಗೋಡಿನಲ್ಲಿ ವ್ಯಾಪಾರ ಜೋರಾಗಿದ್ದು, ಒಣ ಮಾವಿನ ಎಲೆಗಳಿಗೆ ಸುಮಾರು 150 ರೂಪಾಯಿ ಪ್ರತಿ ಕೆಜಿಗೆ ನೀಡಲಾಗುತ್ತದೆ. ಕೇರಳದ ಎನೋ ವೆಲ್ ನೆಸ್ ನಿಕಾ ಕಂಪನಿಯು ಒಣಗಿದ ಎಲೆಗಳಿಂದ ಸಾವಯವ ಟೂತ್ ಪೇಸ್ಟ್ ತಯಾರಿಸುತ್ತಿದ್ದು, ಕೇರಳದ ಕಣ್ಣೂರು, ಕಾಸರಗೋಡು ಭಾಗದ ಎಲ್ಲ ಗ್ರಾಮಗಳಲ್ಲಿ ಮಾವಿನ ಎಲೆ ಸಂಗ್ರಹಿಸುತ್ತಿದೆ. ಪೇಪೆಂಟ್ ನ್ನೂ ಕೂಡ ಪಡೆದುಕೊಂಡಿದೆ ಈ ಕಂಪನಿ.

Dried Mango Leaves | ನಗರದಲ್ಲಿ ಕೆಲಸ ಬಿಟ್ಟು, ನಿಮ್ಮ ಊರಿನಲ್ಲಿ ಸಿಗುವ ಮಾವಿನ ಎಲೆಗಳಿಂದ ಲಕ್ಷಾಂತರ ಆದಾಯ ಗಳಿಸುವುದು ಹೇಗೆ ಗೊತ್ತೇ?? ಹೇಗೆ ಮಾರಾಟ ಮಾಡಬೇಕು ಗೊತ್ತೇ??
ನಗರದಲ್ಲಿ ಕೆಲಸ ಬಿಟ್ಟು, ನಿಮ್ಮ ಊರಿನಲ್ಲಿ ಸಿಗುವ ಮಾವಿನ ಎಲೆಗಳಿಂದ ಲಕ್ಷಾಂತರ ಆದಾಯ ಗಳಿಸುವುದು ಹೇಗೆ ಗೊತ್ತೇ?? ಹೇಗೆ ಮಾರಾಟ ಮಾಡಬೇಕು ಗೊತ್ತೇ?? 2

ಮಾವಿನ ಎಲೆಗಳನ್ನು ಸ್ವಾಭಾವಿಕವಾಗಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ನಿಕ ಕಂಪನಿಯು ಈ ಮಾವಿನ ಎಲೆಗಳನ್ನು ಖರೀದಿಸುವುದು ಮಾತ್ರವಲ್ಲದೆ, ಹಣ ಬಯಸದೇ ಇರುವ ರೈತರಿಗೆ ಕಂಪನಿಯಲ್ಲಿ ಪಾಲುದಾರಿಕೆಯನ್ನು ಕೊಡುತ್ತಿದೆ. ಇಂಡಿಯನ್ ಪ್ರತಿ ಎರಡು ಕೆಜಿ ಮಾವಿನ ಎಲೆಗಳಿಗೆ ಬದಲಾಗಿ ಒಂದು ಪಾಲನ್ನು ನೀಡುತ್ತಿದೆ. ಒಣಗಿದ ಮಾವಿನ ಎಲೆಗಳನ್ನು ಸಂಗ್ರಹಿಸಲು ಸಿಬ್ಬಂದಿಗಳನ್ನು ನೇಮಕ ಮಾಡಿರುವ ಈ ಕಂಪನಿ ಗ್ರಾಮ ಪಂಚಾಯತಿಗಳಿಂದ ಕಚ್ಚಾವಸ್ತುಗಳನ್ನು ಖರೀದಿಸುತ್ತದೆ. ನಿಕ ಕಂಪನಿ ತನ್ನ ಹೊಸ ಪ್ರಯತ್ನದಲ್ಲಿ ಯಶಸ್ಸನ್ನು ಕಂಡರೆ ದೇಶಾದ್ಯಂತ ಒಣ ಮಾವಿನ ಎಲೆ ಗಳಿಗೆ ಬೇಡಿಕೆ ದುಪ್ಪಟ್ಟಾಗುವುದಂತೂ ಸುಳ್ಳಲ್ಲ.

Comments are closed.