ಹಾಡು, ನಿರೂಪಣೆಯಿಂದ ಮಂಗ್ಲಿ ರವರು ಗಳಿಸಿರುವ ಆಸ್ತಿ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಬರ್ಟ್ ಸಿನಿಮಾದ ತೆಲುಗಿನ ಭಾಷೆಯಲ್ಲಿ ಕಣ್ಣೆ ಅದರಿಂದ ಹಾಡಿಗೆ ಧ್ವನಿ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಆಂಧ್ರ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡ ಮಂಗ್ಲಿ ರವರ ಕುರಿತು ಇದೀಗ ಎಲ್ಲಿ ನೋಡಿದರೂ ಸುದ್ದಿಗಳು ಪ್ರಸಾರವಾಗುತ್ತಿವೆ, ಖ್ಯಾತ ನಿರೂಪಕಿಯಾಗಿ ಗಾಯಕಿಯಾಗಿ ಹಾಗೂ ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಮಂಗ್ಲಿ ರವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಪೂರ್ಣ ಸಮಯವನ್ನು ಗಾಯಕಿಯಾಗಿ ಕಳೆಯುತ್ತಿದ್ದಾರೆ.

ತೆಲಂಗಾಣ ಭಾಷೆಯ ಶೈಲಿಯಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿರುವ ಮಂಗ್ಲಿ ರವರು ಕೇವಲ ಸಿನಿಮಾದ ಹಾಡುಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಲ್ಲ, ಬದಲಾಗಿ ತಮ್ಮದೇ ಆದ ಯುಟ್ಯೂಬ್ ಚಾನೆಲ್ ನಿರ್ಮಾಣ ಮಾಡಿ ಅದರಲ್ಲಿಯೂ ಕೂಡ ಜಾನಪದ ಹಾಡುಗಳು ಸೇರಿದಂತೆ ಇನ್ನಿತರ ಸಿನಿಮಾದ ಕವರ್ ಹಾಡುಗಳನ್ನು ಹಾಗೂ ಇನ್ನಿತರ ಕೆಲವೊಂದು ಯುಟ್ಯೂಬ್ ಚಾನೆಲ್ ಗಳ ಜೊತೆ ಒಪ್ಪಂದ ಮಾಡಿಕೊಂಡು ವಿವಿಧ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಹೀಗೆ ವಿವಿಧ ಹಾಡುಗಳಿಗೆ ಧ್ವನಿ ನೀಡಿ ಹಾಗೂ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಮಂಗ್ಲಿ ರವರು ಇಲ್ಲಿಯವರೆಗೂ ತಾವು ಸರಿ ಸುಮಾರು ಮೂರು ಕೊತಿಗೂ ಹೆಚ್ಚು ರೂಪಾಯಿಗಳನ್ನು ಕೇವಲ ಹಾಡುಗಳಿಂದ ಹಾಗೂ ನಿರೂಪಕಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಂಪಾದನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಮೂಲತಹ ಬಡ ಕುಟುಂಬದಲ್ಲಿ ಜನಿಸಿರುವ ಇವರಿಗೆ ಮತ್ಯಾವುದೇ ಆಸ್ತಿ ಇಲ್ಲ, ಇವರ ಕಲೆಯ ಇವರಿಗೆ ಆಸ್ತಿಯಾಗಿ ಬದಲಾಗಿದೆ.

Comments are closed.