ಮಸಾಲಾ ಚಿತ್ರಾನ್ನವನ್ನು ಹೀಗೆ ಮಾಡಿ ನೋಡಿ, ಎಲ್ಲರೂ ಪ್ಲೇಟ್ ಖಾಲಿ ಮಾಡ್ತಾರೆ, ಒಂದು ಚೂರು ಜಾಸ್ತಿ ತಿಂತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಸಾಲ ಚಿತ್ರಾನ್ನ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಸಾಲ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು: 2 ಟೊಮೇಟೊ, 1 ಈರುಳ್ಳಿ, ಅರ್ಧ ಕ್ಯಾಪ್ಸಿಕಂ, 4 – 5 ಚಮಚ ಹಸಿ ಬಟಾಣಿ, 4 ಚಮಚ ಎಣ್ಣೆ, 1 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆ, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, 4 ಬ್ಯಾಡಗಿ ಮೆಣಸಿನಕಾಯಿ, 2 – 3 ಹಸಿಮೆಣಸಿನಕಾಯಿ, 1 ಚಮಚ ಗರಂ ಮಸಾಲ, 1 ಚಮಚ ಅಚ್ಚ ಖಾರದ ಪುಡಿ, 5 – 6 ಗೋಡಂಬಿ, ಸ್ವಲ್ಪ ಕಸುರಿ ಮೇತಿ, 1 ಸ್ಟಾರ್ ಹೂವು, ಅರ್ಧ ಇಂಚು ಚಕ್ಕೆ, 1 ಏಲಕ್ಕಿ, 2 ಲವಂಗ, 1 ಪಲಾವ್ ಎಲೆ, 1 ಲೋಟ ಅಕ್ಕಿಯಲ್ಲಿ ಮಾಡಿದ ಅನ್ನ. ಕೊನೆಯಲ್ಲಿ ಯೌಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ಸಂಪೂರ್ಣ ನೋಡುವುದನ್ನು ಮರೆಯಬೇಡಿ.

ಮಸಾಲ ಚಿತ್ರಾನ್ನ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಪಲಾವ್ ಎಲೆ, ಕಸುರಿ ಮೇತಿ, ಸ್ಟಾರ್ ಹೂವು,1 ಏಲಕ್ಕಿ, 2 ಲವಂಗ, ಅರ್ಧ ಇಂಚು ಚಕ್ಕೆ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ 30 ಸೆಕೆಂಡ್ ಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕ್ಯಾಪ್ಸಿಕಂ ನನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಗರಂಮಸಾಲಾ, ಅಚ್ಚಕಾರದ ಪುಡಿ, ಅರಿಶಿನ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೊಟೊ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಹಸಿ ಬಟಾಣಿಯನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ಮಾಡಿಕೊಂಡ ಅನ್ನವನ್ನು ಹಾಕಿಕೊಳ್ಳಿ. ಮತ್ತೊಂದು ಕಡೆಗೆ ಗ್ಯಾಸ್ ಮೇಲೆ ಸಣ್ಣ ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆಯನ್ನು ಹಾಕಿ ಸಿಡಿಯಲು ಬಿಡಿ. ನಂತರ ಇದಕ್ಕೆ ಗೋಡಂಬಿ, ಕಡ್ಲೆಬೇಳೆ, ಉದ್ದಿನಬೇಳೆ, ಬ್ಯಾಡಿಗೆ ಮೆಣಸಿನಕಾಯಿ, ಕರಿಬೇವನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ಈ ಒಗ್ಗರಣೆಯನ್ನು ದೊಡ್ಡ ಬಾಣಲಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ಮಸಾಲ ಚಿತ್ರಾನ್ನ ಸವಿಯಲು ಸಿದ್ದ.

Comments are closed.