ಥಟ್ ಅಂತ ಮನೆಯಲ್ಲಿಯೇ 5 ನಿಮಿಷದಲ್ಲಿ ಮಾಡಿ ಮಶ್ರೂಮ್ ವೆಜ್ ಸ್ಟಾಟರ್, ಯಾವುದೇ ಹೋಟೆಲ್ ಗಿಂತ ಕಡಿಮೆ ಇಲ್ಲದಂತೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ಟಾಟರ್ ಗಳನ್ನು ತಿನ್ನಬೇಕು ಅಂದ್ರೆ ಸಾಮಾನ್ಯವಾಗಿ ಹೋಟೆಲ್ ಗಳಿಗೇ ಹೋಗಬೇಕು. ಯಾಕೆಂದ್ರೆ ಸ್ಟಾಟರ್ ಗಳನ್ನು ರುಚಿಯಾಗಿದ್ರೆ ಮಾತ್ರ ತಿನ್ನಬಹುದು. ಮನೆಯಲ್ಲಿ ಆ ಟೇಸ್ಟ್ ಬರೋಕೆ ಸಾಧ್ಯನೇ ಇಲ್ಲ ಅನ್ನೋವಂಥವರು ಈಗ ನಾವು ಹೇಳುವ ರೆಸಿಪಿಯನ್ನ ಒಮ್ಮೆ ಟ್ರೈ ಮಾಡಿ. ಮತ್ಯಾವತ್ತೂ ಸ್ಟಾಟರ್ ತಿನ್ನೋಕೆ ಹೋಟೆಲ್ ಗೆ ಹೋಗೊದೇ ಇಲ್ಲ ನೀವು!

ಸ್ಟಾಟರ್ ಮಾಡಲು ಬೇಕಾಗುವ ಪದಾರ್ಥಗಳು: ೩೦-೪೦ ಎಸಳು ಬೆಳ್ಳುಳ್ಳಿ, ೪-೫ ಬ್ಯಾಡಗಿ ಮೆಣಸಿನ ಕಾಯಿ, ಒಂದು ಚಮಚ ಕೊತ್ತಂಬರಿ, ತಲಾ ಅರ್ಧ ಚಮಚ ಜೀರಿಗೆ, ಬೆಲ್ಲದ ಪುಡಿ, ಅರಿಶಿನ, ಒಂದು ನಿಂಬೆ ಗಾತ್ರದ ಹುಣಸೆಹಣ್ಣು ಹಾಗೂ ಸ್ವಲ್ವ ನೀರು. ಉಪ್ಪು ರುಚಿಗೆ, ಮಶ್ರೂಮ್ ೨೦೦ ಗ್ರಾಂ.

ಮಾಡುವ ವಿಧಾನ: ಮಸಾಲೆಗೆ ಒಂದು ಮಿಕ್ಸರ್ ಜಾರ್ ಗೆ ೩೦-೪೦ ಎಸಳು ಬೆಳ್ಳುಳ್ಳಿ, ೪-೫ ಬ್ಯಾಡಗಿ ಮೆಣಸಿನ ಕಾಯಿ, ಒಂದು ಚಮಚ ಕೊತ್ತಂಬರಿ, ತಲಾ ಅರ್ಧ ಚಮಚ ಜೀರಿಗೆ, ಬೆಲ್ಲದ ಪುಡಿ, ಅರಿಶಿನ, ಒಂದು ನಿಂಬೆ ಗಾತ್ರದ ಹುಣಸೆಹಣ್ಣು ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ ಬೆಣ್ಣೆಯನ್ನು ಹಾಕಿ. ಎಣ್ಣೆಯನ್ನೂ ಕೂಡ ಬಳಸಬಹುದು. ಇದಕ್ಕೆ ಕರಿಬೇವಿನ ಎಲೆ, ಸ್ವಲ್ಪ ಬಡೇಸೊಪ್ಪು ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ರುಬ್ಬಿಟ್ಟುಕೊಡ ಮಸಾಲೆಯನ್ನು ಅಗತ್ಯಕ್ಕೆ ಅನುಸಾರವಾಗಿ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಮಶ್ರೂಮ್ ಅಥವಾ ಆಣಬೆಯನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಮುಚ್ಚಲ ಮುಚ್ಚಿ ಮಧ್ಯಮ ಉರಿಯಲ್ಲಿ ೨-೩ ನಿಮಿಷ ಬೇಯಿಸಿ. ಚೆನ್ನಾಗಿ ಬೆಂದ ನಂತರ ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅತ್ಯದ್ಭುತ ರುಚಿಯನ್ನು ಹೊಂದಿರುವ ಸ್ಟಾಟರ್ ರೆಡಿ. ಈ ಮಸಾಲೆಯನ್ನು ಮಾಡಿ ಪ್ರಿಡ್ಜ್ ನಲ್ಲಿಟ್ತುಕೊಂಡು ನಿಮಗೆ ಬೇಕಾದಾಗ ಬೇಕಾದ ತರಕಾರಿಯನ್ನು ಬಳಸಿ ಸ್ಟಾಟರ್ ಮಾಡಿಕೊಳ್ಳಬಹುದು. ಈ ಕೆಳಗಿನ ವಿಡಿಯೋದಲ್ಲಿ ಈ ರೆಸಿಪಿ ಮಾಡಿ ತೋರಿಸಲಾಗಿದೆ ನೋಡಿ.

Comments are closed.