ಮೆಂತ್ಯಸೊಪ್ಪಿನಿಂದ ಈ ತರ ಭಜ್ಜಿ ಮಾಡ್ಕೊಂಡು ತಿಂದ್ರೆ ಮತ್ತೆ ಮತ್ತೆ ತಿನಬೇಕು ಅನ್ನಿಸತ್ತೆ ನೋಡಿ

ನಮಸ್ಕಾರ ಸ್ನೇಹಿತರೇ, ನಾವಿಂದು ಕಲ್ಯಾಣ ಕರ್ನಾಟಕದ ಒಂದು ಸ್ಪೇಷಲ್ ರೆಸಿಪಿ ಜೊತೆ ಬಂದಿದ್ದೇವೆ. ನಾವು ಹೇಳಿದ ಈ ರೆಸಿಪಿಯನ್ನೊಮ್ಮೆ ಮನೆಯಲ್ಲಿ ಮಾಡಿನೋಡಿ. ಮತ್ತೆ ಯಾವತ್ತೂ ಮನೆಯಲ್ಲಿ ಮಾಡ್ತಾನೇ ಇರ್ತಿರಿ.

ಮೆಂತ್ಯ ಸೊಪ್ಪಿನ ಬಜ್ಜಿ ಮಾಡೋದಕ್ಕೆ ಬೇಕಾದ ಸಾಮಗ್ರಿಗಳು ಹೀಗಿವೆ: ಬೇಯಿಸಿಕೊಂಡ ಅವರೇ ಕಾಳು ಒಂದು ಕಪ್, ಬೇಯಿಸಿಕೊಂಡ ಕಡಲೇ ಕಾಯಿ ಹಾಗೂ ಕ್ಯಾರೇಟ್ ಸ್ವಲ್ಪ, ಹೆಚ್ಚಿಟ್ಟುಕೊಂಡ ಪಾಲಾಕ್ ಸೊಪ್ಪು ಅರ್ಧ ಕಪ್, ಮೆಂತ್ಯ ಸೊಪ್ಪು ಒಂದು ಕಪ್, ಹುಣಸೇರಸ ಸ್ವಲ್ಪ, ಮೆಣಸಿಕಾಯಿ ಪೇಸ್ಟ್ ಸ್ವಲ್ಪ (ಖಾರಾ ಜಾಸ್ತಿ ಬೇಕಿದ್ರೆ ಜಾಸ್ತಿ ಮೆಣಸಿನ ಕಾಯಿ ಬಳಸಬಹುದು), ಕೊತ್ತಂಬರಿ ಸೊಪ್ಪು ಸ್ವಲ್ಪ, ಕಡಲೇ ಹಿಟ್ಟು ಅರ್ಧ ಕಪ್, ಒಗ್ಗರಣೆಗೆ ಕರಿಬೇವಿನ ಸೊಪ್ಪು, ಅಡುಗೆ ಎಣ್ಣೆ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಸಾಸಿವೆ, ಜೀರಿಗೆ , ಅರಿಶಿನ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮೆಂತ್ಯ ಸೊಪ್ಪಿನ ಪಲ್ಯ ಅಥವಾ ಭಜ್ಜಿ ಮಾಡುವ ವಿಧಾನ: ಮೊದಲಿಗೆ ಹುಣ್ಸೆ ಹಣ್ಣಿನ ರಸವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್ ಸೇರಿಸಿ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಗ್ಗರಣೆಗೆ ಮಾಡಬೇಕು. ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ ಹಾಗೂ ಕರಿಬೇವನ್ನು ಹಾಕಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈ ಮಿಶ್ರಣಕ್ಕೆ ಮಾಡಿಟ್ಟುಕೊಂಡ ಹುಳಿ ರಸ ಮಿಶ್ರಣವನ್ನು ಹಾಗೂ ನೀರನ್ನು ಹಾಕಿ ಕುದಿಸಿ. ಇದಕ್ಕೆ ಮೆಂತ್ಯ ಸೊಪ್ಪು ಹಾಗೂ ಪಾಲಾಕ್ ಸೊಪ್ಪನ್ನು ಹಾಕಿಕೊಳ್ಳಿ, ನಂತರ ಅವರೆ ಕಾಳನ್ನು ಹಾಕಿ, ಶೇಂಗಾ ಅಥವಾ ಕಡಲೇಕಾಯನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. 2ನಿಮಿಷ ಕುದಿಸಿ.

ಈಗ ಕಡಲೆ ಹಿಟ್ಟನ್ನು ನೀರು ಹಾಕಿ ಗಂಟು ಗಂಟಾಗದಂತೆ ಕಲಸಿಕೊಳ್ಳಿ. ಇದನ್ನು ಕುದಿಬಂದ ಮಿಶ್ರಣಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಾದ ನಂತರ ಅಗತ್ಯ ಇದ್ದರೆ ಸ್ವಲ್ಪ ಉಪ್ಪನ್ನು ಸೇರಿಸಿದರೆ ಮೆಂತ್ಯ ಸೊಪ್ಪಿನ ಜಬ್ಬಿ ರೆಡಿ. . ಇದನ್ನು ಕಡುಬಿನ ಜೊತೆ ಹಬ್ಬದ ಸಮಯದಲ್ಲಿ ಮಾಡಿಕೊಂಡು ತಿನ್ನಬಹುದು.

Comments are closed.