ಹೊಸ ವರ್ಷ ಬಂತು ಎಂದು ಮನೆಗೆ ತಂದಿರುವ ಕ್ಯಾಲೆಂಡರ್ ಅನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನೀವು ವಾಸ್ತು ಶಾಸ್ತ್ರವನ್ನು ನಂಬುವುದಾದರೆ, ಹೊಸ ವರ್ಷಕ್ಕೆ ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಹಾಕಿದರೆ ಒಳ್ಳೆಯದು ಎಂಬುದನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಮನೆಯಲ್ಲಿ ಹಳೆಯ ಕ್ಯಾಲೆಂಡರ್ ಆಗಲಿ ಪಂಚಾಂಗವಾಗಲಿ ಇದ್ದರೆ ಅದು ಅಶುಭ ಎಂದು ಕರೆಸಿಕೊಳ್ಳುತ್ತದೆ. ಇದು ಜೀವನದಲ್ಲಿ ಹಲವು ಅಡೆತಡೆಗಳಿಗೆ ಕಾರಣವಾಗಬಹುದು. ಹಾಗೆಯೇ ಮನೆಯಲ್ಲಿ ಹೊಸ ಕ್ಯಾಲೆಂಡರ್ ನ್ನು ಗೋಡೆಗೆ ತೂಗುಹಾಕುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಬನ್ನಿ ಆ ಅಂಶಗಳನ್ನು ಗಮನಿಸೋಣ.

ವಾಸ್ತು ಪ್ರಕಾರ ನಿರ್ಧಿಷ್ಟ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದರೆ ಮಾತ್ರ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಹಿಂದಿನ ವರ್ಷದ ಅಥವಾ ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬಾರದು. ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಇದು ನಮ್ಮನ್ನು ಹಳೆಯ ನೆನಪುಗಳಲ್ಲಿ ಅಂದರೆ ನಮ್ಮ ಮನಸ್ಸನ್ನು ಭೂತಕಾಲದಲ್ಲಿಯೇ ಇರುವಂತೆ ಮಾಡುತ್ತದೆ. ಇದು ನಮ್ಮ ಸಾಧನೆಗೆ ತೊಂದರೆಯನ್ನುಂಟು ಮಾಡುತ್ತದೆ.

ಮನೆಯ ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರ ಮತ್ತು ಒಳ್ಳೆಯದಾಗುವ ದಿಕ್ಕು ಎಂದು ವಾಸ್ತುಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಕಾರಣ ಪೂರ್ವ ದಿಕ್ಕಿನಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದು ಸೂರ್ಯ ದೇವನ ದಿಕ್ಕು. ಇದು ಗೌರವ, ಶಕ್ತಿ, ನಾಯಕತ್ವ ಮತ್ತು ಖ್ಯಾತಿಯ ಸಂಕೇತವಾಗಿದೆ. ಹಾಗಾಗಿ ಪೂರ್ವ ದಿಕ್ಕಿನಲ್ಲಿ ಸೂರ್ಯ ದೇವನ ಕ್ಯಾಲೆಂಡರ್ ತೂಗು ಹಾಕುವುದು ಶ್ರೇಯಸ್ಕರ.

ಉತ್ತರ, ಪಶ್ಚಿಮ ಮತ್ತು ಪೂರ್ವ ಗೋಡೆಗಳ ಮೇಲೆ ಪಂಚಾಂಗವನ್ನು ಇಟ್ಟರೆ ಒಳ್ಳೆಯದಾಗುತ್ತದೆ. ಇನ್ನು ಕ್ಯಾಲೆಂಡರ್ ಗಳಲ್ಲಿ ಹಿಂಸಾತ್ಮಕ ಪ್ರಾಣಿಗಳು ಮತ್ತು ನಕಾರಾತ್ಮಕ ಚಿತ್ರಗಳು ಇರದಂತೆ ಗಮನವಹಿಸಿ. ಮನೆಗೆ ಕ್ಯಾಲೆಂಡರ್ ತರುವಾಗ ಈ ಬಗ್ಗೆಯೂ ಗಮನವಿರಲಿ. ಇನ್ನು ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ ಹಾಗಾಗಿ ಉತ್ತರ ಗೋಡೆಯ ಮೇಲೆ ಲಕ್ಷ್ಮಿ ಮತ್ತು ಕುಬೇರ ಅಥವಾ ಪ್ರಕೃತಿಗೆ ಸಂಬಂಧಿಸಿದ ಕ್ಯಾಲೆಂಡರ್ ನ್ನು ಹಾಕಬಹುದು.

ಇನ್ನು ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಮಾತ್ರ ಕ್ಯಾಲೆಂಡರ್ ಹಾಕಬಾರದು. ಇದು ಅಡಚನೆಯನ್ನು ಉಂಟುಮಾಡುವ ದಿಕ್ಕು ಎನ್ನಲಾಗುತ್ತದೆ. ಹಾಗೆಯೇ ಮನೆಯ ಯಾವುದೇ ಬಾಗಿಲಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಕ್ಯಾಲೆಂಡರ್ ಅನ್ನು ನೇತುಹಾಕಬಾರದು, ಇದು ಮನೆಗೆ ಒಳ್ಳೆಯದಲ್ಲ. ಎಷ್ಟೋ ಜನ ಹೊಸ ಕ್ಯಾಲೆಂಡರ್ ಅನ್ನು ಹಳೆಯ ಕ್ಯಾಲೆಂಡರ್ ಮೇಲೆ ನೇತು ಹಾಕುತ್ತಾರೆ. ಆದರೆ ವಾಸ್ತು ಪ್ರಕಾರ, ಹಳೆಯ ಕ್ಯಾಲೆಂಡರ್‌ಗಳುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದೇ ಅಶುಭದ ಸಂಕೇತ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಉತ್ತಮವಾದ ಕುಆಲೆಂಡರ್ ಆಯ್ಕೆ ಮಾಡಿ, ಮನೆಯ ಸರಿಯಾದ ದಿಕ್ಕಿನಲ್ಲಿಯೇ ತೂಗುಹಾಕಿ.

Comments are closed.