News from ಕನ್ನಡಿಗರು

ಅಪ್ಪಿ ತಪ್ಪಿ ನಿಮ್ಮ ನೋಟು ಹರಿದು ಹೋದರೇ ಅಥವಾ ಸುಟ್ಟರೇ ಬದಲಾಯಿಸುವುದು ಹೇಗೆ ಗೊತ್ತೇ ?? ಹೊಸ ನಿಯಮಗಳೇನು ಗೊತ್ತೇ??

204

ನಮಸ್ಕಾರ ಸ್ನೇಹಿತರೇ ಹಣ ಎನ್ನುವುದು ಎಲ್ಲರೂ ಕೂಡ ಇಷ್ಟ ಪಡುವಂತಹ ವಿಚಾರವಾಗಿದೆ. ಇನ್ನು ಇದೆ ಹಣ ಅಂದರೆ ನೋಟನ್ನು ವಿರೂಪಗೊಳಿಸಿ ಯಾರಾದರೂ ನಿಮ್ಮ ಕೈಗೆ ಕೊಟ್ಟರೆ ಮುಖ ಕಿವುಚುವಂತೆ ಆಗುವುದು ಖಂಡಿತ. ಹಾಗಿದ್ದರೆ ಈ ರೀತಿ ಹರಿದು ಹೋಗಿರುವ ಅಥವಾ ವಿರೂಪವಾಗಿರುವ ನೋಟನ್ನು ಎಲ್ಲಿ ಬದಲಾಯಿಸಬಹುದು ಎಂಬುದರ ಕುರಿತಂತೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಒಂದು ವೇಳೆ ನೀವು ಹಣ ಪಡೆಯುವಾಗ ಎಲ್ಲಿಯಾದರೂ ಸುಕ್ಕುಗಟ್ಟಿದ ಹರಿದುಹೋದ ಅಥವಾ ವಿರೂಪಗೊಂಡ ಅಂತಹ ನೋಟುಗಳ ಸಿಕ್ಕರೆ ನೀವು ಇದನ್ನು ಎಲ್ಲಿ ಬದಲಾಯಿಸಿಕೊಳ್ಳಬಹುದು ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ನೀವು ಇಂತಹ ನೋಟುಗಳನ್ನು ಆರ್ಬಿಐ ಇಶ್ಯು ಆಫೀಸ್ನಲ್ಲಿ ಜಮಾ ಮಾಡಬಹುದಾಗಿದೆ. ಇಲ್ಲಿ ನೀವು ಬೇರೆಬೇರೆ ಪಾವತಿಸುವ ಕ್ರಮಗಳಿಗೆ ಇಂತಹ ಹಣಗಳನ್ನು ಉಪಯೋಗಿಸಬಹುದಾಗಿದೆ. ಇನ್ನು ಇವುಗಳನ್ನು ನೀವು ಹತ್ತಿರದ ಬ್ಯಾಂಕ್ ಹಾಗೂ ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಕೂಡ ಬದಲಾಯಿಸಿಕೊಳ್ಳಬಹುದಾಗಿದೆ. ಆರ್ಬಿಐ ಸುತ್ತೋಲೆ ಪ್ರಕಾರ ಹರಿದುಹೋದ ನೋಟನ್ನು ಕೂಡ ಇಲ್ಲಿ ಬದಲಾಯಿಸಿಕೊಳ್ಳಬಹುದಾದಂತಹ ಎಲ್ಲಾ ಅವಕಾಶಗಳು ಕೂಡ ಇವೆ.

ಇನ್ನು ಕೆಲವು ಕಡೆಗಳಲ್ಲಿ ಭಾಗಶಹ ಹರಿದು ಹೋದರೆ ಪರವಾಗಿಲ್ಲ ಅದರ ಮೌಲ್ಯ ನಿಮಗೆ ವಾಪಸ್ಸು ಸಿಗುತ್ತದೆ. ಆದರೆ ಸಂಪೂರ್ಣವಾಗಿ ಹರಿದು ಹೋದರೆ ಆ ನೋಟಿನ ಪೂರ್ಣ ಮೌಲ್ಯ ಕೆಲವು ಬ್ಯಾಂಕುಗಳಲ್ಲಿ ಸಿಗುವುದಿಲ್ಲ. ಅದರ ಶೇಕಡವಾರು ಮೌಲ್ಯ ನಿಮಗೆ ವಾಪಸ್ ಸಿಗುತ್ತದೆ. ಇನ್ನು ಒಂದು ರೂಪಾಯಿಂದ 20 ರೂಪಾಯಿವರೆಗಿನ ನೋಟುಗಳಿಗೆ ಪೂರ್ಣಪ್ರಮಾಣದ ಮೌಲ್ಯ ನೀಡಲೇಬೇಕಾಗಿದೆ. ಐವತ್ತು ರೂಪಾಯಿ ಇಂದ 2000 ರೂಪಾಯಿ ಮೌಲ್ಯದ ನೋಟು ಗಳಿಗೆ ಮಾತ್ರ ಒಂದುವೇಳೆ ಪೂರ್ಣವಾಗಿ ಹರಿದು ಹೋದರೆ ಶೇಕಡಾವಾರು ಮೌಲ್ಯವನ್ನು ವಾಪಸ್ ಮಾಡುವ ಅವಕಾಶವಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.