ಕೃಷಿ ಸಚಿವ ಬಿ.ಸಿ.ಪಾಟೀಲರಿಂದ ಕೃಷಿಕರಿಗೆ ಸಿಹಿ ಸುದ್ದಿ !! ‘ರೈತರೊಂದಿಗೆ ಒಂದು ದಿನ’ ಎಂಬ ವಿನೂತನ ಕಾರ್ಯಕ್ರಮ!!

ಬಿ. ಸಿ ಪಾಟೀಲ್ ಅವರು ಕರ್ನಾಟಕದ ರೈತರ ಮೆಚ್ಚಿನ ಜನನಾಯಕ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರೈತರ ಏಳಿಗೆಗಾಗಿ ತುಂಬಾ ಶ್ರಮಿಸಿದ್ದಾರೆ. ಈ ಮೂಲಕ ತಮಗಿರುವ ರೈತರ ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ. ಹೀಗಾಗಿ ಹಲವಾರು ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಗಲು-ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ.

ಕೃಷಿ ಸಚಿವರಾಗಿರುವ ಬಿ.ಸಿ ಪಾಟೀಲ್ ಅವರು ತಮ್ಮ ಈ ಬಾರಿಯ ಜನ್ಮದಿನವನ್ನು ರೈತರೊಂದಿಗೆ ಕಳೆಯುವ ಮೂಲಕ ಅವರ ಮೂಲಭೂತ ಸಮಸ್ಯೆಗಳನ್ನು ಅರಿಯಲು ಮುಂದಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಚಿವರು, ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ರೈತರೊಂದಿಗೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮದ ಮೂಲಕ, ನವೆಂಬರ್ 14ಕ್ಕೆ ಮಂಡ್ಯ ಜಿಲ್ಲೆಯಿಂದ ರೈತರ ಮನೆಗೆ ಭೇಟಿಕೊಟ್ಟು ರೈತರ ಕಷ್ಟ ಸುಖಗಳನ್ನು ವಿಚಾರಿಸಿ ಅವರಿಗೆ ಆತ್ಮ ಧೈರ್ಯ ತುಂಬುವ ಕೆಲಸವನ್ನು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ ಕುರಿತು ಉತ್ಪಾದನಾ ವೆಚ್ಚ ಈ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಹುರಿದುಂಬಿಸುವುದು ಹಾಗೂ ರೈತರ ಆ’ತ್ಮ’ಹ’ತ್ಯೆ’ಗೆ ಪ್ರಮುಖ ಕಾರಣ ಏನು ಎಂಬುದನ್ನು ಮೂಲದಿಂದಲೇ ಅರಿಯುವುದು ಆತ್ಮ ಸ್ಥೈರ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದಾಗಿದೆ.

ನವಂಬರ್ 14 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕುಗಳ ರೈತ ಮುಖಂಡರು ಮತ್ತು ಪ್ರಗತಿಪರ ಕೃಷಿ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು . ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ವರದಿಯನ್ನು ಮುಖ್ಯಮಂತ್ರಿಯವರಿಗೆ ನೀಡಿ ಕೃಷಿ ಇಲಾಖೆಯಲ್ಲಿ ಹೊಸಬದಲಾವಣೆಯನ್ನು ಮಾಡಲಾಗುವುದು ಎಂದು ಹೇಳಿದರು.

ರೈತರಿಗೆ ಕೇವಲ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ನೀಡಬೇಕು ಈ ನಿಟ್ಟಿನಲ್ಲಿ ನಾವು ದುಡಿಯುತ್ತಿದ್ದೇವೆ ಜಿಲ್ಲೆ ಜಿಲ್ಲೆ ಗೆ ಈಗ ಮತ್ತೆ ಸುತ್ತಿ ರೈತರ ಸಮಸ್ಯೆಯನ್ನು ಅರಿಯಲು ಪ್ರಯತ್ನವಾಗುತ್ತಿದೆ. ಅಷ್ಟೇ ಅಲ್ಲದೆ ಈ ಹಿಂದೆ ಕೊರೋನ ಸಂದರ್ಭದಲ್ಲಿ ಕೂಡ ಎಲ್ಲ ಜಿಲ್ಲೆಗಳನ್ನು ಸುದ್ದಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳಲಾಯಿತು ಈ ರೀತಿಯಾಗಿ ಪ್ರತಿ ತಿಂಗಳು ಕನಿಷ್ಠ ಎರಡು ಜಿಲ್ಲೆಗಳಿಗೆ ಭೇಟಿ ನೀಡುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.

ಇನ್ನು ಇವರ ರಾಜಕೀಯ ಜೀವನದ ಬಗ್ಗೆ ನೋಡುವುದಾದರೆ ಹಲವಾರು ಏರುಪೇರುಗಳ ಬಳಿಕ ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತನ್ನ ಬಳಿ ಬಂದ ರೈತನ ಕಣ್ಣೀರನ್ನು ಒರೆಸುವ ಮೂಲಕ ಧೈರ್ಯ ತುಂಬುತ್ತ ಜನಗಳ ನೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ. ಬಿ.ಸಿ ಪಾಟೀಲ್ ಅವರಿಗೆ ಮುಂಗಡವಾಗಿ ಹುಟ್ಟು ಹಬ್ಬದ ಶುಭಾಶಯಗಳು ಇನ್ನೂ ಹೆಚ್ಚು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಿಮ್ಮಿಂದ ಮಾಡುವಂತಹ ಶಕ್ತಿ ಆ ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಕೇಳಿಕೊಳ್ಳೋಣ.

Comments are closed.