ಪುನೀತ್ ಜೊತೆ ನನ್ನ ಕೊನೆ ಸೆಲ್ಫಿ ಇದೆ ಎಂದು ಫೋಟೋ ತೋರಿಸಿ ಮಹತ್ವದ ಆಸೆ ಹೊರಹಾಕಿದ ರಾಘಣ್ಣ. ನಡೆಸಿಕೊಡಲು ಸಾಧ್ಯವೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮಿನುಗುತಾರೆ ಧ್ರುವ ನಕ್ಷತ್ರದಂತೆ ಇದ್ದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಅಕ್ಷರಶಹ ನಿಜವಾಗಿ ಕೂಡ ಈಗ ಆಕಾಶದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಬೆಳಗುವ ನಕ್ಷತ್ರವಾಗಿ ಬಿಟ್ಟಿದ್ದಾರೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರು ಸಮಾಜಕ್ಕೆ ಸಾರಿ ದಂತಹ ಸಂದೇಶ ದಿಂದಾಗಿ ಅವರು ನಿಜವಾಗಲೂ ಕೂಡ ಎಲ್ಲರಿಗೆ ದೇವಸ್ವರೂಪರೇ ಆಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವುದು ಅಭಿಮಾನಿಗಳಾದಂತಹ ನಮಗೆ ಇಷ್ಟೊಂದು ಆಘಾತವನ್ನು ನೀಡುತ್ತಿದ್ದರೆ ಇನ್ನು ಅವರೊಂದಿಗೆ ಒಡಹುಟ್ಟಿದ ಶಿವಣ್ಣ ಹಾಗೂ ರಾಘಣ್ಣ ಅವರಿಗೆ ಎಷ್ಟು ಬೇಸರವನ್ನು ತರಿಸಬೇಡ ನೀವೇ ಅಂದಾಜು ಮಾಡಿಕೊಳ್ಳಿ. ಇನ್ನು ಅವರೊಂದಿಗೆ ಜೀವನಪರ್ಯಂತ ಸಂಸಾರವನ್ನು ಸಾಗಿಸುವ ಕನಸನ್ನು ಕಂಡಿದ್ದ ಅವರ ಪತ್ನಿ ಅಶ್ವಿನಿ ಅವರಿಗೆ ಎಷ್ಟು ದುಃಖವನ್ನು ತರಿಸಬೇಡ ಅದನ್ನು ಕೂಡ ನಾವು ಲೆಕ್ಕ ಹಾಕಿಕೊಳ್ಳಬೇಕಾಗಿದೆ.

ಅವರನ್ನು ಕೊನೆಯ ಬಾರಿಗೆ ನೋಡಲು ಬಂದಂತಹ 25ಲಕ್ಷಕ್ಕೂ ಜನರ ಪ್ರೀತಿಯನ್ನು ನೋಡಿದರೆ ಸಾಕು ಅವರನ್ನು ಕಳೆದುಕೊಂಡಿರುವ ದುಃಖ ಎಷ್ಟರಮಟ್ಟಿಗೆ ಈ ಕರ್ನಾಟಕವನ್ನು ತಟ್ಟಿದೆ ಎಂಬುದನ್ನು. ಅಪ್ಪುವನ್ನು ಕಳೆದುಕೊಂಡಿರುವ ದುಃಖದಲ್ಲಿ ದೊಡ್ಡ ಮನೆಯವರು ಅಳುತ್ತಿದ್ದುದನ್ನು ನೋಡಿ ದೇವರ ಮೇಲೆ ನಂಬಿಕೆನೇ ಜನರು ಕಳೆದುಕೊಂಡುಬಿಟ್ಟಿದ್ದಾರೆ. ಆರಾಧ್ಯ ದೈವದಂತೆ ಪೂಜಿಸುತ್ತಿದ್ದ ಅಭಿಮಾನಿಗಳಿಗೂ ಕೂಡ ಪವರ್ ಸ್ಟಾರ್ ರವರ ಅಗಲಿಕೆ ತಡೆದುಕೊಳ್ಳಲಾಗದಷ್ಟು ನೋವನ್ನು ತಂದುಕೊಟ್ಟಿದೆ.

ಹೌದು ಗೆಳೆಯರೇ ಎತ್ತಿ ಮಗುವಿನಂತೆ ಆಡಿಸಿದಂತಹ ತಮ್ಮನನ್ನು ಸಮಾಧಿಯ ಒಳಗೆ ಮಲಗಿಸುವ ಅಂತಹ ಸಂದರ್ಭದಲ್ಲಿ ಶಿವಣ್ಣ ಹಾಗೂ ರಾಘಣ್ಣ ಬಿಕ್ಕಿಬಿಕ್ಕಿ ಅತ್ತಿದ್ದರು. ಇನ್ನು ಪುನೀತ್ ರಾಜಕುಮಾರ್ ರವರ ಸಹೋದರ ರಾಗಿರುವ ರಾಘಣ್ಣ ಅಪ್ಪುವಿನ ಜೊತೆಯಲ್ಲಿ ತೆಗೆದಿರುವ ಲಾಸ್ಟ್ ಸೆಲ್ಫಿ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರೊಂದಿಗೆ ರಾಘವೇಂದ್ರ ರಾಜಕುಮಾರ್ ರವರು ಕೊನೆಯಬಾರಿ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಇದರ ಕುರಿತಂತೆ ವಿವರವಾಗಿ ಭಾವನಾತ್ಮಕ ಸಾಲುಗಳಲ್ಲಿ ಹೇಳುತ್ತಾ ಪೋಸ್ಟ್ ಮಾಡಿಕೊಂಡಿದ್ದಾರೆ. ಎಂ ಎಸ್ ಕೆ ಟ್ರಸ್ಟಿನ ಮೂಲಕ ರಾಘಣ್ಣನವರಿಗೆ ಬಂದಂತಹ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಅಪ್ಪು ರವರು ಸಂತೋಷದಿಂದ ಸೆಲ್ಫಿ ತೆಗೆದುಕೊಂಡಿದ್ದರು

ಇದಾದನಂತರ ರಾಘಣ್ಣ ನಾವು ಕೂಡ ಅಪ್ಪಾಜಿಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಇದೇ ರೀತಿಯ ಮೂರ್ತಿಯಲ್ಲಿ ಮಾಡೋಣ ಎಂಬುದಾಗಿ ಹೇಳಿದ್ದಾರೆ ಎಂಬುದನ್ನು ರಾಘಣ್ಣ ಹಂಚಿಕೊಂಡಿದ್ದಾರೆ. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ ಲವ್ ಯು ಅಪ್ಪು ಎಂದು ರಾಘಣ್ಣ ಬರೆದುಕೊಂಡಿದ್ದಾರೆ. ಎಷ್ಟಾದರೂ ಮಗನಂತೆ ತನ್ನ ತಮ್ಮನನ್ನು ಪ್ರೀತಿಸಿ ದಂತಹ ಜೀವವದು. ಅಪ್ಪು ಅವರ ಚಿತ್ರದ ಸಾಲಿನಂತೆ ಜೊತೆಗಿರದ ಜೀವ ಎಂದಿಗಿಂತ ಸನಿಹ ಎಂಬುದನ್ನು ನಾವು ಇಲ್ಲಿ ಅರ್ಥೈಸಿಕೊಳ್ಳಬಹುದು. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ಮನಸ್ಸಿನಾಳದಲ್ಲಿ ಹುದುಗಿದ್ದಾರೆ. ಈ ಪೋಸ್ಟ್ ಹಾಗು ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.