Relationship: ಸಂಸಾರದಲ್ಲಿ ಸುಖದ ಅಲೆಯಲ್ಲಿ ತೇಲಾಡಿ ಮುಳುಗಬೇಕು ಎಂದರೆ ಹೆಂಡತಿ ಹೇಗಿರಬೇಕು ಗೊತ್ತೇ?? ಹೇಗಿದ್ದರೆ ಚೆಂದ ಗೊತ್ತೇ?

Relationship: ಯಾವುದೇ ಒಂದು ದಾಂಪತ್ಯ ಜೀವನ ಸುಖಕರವಾಗಿ ಇರಬೇಕು ಎಂದರೆ ಹೆಂಡತಿ ಮತ್ತು ಗಂಡ ಇಬ್ಬರೂ ಕೂಡ ಅತ್ಯಂತ ಪ್ರೀತಿಯಿಂದ ಜೊತೆಗಿರುವುದು ಮಾತ್ರವಲ್ಲ ಇಬ್ಬರ ನಡುವೆ ಹೊಂದಾಣಿಕೆಯು ಇರಬೇಕಾಗುತ್ತದೆ. ಪರಸ್ಪರ ಇಬ್ಬರು ಅರ್ಥ ಮಾಡಿಕೊಂಡು ಜೀವನದಲ್ಲಿ ಏನೇ ಎದುರಾದರೂ ಅದನ್ನು ಎದುರಿಸಬೇಕು. ಕೇವಲ ಸುಖದಲ್ಲಿ ಮಾತ್ರ ಜೊತೆಗಿದ್ದು ದುಃಖ, ನೋವು, ಅಪಮಾನದಲ್ಲಿ ದೂರವಾದರೆ ಅದು ಒಂದು ಉತ್ತಮ ದಾಂಪತ್ಯ ಎಂದು ಕರೆಸಿಕೊಳ್ಳುವುದಿಲ್ಲ. ಹೆಂಡತಿ ಕಷ್ಟದಲ್ಲಿದ್ದಾಗ ಗಂಡ ಸುಖದಲ್ಲಿ ಮಾತ್ರವಲ್ಲದೆ ಅವಳ ನೋವಿನಲ್ಲಿ ಜೊತೆಯಾಗುವುದು, ಜೊತೆಗೆ ಗಂಡ ನೋವು ಇಲ್ಲವೇ ಸೋಲನ್ನು ಅನುಭವಿಸುತ್ತಿರುವಾಗ ಆತನೊಂದಿಗೆ ಹೆಂಡತಿ ಹೆಗಲಾಗುವುದು ಮುಖ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಗಂಡ ಜೀವನಪೂರ್ತಿ ಅತ್ಯಂತ ಸುಖದಿಂದ ಇರಬೇಕು ಎಂದರೆ ಹೆಂಡತಿಯಾದವಳಿಗೆ ಇಂತಹ ಗುಣಲಕ್ಷಣಗಳು ಇರಬೇಕಾಗುತ್ತದೆ. ಹಾಗಿದ್ದರೆ ಪುರುಷರು ಜೀವನಪೂರ್ತಿ ಸುಖ, ನೆಮ್ಮದಿಯಿಂದ ಇರಬೇಕಾದರೆ ಹೆಂಡತಿಗೆ ಇರಬೇಕಾದ ಅಂತಹ ಗುಣಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಪುರುಷರು ಕೆಲಸದ ಮೇಲೆ ಹೆಚ್ಚು ಕಾಲ ಹೊರಗೆ ಇರುತ್ತಾರೆ. ಮನೆಯಲ್ಲಿ ಇರುವುದು ಅತ್ಯಂತ ಕಡಿಮೆಯ ಅವಧಿ. ಈ ಸಮಯದಲ್ಲಿ ಹೆಂಡತಿಯಾದವಳು ಗಂಡನ ಜೊತೆಗೆ ಹೆಚ್ಚು ಸಮಯ ಕಳೆಯಬೇಕು. ತಾನಾಯಿತು ತನ್ನ ಕೆಲಸವಾಯಿತು ಎಂದು ಬಿಸಿ ಆಗಿರುವುದನ್ನು ಬಿಟ್ಟು ಕೆಲಸದ ನಡುವೆ ಸಮಯ ಮಾಡಿಕೊಂಡು ಗಂಡನಿಗೆ ಸಮಯ ನೀಡಬೇಕು. ಆಗ ಗಂಡ ಹೆಂಡತಿಯ ನಡುವಿನ ಸಂಬಂಧ ಇನ್ನಷ್ಟು ಬಲವಾಗುತ್ತದೆ. ಈ ಮೂಲಕ ಗಂಡನಿಗೂ ಕೂಡ ಹೆಂಡತಿಯ ಮೇಲೆ ಹೆಚ್ಚಿನ ಕಾಳಜಿ, ಪ್ರೀತಿ ಮೂಡುತ್ತದೆ. ಇದರ ಜೊತೆಗೆ ಮೊದಲು ತಮ್ಮ ಗಂಡನಿಗೆ ಯಾವುದೆಲ್ಲ ಇಷ್ಟವಾಗುತ್ತಿತ್ತು, ಯಾವುದು ಇಷ್ಟವಾಗುತ್ತಿರಲಿಲ್ಲ ಹಾಗೂ ಈಗ ಯಾವುದು ಇಷ್ಟವಾಗುತ್ತದೆ ಮತ್ತು ಯಾವುದು ಇಷ್ಟವಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮ ಗಂಡನ ಇಷ್ಟ ಕಷ್ಟಗಳು ಹೇಗೆ ಬದಲಾಗುತ್ತಿದೆ, ಅವರ ಬದಲಾವಣೆಗಳು ಏನು ಎನ್ನುವುದನ್ನು ಹೆಂಡತಿಯಾದವರು ತಿಳಿಯಬೇಕಾದದ್ದು ಅಗತ್ಯ. ಇದನ್ನು ಓದಿ.. Relationship: ಒಂದೇ ಬಿಲ್ಡಿಂಗ್ ಎಂದು ಸ್ನೇಹಿತರಾದ ಎರಡು ಕುಟುಂಬ: ಆದರೆ ಮೇಲ್ಮನೆ ಪತಿಯ ಜೊತೆ ಕೆಳಗಡೆ ಮನೆ ಆಂಟಿ ಮಾಡಿದ್ದೇನು ಗೊತ್ತೇ??

coup wom 2 | Relationship: ಸಂಸಾರದಲ್ಲಿ ಸುಖದ ಅಲೆಯಲ್ಲಿ ತೇಲಾಡಿ ಮುಳುಗಬೇಕು ಎಂದರೆ ಹೆಂಡತಿ ಹೇಗಿರಬೇಕು ಗೊತ್ತೇ?? ಹೇಗಿದ್ದರೆ ಚೆಂದ ಗೊತ್ತೇ?
Relationship: ಸಂಸಾರದಲ್ಲಿ ಸುಖದ ಅಲೆಯಲ್ಲಿ ತೇಲಾಡಿ ಮುಳುಗಬೇಕು ಎಂದರೆ ಹೆಂಡತಿ ಹೇಗಿರಬೇಕು ಗೊತ್ತೇ?? ಹೇಗಿದ್ದರೆ ಚೆಂದ ಗೊತ್ತೇ? 2

ಗಂಡ ಹೆಂಡತಿ ಇಬ್ಬರೂ ಪರಸ್ಪರ ಪ್ರಾಮಾಣಿಕವಾಗಿರಬೇಕು. ಜೀವನ ನಡೆಯುವುದೇ ಪ್ರಾಮಾಣಿಕತೆ ಮತ್ತು ಸತ್ಯದಿಂದ ಎಂದು ಹೇಳಬಹುದು. ಹೀಗಾಗಿ ಪತ್ನಿ ಗಂಡನಿಗೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಗಂಡ ಎದುರಿಸುವ ಕೆಲವು ಸಮಸ್ಯೆಗಳಿಗೆ ಆಕೆ ಸಹಾಯವಾಗಬೇಕು. ಆತನ ಕಷ್ಟಗಳಿಗೆ ಸಹಕರಿಸಬೇಕು. ಸುಮ್ಮನೆ ಜಗಳ ಆಗುವ ಸಂದರ್ಭಗಳನ್ನು ನಿಯಂತ್ರಿಸಿಕೊಳ್ಳಬೇಕು. ಎಂತದೇ ಸನ್ನಿವೇಶ ಎದುರಾದರೂ ಕೂಡ ಅದನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿರುವಾಗ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆಗ ತಮ್ಮ ಪತಿಯ ಮೇಲೆ ಬೇಸರ ಪಟ್ಟುಕೊಳ್ಳುವ ಬದಲು ಆ ಸಮಸ್ಯೆಯಿಂದ ಹೇಗೆ ಹೊರಗೆ ಬರಬಹುದು ಎನ್ನುವುದನ್ನು ಯೋಚಿಸಬೇಕು. ಈ ರೀತಿಯಾಗಿ ಪತ್ನಿಯಾದವಳು ಅನೇಕ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಸಾರವನ್ನು ಅತ್ಯಂತ ಸುಖಮಯ ಆಗಿಸಬಹುದಾಗಿದೆ. ಇದನ್ನು ಓದಿ..Relationship: ಅತ್ತೆಯ ಡಿಂಗ್ ಡಾಂಗ್ ಆಟವನ್ನು ಹೊರತೆಗೆದ ಮನೆಗೆ ಬಂದ ಹೊಸ ಸೊಸೆಗೆ, ಕುಟುಂಬ ಸೇರಿಕೊಂಡು ಏನು ಮಾಡಿದ್ದಾರೆ ಗೊತ್ತೇ??

Comments are closed.