ಯುವರತ್ನ ನಟಿ ಸಾಯೇಷ ಪಡೆದು ಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?? ಕನ್ನಡದ ಟಾಪ್ ನಟಿಯನ್ನು ಮೀರಿಸಿದ ಸಾಯೇಷ

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಹೆಚ್ಚು ಸಂಭಾವನೆ ನೀಡುತ್ತಿಲ್ಲ ಎಂದು ಹಲವಾರು ವರ್ಷಗಳಿಂದ ಮಾತುಗಳು ಕೇಳಿ ಬರುತ್ತಿವೆ. ಕನ್ನಡ ಚಿತ್ರರಂಗದ ಕ್ವೀನ್ ಎಂದೇ ಪ್ರಸಿದ್ಧಿ ಪಡೆದು ಕೊಂಡಿದ್ದ ನಟಿ ರಮ್ಯಾ ರವರು ಕೂಡ ಈ ಕುರಿತು ಮಾತನಾಡಿ, ನಟರಿಗೆ ನೀಡುವ ಸಂಭಾವನೆಯನ್ನು ನಟಿಯರಿಗೆ ಕೂಡ ನೀಡಲು ಆರಂಭಿಸಬೇಕು ಎಂದು ಹೇಳುವ ಮೂಲಕ ನಟಿಯರಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿಲ್ಲ ಎಂಬುದರ ಕುರಿತು ಧ್ವನಿ ಎತ್ತಿದ್ದರು.

ಕನ್ನಡದ ಟಾಪ್ ನಟಿ ಯಾರು ಕೂಡ ನಟರಿಗೆ ಅಥವಾ ಇನ್ನಿತರ ಚಿತ್ರರಂಗಗಳಲ್ಲಿ ನಟಿಯರಿಗೆ ಹೋಲಿಸಿ ಕೊಂಡರೆ ಕಡಿಮೆ ಸಂಭಾವನೆ ಪಡೆಯುತ್ತಾರೆ ಎಂಬುದು ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಮಾತುಗಳು. ಹೆಚ್ಚೆಂದರೆ ಕನ್ನಡದಲ್ಲಿ ನಟಿಯಾರಿಗೆ ಹೆಚ್ಚೆಂದರೆ ಒಂದು ಸಿನಿಮಾಗೆ 15 ರಿಂದ 40 ಲಕ್ಷ ರೂಪಾಯಿಗಳನ್ನು ನೀಡಬಹುದು. ಆದರೆ ಇತ್ತೀಚೆಗೆ ಯುವರತ್ನ ಸಿನಿಮಾಗಳಲ್ಲಿ ನಟನೆ ಮಾಡಿರುವ ಸಯೇಶಾ ಅವರಿಗೆ ಕನ್ನಡದ ಟಾಪ್ ನಟಿಯರಿಗಿಂತ ಹೆಚ್ಚಿನ ಸಂಭಾವನೆಯನ್ನು ನೀಡಲಾಗಿದೆ.

ಹೌದು ಸ್ನೇಹಿತರೇ ಯುವರತ್ನ ಸಿನಿಮಾದಲ್ಲಿ ನಟಿಸ ರವರು ಹೆಚ್ಚಿನ ಸಮಯ ಸ್ಕ್ರೀನ್ನಲ್ಲಿ ಕಾಣಿಸಿಕೊಂಡಿಲ್ಲ, ಎಲ್ಲ ಕೂಡಿಸಿ ನೋಡಿದರೆ ಕೆಲವೇ ಕೆಲವು ಕ್ಷಣಗಳ ಕಾಲ ಚಿತ್ರದಲ್ಲಿ ಕಾಣಿಸುತ್ತಾರೆ, ಆದರೂ ಕೂಡ ನಟಿ ಸಾಯೇಶ ರವರಿಗೆ ಬರೋಬ್ಬರಿ 72 ಲಕ್ಷ ರೂಪಾಯಿಗಳನ್ನು ಸಂಭಾವನೆಯನಾಗಿ ನೀಡಲಾಗಿದೆ ಎಂಬುದು ತಿಳಿದು ಬಂದಿದೆ. ದಕ್ಷಿಣ ಭಾರತದ ಇನ್ನಿತರ ಚಿತ್ರರಂಗಗಳಲ್ಲಿ ನಟಿಸಿರುವ ಕಾರಣ ಇವರಿಗೆ ಎಷ್ಟು ಸಂಭಾವನೆ ಇರಬಹುದು ಎನ್ನಲಾಗುತ್ತಿದೆ, ಆದರೂ ಕೂಡ ಕನ್ನಡ ನಟಿಯರಿಗೆ ಸಿಗದ ಪ್ರಾಮುಖ್ಯತೆ ಇವರಿಗೆ ಸಿಕ್ಕಿರುವುದು ಕೆಲವರಲ್ಲಿ ಅಸಮಾಧಾನ ಮೂಡಿಸಿದೆ.

Comments are closed.