ಬಾಲಿವುಡ್ ನಲ್ಲಿ ಶಾರುಖ್ ಇರುವಂತೆ ಕನ್ನಡ ಚಿತ್ರರಂಗಕ್ಕೆ ಇರುವ ಶಾರುಖ್ ಖಾನ್ ಯರಂತೆ ಗೊತ್ತೇ?? ತೆಲುಗಿನ ನಟ ಅಲಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ನಾಯಕ ನಾಯಕಿಯರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಸ್ಟೈಲ್, ವಿಭಿನ್ನ ನಟನೆಯಿಂದ ಫೇಮಸ್ ಆಗಿರ್ತಾರೆ. ಅದರಲ್ಲೂ ಕೆಲವರು ಕನ್ನಡದಲ್ಲಿ ಮಾತ್ರವಲ್ಲದೇ ಇತರ ಭಾಷೆಗಳ ಕಲಾವಿದರ ಮೇಲೂ ಪ್ರಭಾವ ಬೀರಿರುತ್ತಾರೆ. ಉದಾಹರಣೆಗೆ ತೆಲಗು ಸೂಪರ್ ಸ್ಟಾರ್ ಅಲ್ಲೂ ಅರ್ಜುನ್ ಅವರಿಗೆ ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಹಾಗೂ ಫೈಟಿಂಗ್ ತುಂಬಾನೇ ಇಷ್ಟವಂತೆ. ಇನ್ನು ಸ್ವಲ್ಪ ಹಿಂದೆ ಹೋಗುವುದಾದರೆ ವರನಟ ಡಾ. ರಾಜಕುಮಾರ್ ಇತರ ಎಲ್ಲಾ ಭಾಷೆಯ ನಟರುಗೂ ಸ್ಪೂರ್ತಿ. ಹಾಗಂತ ಬೇರೆ ಭಾಷೆಯ ಕಲಾವಿದರು ಸಂದರ್ಭ ಸಿಕ್ಕಾಗಲೆಲ್ಲ ನಟ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ.

ಇನ್ನು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ವಿಷಯಕ್ಕೆ ಬಂದರೆ ಅವರು ಇತರ ಭಾಷೆಗಳಲ್ಲಿ ಅಭಿನಯಿಸುವುದರ ಮೂಲಕವೂ ಉತ್ತಮ ಹೆಸರು ಗಳಿಸಿದ್ದಾರ್‍ಎ, ಇತರರಿಗೆ ಮಾದರಿ ಎನಿಸಿದ್ದಾರೆ. ಇನ್ನು ಇತ್ತೀಚಿಗೆ ಕಿಚ್ಚ ಸುದೀಪ್ ಅವರನ್ನು ಬಾಲಿವುಡ್ ನ ಬಾದ್ ಷಾ ಶಾರೂಖ್ ಖಾನ್ ಎಂದಿದ್ದರು ಒಬ್ಬ ಪ್ರಖ್ಯಾತ ನಟ. ಏನದು ಸ್ಟೋರಿ ಮುಂದೆ ಓದಿ..

ತೆಲಗು ಚಿತ್ರರಂಗದ ಹಾಸ್ಯ ನಟ ಅಲಿ ಕನ್ನಡಿಗರಿಗೂ ಕೂಡ ಚಿರಪರಿಚಿತ. ಅವರ ಹಾಸ್ಯ ಪ್ರವೃತ್ತಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ. ಇನ್ನು ಕನ್ನಡದಲ್ಲಿಯೂ ಕೆಲವು ಚಿತ್ರಗಳಲ್ಲಿ ನಟಿಸಿರುವ ಅಲಿ ಕನ್ನಡದ ಬಹು ದೊಡ್ಡ ಅಭಿಮಾನಿ ಎಂದರೆ ತಪ್ಪಾಗಲ್ಲಿಕ್ಕಿಲ್ಲ. ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ರಾಜೀವ್ ನಟನೆಯ ’ಉಸಿರೇ ಉಸಿರೇ’ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಲಿ ನಟಿಸುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಘವಹಿಸಿದ್ದ ನಟ ಅಲಿ ತಮಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ ’ನಾನು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದು 1983ಅಲ್ಲಿ ರೆಬಲ್ ಸ್ಟಾರ್ ಅಭಿನಯದ ’ಏಕಲವ್ಯ’ ಚಿತ್ರದಲ್ಲಿ. ಇಲ್ಲಿನ ಎಲ್ಲಾ ನಟರೂ ಉತ್ತಮ ಅಭಿನಯ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಶಾರುಖ್ ಖಾನ್ ಹೇಗೆಬಾದ್ ಷಾ ನೋ ಹಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಬಾದ್ ಷಾ. ಇವರು ಉತ್ತಮ ವ್ಯಕ್ತಿತ್ವ ಹೊಂದಿರುವವರು’ ಎಂದು ಕನ್ನಡ ಚಿತ್ರರಂಗದ ಮೇಲೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.

Comments are closed.