ಒಂದು ಸಾರಿ ಹೇರ್ ಕಟ್ಟಿಗೆ 15ಲಕ್ಷ, 52 ಎಕರೆಯಲ್ಲಿ ಮನೆ, 7500 ಕಾರುಗಳ ಒಡೆಯ, ಈತ ಯಾರು ಗೊತ್ತಾ?

ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್ ಬಗೆ ಗೊತ್ತಾ ಈತ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಬಹಳ ಪ್ರಮುಖವಾದವನು ಎಂದು ಹೇಳಲಾಗುತ್ತದೆ. ಈತನ ಎಲ್ಲಾ ಮೂಲಗಳ ವಾರ್ಷಿಕ ಆದಾಯದ ಗಳಿಕೆ, ಒಟ್ಟು 28 ಬಿಲಿಯನ್. ಇವನು ದೂರದ ಬ್ರುನಯ್ ದೇಶದ ಸುಲ್ತಾನ್ ಹಾಗೂ ಅಲ್ಲಿನ ಪ್ರಧಾನಮಂತ್ರಿ ಕೂಡ. ಈ ಬ್ರುನಯ್ ದೇಶ ಎಲ್ಲಿದೆ ಗೊತ್ತಾ? ಮಲೇಶಿಯಾದ ಮೇಲೆ ಹಾಗೂ ದಕ್ಷಿಣ ಚೀನಾದ ಕೆಳಗಿರುವ ಒಂದು ಸಣ್ಣ ದ್ವೀಪ ಹಾಗೂ ದೇಶ ಫೀಲಿಪಿನ್, ಸುಳು, ಮಲೈ ಮುಂತಾದ ಪ್ರಾಂತ್ಯಗಳು ಇದರ ಸುತ್ತಮುತ್ತ ಇವೆ.

ಈ ದೇಶ ಇವತ್ತು ತನ್ನ ಆಯಿಲ್ ರಫ್ತಿನಿಂದ ವಿಶ್ವದ 5ನೇ ಶ್ರೀಮಂತ ರಾಷ್ಟ್ರವಾಗಿದೆ, ಒಂದೇ ಒಂದು ಪೈಸೆಯಷ್ಟು ಕೂಡ ಸಾರ್ವಜನಿಕ ಸಾಲ ಇಲ್ಲದಿರೋ ಜಗತ್ತಿನ ಎರಡು ರಾಷ್ಟ್ರಗಳಲ್ಲಿ ಈ ದೇಶವು ಕೂಡ ಒಂದು. ಈ ದೇಶವು ತನ್ನ ಒಂದುವರೆ ಸಾವಿರದ ಐತಿಹಾಸ ಗಳಲ್ಲಿ ಹೊರಗಿನವರ ವಶವಾಗಿತ್ತು. ಉದಾಹರಣೆಗೆ ಬೌದ್ಧರು, ಭಾರತೀಯರು, ಜಪಾನೀಯರು, ಚೀನೀಯರು ಹಾಗೂ ಬ್ರಿಟಿಷರು ಕೂಡ ಈ ಪ್ರಾಂತ್ಯದ ಮೇಲೆ ತಮ್ಮ ಚಕ್ರಾಧಿಪತ್ಯವನ್ನು ಸ್ಥಾಪಿಸಿದ್ದರು.

1952 ರಲ್ಲಿ ಬ್ರುನಯ್ ದೇಶಕ್ಕೆ ಒಂದು ಸಂವಿಧಾನ ರಚನೆಯ ಬಗ್ಗೆ ಚರ್ಚೆಯಾಗಿ, 1958 ರಲ್ಲಿ ಪೂರ್ಣರೂಪದ ಸಂವಿಧಾನ ರಚನೆ ಆಯಿತು ಹೂಮರಲಿ ಪದ ತ್ಯಾಗವನ್ನು ಮಾಡಿದ ನಂತರ ಗದ್ದಿಗೆ ಹೇಳಿದವನೇ ಈಗಿರುವ ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್, ಆಗ ಅವನಿಗೆ ಸುಮಾರು 21 ವರ್ಷ.1984 ರಲ್ಲಿ ಬ್ರುನಯ್ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ ರಾಷ್ಟ್ರ ವಾಗುತ್ತೆ. ಈಗ ಬೋಲ್ಕಿಯ ಬ್ರುನಯ್ ದೇಶದ ಎಲ್ಲಾ ಕ್ಷೇತ್ರಗಳ ಮುಖ್ಯಸ್ಥ. ಒಂದೇ ಮಾತಲ್ಲಿ ಹೇಳುವುದಾದರೆ ಆತ ಈಗಿನ ಬ್ರುನಯ್ ಸರ್ವೋಚ್ಚ ಅಧಿಕಾರಿ ಅಥವಾ ಸರ್ವಾಧಿಕಾರಿ.

ಹಾಗೆ 1929 ರಲ್ಲಿ ಮೊದಲ ಬಾರಿಗೆ ತೈಲ ನಿಕ್ಷೇಪ ಇರುವುದು ಪತ್ತೆಯಾಗುತ್ತದೆ ಬ್ರಿಟಿಷರ ಕಾಲದಲ್ಲಿ ಅದರ ಲಾಭಾಂಶವೆಲ್ಲ ಅವರ ಜೇಬಿಗೆ ಸೇರುತ್ತಿತ್ತು‌. ಆದರೆ ಈಗ ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್ ಬ್ರುನಯ್ ದೇಶವನ್ನು ಭೂಲೋಕದ ಮೇಲಿನ ಸ್ವರ್ಗ ವನ್ನಾಗಿ ಮಾಡಲು ಮಾಡಿದ್ದಾನೆ .ಬ್ರುನಯ್ ಇದ್ದಂತಹ ಸಿರಿ ದೇಶ ಜಗತ್ತಿನಲ್ಲಿ ಮತ್ತೊಂದು ಇಲ್ಲ ಅಂತಾನೆ ಹೇಳಬಹುದು, ಈ ದೇಶದ 29ನೇ ಸುಲ್ತಾನ ನಾಗಿರುವ ಈಗಿನ ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್ ಬಹುಶಃ ಬ್ರುನಯ್ ದೇಶ ತನ್ನ ಇತಿಹಾಸದಲ್ಲಿ ಕಂಡ ಅತ್ಯಂತ ಶ್ರೀಮಂತ ದೊರೆ.

ಇವನ ಒಟ್ಟು ಆಸ್ತಿಯೇ ಸುಮಾರು 40 ಬಿಲಿಯನ್,1967ರಲ್ಲೆ ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್ ತನ್ನ ಕಸಿನ್ ಅನ್ನು ಮದುವೆಯಾಗಿದ್ದ. ಅವನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ, ಇವರ ಆಡಂಬರದ ಜೀವನದ ಬಗ್ಗೆ ಕೇಳಿದರೆ ನಿಜಕ್ಕೂ ನೀವು ಒಂದು ಕ್ಷಣ ಶಾಕ್ ಆಗ್ತೀರಾ. ಹೌದು ಸ್ನೇಹಿತರೆ ಈತನ ಬಳಿ ಬರೋಬ್ಬರಿ 7500 ವಿಭಿನ್ನ ತರಹದ ಬ್ರ್ಯಾಂಡ್ ಗಳ ಕಾರುಗಳು ಇವರ ಬಳಿ ಇವೆ. ಈತ ತನ್ನ ವಾರದ ಹೇರ್ ಕಟ್ಟಿಗೆ ಖರ್ಚು ಮಾಡುವ ಹಣ $20000 ನಮ್ಮ ಭಾರತದ ಕರೆನ್ಸಿಗೆ ಇದನ್ನು ಲೆಕ್ಕ ಹಾಕಿದರೆ ಸುಮಾರು ಹದಿನೈದು ಲಕ್ಷ. ಇನ್ನು ಅವನ ಆಸ್ತಿ ಪ್ರತಿ ಸೆಕೆಂಡಿಗೆ 150 ಡಾಲರಿನಷ್ಟು ಏರಿಕೆ ಆಗ್ತಾ ಇರುತ್ತೆ.

ಹಾಗೆಯೇ ಅವನ ಅರಮನೆಯಲ್ಲಿ ಬರೋಬ್ಬರಿ 1788 ಕೋಣೆಗಳಿವೆ ಇದು 52 ಎಕರೆಗಳಲ್ಲಿ ಕಟ್ಟಿರುವ ವಿಸ್ತರವಾದ ಅರಮನೆ. ಅರಮನೆ ವಿಶಿಷ್ಟವಾದ ಗಿನ್ನಿಸ್ ದಾಖಲೆಯಲ್ಲೂ ಸಹ ಒಂದು ರೆಕಾರ್ಡ್ ಮಾಡಿರುವುದು ಸುಳ್ಳಲ್ಲ, ನೋಡಿದ್ರಲ್ಲ ಸ್ನೇಹಿತರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸುಲ್ತಾನ್ ಹಸ್ಸನಲ್ ಬೊಲ್ಕಿಅಹ್ ಅವರ ಆಡಂಬರ ಜೀವನದ ಮತ್ತು ಶ್ರೀಮಂತಿಕೆ ಬಗೆಗಿನ ಒಂದು ಸ್ವಾರಸ್ಯಕರವಾದ ಮಾಹಿತಿ ಇದು

Comments are closed.