ಖ್ಯಾತ ನಟಿ ಸುಮಿತ್ರಾ ರವರ ಮಕ್ಕಳು ಕೂಡ ಖ್ಯಾತ ನಟಿಯರು ! ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಹಿರಿಯ ನಟಿಯರು ಇದೀಗ ಪೋಷಕ ಪಾತ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ, ಮೊದಲು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರಾಗಿ ಮಿಂಚಿ ಇದೀಗ ಪೋಷಕ ನಟಿಯಾಗಿಯೂ ಕೂಡ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಪೋಷಕ ನಟಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸ ನಟಿಯರ ಪಾತ್ರದಲ್ಲಿ ಯಶಸ್ಸು ಕಂಡ ನಟಿಯರ ಸಾಲಿನಲ್ಲಿ ಸುಮಿತ್ರಾ ರವರ ಹೆಸರು ಅಗ್ರ ಸಾಲಿನಲ್ಲಿ ಕೇಳಿ ಬರುತ್ತದೆ, ಕೇವಲ ಕನ್ನಡ ಅಷ್ಟೇ ಅಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಕೂಡ ನಟಿಸಿರುವ ಸುಮಿತ್ರ ರವರು ಕಳೆದ 40 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.

ಇನ್ನು ಸುಮಿತ್ರ ರವರು ರಾಜೇಂದ್ರ ಬಾಬು ಎಂಬವರೊಂದಿಗೆ ಮದುವೆಯಾಗಿದ್ದು ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರು ಮತ್ತ್ಯಾರು ಅಲ್ಲ ಕನ್ನಡ ಕಿರುತೆರೆಯಲ್ಲಿ ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿರುವ ಉಮಾಶಂಕರಿ ಮತ್ತು ನಕ್ಷತ್ರ. ಉಮಾಶಂಕರಿ ರವರು ಉಪೇಂದ್ರರವರ ಜೊತೆ ಉಪ್ಪಿದಾದ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ, ಇನ್ನು ನಕ್ಷತ್ರರವರು ಹರೆರಾಮ ಹರಿಕೃಷ್ಣ ಗೋಕುಲ ಸಿನಿಮಾ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಇವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

Comments are closed.