ಅಪ್ಪಿ ತಪ್ಪಿಯೂ ಕೂಡ ಹಾಲು ಉಣಿಸುವ ತಾಯಂದಿರು ಈ ತಪ್ಪುಗಳನ್ನು ಮಾಡಲೇಬೇಡಿ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ, ತಾಯಿಯಾಗುವುದು, ಮಗುವನ್ನೆ ಹೆರುವುದು ಎಂದರೆ ಹೆಣ್ಣಿಗೆ ಸೌಭಾಗ್ಯ. ಆಕೆ ತುಂಬಾ ಪ್ರೀತಿಯಿಂದ ಮಗುವನ್ನು ಹೆರುತ್ತಾಳೆ. ಹೆತ್ತು ಮಗುವಿನ ಲಾಲನೆ ಪೋಷಣೆಯಲ್ಲಿ ತನ್ನ ಜೀವನವನ್ನೇ ಸವೆಸುತ್ತಾಳೆ. ಆದರೆ ಆಕೆಯ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದೇ ಇಲ್ಲ. ಇದು ಮಗುವಿನ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಹೌದು ಮಗುವಿಗೆ ಸಕಲ ಪೌಷ್ಠಿಕಾಂಶಗಳೂ ಇರುವ ಒಂದೇ ಒಂದು ಸಂಪೂರ್ಣ ಆಹಾರ ಎಂದರೆ ಅದು ತಾಯಿಯ ಎದೆಹಾಲು. ಮಗುವಿಗೆ ಆರು ತಿಂಗಳವರೆಗೆ ತಪ್ಪದೇ ಎದೆಹಾಲನ್ನು ಮಾತ್ರ ಕುಡಿಸಬೇಕು. ನಂತರ ಇತರ ಆಹಾರದ ಜೊತೆಗೆ ಒಂದು ವರ್ಷದ ವರೆಗೆ ಎದೆಹಾಲು ಕೊಡುವುದನ್ನು ನಿಲ್ಲಿಸಲೇಬಾರದು. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಎದೆಹಾಲು ಉಣಿಸುವುದನ್ನು ಬಹುಬೇಗ ತಪ್ಪಿಸಿಬಿಡುತ್ತಾರೆ. ಇದು ಖಂಡಿತವಾಗಿಯೂ ತಪ್ಪು.

ಇನ್ನು ಮಗುವಿಗೆ ಎದೆಹಾಲು ಕುಡಿಸುವ ಸಮಯದಲ್ಲಿ ತಾಯಂದಿರು ಕೆಲವು ಆಹಾರ ಪದಾರ್ಥಗಳನ್ನು ಖಡ್ಡಾಯವಾಗಿ ತ್ಯಜಿಸಬೇಕು. ಗರ್ಭಿಣಿಯಾಗಿದ್ದಾಗ ಎಲ್ಲವನ್ನೂ ಸೇವಿಸಬಹುದಾಗಿದ್ದರೂ ಬಾಳಂತನದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ ಅಂತ ಆಹಾರಗಳು ಯಾವವು ಹೇಳ್ತಿವಿ ಕೇಳಿ. ಮೊದಲನೆಯದಾಗಿ ಪ್ಯಾಕೆಟ್ ಗಳಲ್ಲಿ ಬರುವ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲೇಬಾರದು. ಇದರಲ್ಲಿ ಆಹಾರ ಕೆಡಬಾರದು ಎಂದು ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇದನ್ನು ಸೇವಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಬೀರುತ್ತದೆ.

ಇನ್ನು ಕೆಫಿನ್ ಸೇವನೆ. ಅತಿಯಾದ ಕೆಫಿನ್ ದೇಹಕ್ಕೆ ಒಳ್ಳೆಯದಲ್ಲ. ಇದು ಎದೆಹಾಲು ಕುಡಿಯುವ ಮಕ್ಕಳಿಗೂ ಒಳ್ಳೆಯದಲ್ಲ. ಹಾಗಾಗಿ ದಿನದಲ್ಲಿ ಒಂದು ಅಥವಾ ಎರಡು ಬಾರಿಗಿಂತ ಹೆಚ್ಚು ಸಲ ಕಾಫಿ ಕುಡಿಯಬಾರದು. ಜೊತೆಗೆ ಚಾಕಲೇಟ್ ಗಳನ್ನೂ ಸೇವಿಸಬಾರದು ಇದರಲ್ಲಿರುವ ಥಿಯೋಬ್ರೋಮಿನ್ ಅಂಶ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಉಪ್ಪು ಹಾಗೂ ಸಕ್ಕರೆಯ ಪ್ರಮಾಣವನ್ನೂ ಕೂಡ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಸೇರಿಸಬೇಕು. ಹೀಗೆ ಮಾಡಿದರೆ ಮಗುವಿನ ಆರೋಗ್ಯ ಆರಂಭದಿಂದಲೇ ಉತ್ತಮವಾಗಿರುತ್ತದೆ.

Comments are closed.