ಪ್ರಯಾಣದ ಸಂದರ್ಭದಲ್ಲಿ ಸಮಸ್ಯೆಗಳಿಂದ ಬಚಾವಾಗಲು ಈ ಮನೆಮದ್ದುಗಳನ್ನು ಉಪಯೋಗಿಸಿ ನೋಡಿ, ಎಷ್ಟೆಲ್ಲಾ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರಯಾಣದ ಸಂದರ್ಭದಲ್ಲಿ ಹಲವರಿಗೆ ಸಾಕಷ್ಟು ಸಂತೋಷ ಇರುತ್ತದೆ ಹಾಗೂ ಲವಲವಿಕೆಯಿಂದ ಇರುತ್ತಾರೆ. ಆದರೆ ಇನ್ನು ಹಲವರಿಗೆ ವಾಂತಿ ಬರುವುದು ಹಾಗೂ ಭಯ ಆಗುವುದು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಯಾಣ ಎನ್ನುವುದು ಖಂಡಿತವಾಗಿ ಎಲ್ಲರಿಗೂ ಕೂಡ ಖುಷಿ ಕೊಡುವಂತಹ ವಿಷಯವಲ್ಲ. ನೀವು ಕೂಡ ಪ್ರಯಾಣ ಮಾಡುವ ಸಂದರ್ಭದಲ್ಲಿ ಈ ವಿಚಾರಗಳಿಂದ ಬಳಲುತ್ತಿದ್ದರೆ ಇಲ್ಲಿದೆ ನೋಡಿ ಮನೆಮದ್ದು ಅವುಗಳು ನಿಮಗೆ ಈ ವಿಚಾರಗಳಿಂದ ಹೊರಬರಲು ಸಹಕಾರಿಯಾಗಿರುತ್ತದೆ.

ಲಿಂಬು ಲಿಂಬು ವಿನಲ್ಲಿ ವಿಟಮಿನ್ ಸಿ ಅಂಶ ಹಾಗೂ ಸಿಟ್ರಿಕ್ ಆಸಿಡ್ ಇದ್ದು ಇದನ್ನು ನೀವು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ವಾಂತಿ ಬರುತ್ತದೆ ಎಂಬುದಾಗಿ ಅನಿಸಿದಾಗ ಬಿಸಿನೀರಿನಲ್ಲಿ ಲಿಂಬುವನ್ನು ಸೇರಿಸಿ ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಕುಡಿದರೆ ಈ ಸಮಸ್ಯೆಯಿಂದ ಹೊರಬರಬಹುದು. ಶುಂಠಿ ನೀವು ಎಲ್ಲೇ ಪ್ರಯಾಣಮಾಡಲು ಹೋದಾಗಲೂ ವಾಂತಿ ಅಥವಾ ಭಯವಾಗುವ ಸನ್ನಿವೇಶ ಬಂದಾಗ ಹಸಿಶುಂಠಿಯ ತುಂಡುಗಳನ್ನು ಬಾಯಲ್ಲಿ ಹಾಕಿ ಅದನ್ನು ಚೀಪಲು ಪ್ರಾರಂಭಿಸಿ. ಇದರಲ್ಲಿರುವ ಆಯುರ್ವೇದಿಕ ಅಂಶಗಳು ನಿಮಗೆ ನೆಮ್ಮದಿಯನ್ನು ನೀಡುತ್ತದೆ.

ಅಜ್ವಾನ್ ಪ್ರಯಾಣದ ಸಂದರ್ಭದಲ್ಲಿ ಅಜ್ವಾನ್ ನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗುವುದರಿಂದ ನಿಮಗೆ ಸಾಕಷ್ಟು ನೆಮ್ಮದಿಯ ಲಾಭಗಳು ಉಪಯೋಗವಾಗುತ್ತದೆ. ಲವಂಗ ಇನ್ನೂ ಒಂದು ವೇಳೆ ಪ್ರಯಾಣದ ಸಂದರ್ಭದಲ್ಲಿ ನಿಮಗೆ ವಾಂತಿ ಬರುತ್ತದೆ ಎಂದು ಅನಿಸಿದಾಗ ಲವಂಗದ ಚೂರುಗಳನ್ನು ಬಾಯಲ್ಲಿ ಇಟ್ಟುಕೊಂಡರೆ ಸಾಕು ನಿಮಗೆ ಇದರಿಂದ ಮುಕ್ತಿ ಸಿಗುತ್ತದೆ. ತುಳಸಿ ಎಲೆಗಳು ತುಳಸಿ ಎಲೆಗಳಲ್ಲಿ ಪುರಾತನಕಾಲದಿಂದಲೂ ಕೂಡ ದೇವತೆಗಳು ನೆಲೆಸಿದ್ದಾರೆ ಎಂಬ ಮಾತಿದೆ. ಇನ್ನೂ ಇದರ ರಸವನ್ನು ಪ್ರಯಾಣದ ಸಂದರ್ಭದಲ್ಲಿ ತೆಗೆದುಕೊಂಡು ಹೋಗುವುದರಿಂದ ನಿಮಗೆ ಸಾಕಷ್ಟು ವಿಷಯಗಳಿಂದ ನೆಮ್ಮದಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವಿಷ್ಟು ಮನೆಮದ್ದುಗಳನ್ನು ಪ್ರಯಾಣದ ಸಂದರ್ಭದಲ್ಲಿ ನೀವು ಬಳಸುವುದು ಉತ್ತಮವಾಗಿದೆ.

Comments are closed.