ತ್ವಚೆಯಲ್ಲಿರುವ ಕಪ್ಪು ಕಲೆಗೆ, ಮೊಡವೆಗಳಿಗೆ ದುಬಾರಿ ಕ್ರೀಮ್ ಗಳ ಬದಲು ಈ ಚಿಕ್ಕ ಚಿಕ್ಕ ಮನೆಮದ್ದು ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ ಮೊದಲಿಗೆ ತ್ವಚೆಯ ಕುರಿತಂತೆ ಕೇವಲ ಹೆಣ್ಣು ಮಕ್ಕಳು ಮಾತ್ರ ಧ್ಯಾನ ವಹಿಸುತ್ತಿದ್ದರು ಹಾಗೂ ಅದರ ಕುರಿತಂತೆ ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತಿದ್ದರು. ಆದರೆ ಈಗ ಹುಡುಗರು ಕೂಡ ತ್ವಚೆಯ ಕುರಿತಂತೆ ಸಾಕಷ್ಟು ಜಾಗೃತಿ ವಹಿಸಲು ಆರಂಭಿಸಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಆಗಲಿ ಅಥವ ಹುಡುಗಿಯರಿಗೇ ಆಗಲಿ ತ್ವಚೆಯಲ್ಲಿ ಕಪ್ಪುಚುಕ್ಕೆಗಳು ಎನ್ನುವುದು ಸಾಕಷ್ಟು ಸಮಸ್ಯೆಯನ್ನು ಒಡ್ಡುತ್ತಿವೆ. ಹೌದು ಸ್ನೇಹಿತರೆ ತ್ವಚೆಯನ್ನು ಹಾಳು ಗೆಡುವಲ್ಲಿ ಕಪ್ಪು ಕಲೆ ಸಾಕಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಇನ್ನು ಇವುಗಳು ಚಿಕ್ಕ ಚಿಕ್ಕ ಮೊಡವೆ ಅಂತೆ ಆಗುತ್ತಾ ನಂತರ ಕಪ್ಪು ಬಣ್ಣಕ್ಕೆ ತಿರುಗಿ ಇವುಗಳನ್ನೇ ಬ್ಲಾಕ್ ಹೆಡ್ಸ್ ಎಂದು ಕರೆಯುತ್ತಾರೆ. ಇನ್ನು ಇವುಗಳು ಆಗುವುದು ಕೊಳೆಗಳು ಒಂದೇ ಜಾಗದಲ್ಲಿ ಸಂಗ್ರಹವಾಗುವುದು ರಿಂದಾಗಿ. ಇನ್ನು ಇವುಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದನ್ನು ನಾವು ಇಂದು ನಿಮಗೆ ಹೇಳಲು ಹೊರಟಿದ್ದೇವೆ. ಬೇಕಿಂಗ್ ಸೋಡಾ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡ ನಂತರ ಕೆಲವೇ ಸೆಕೆಂಡಿನಲ್ಲಿ ತೊಳೆದು ಅದಕ್ಕೆ ಐಸ್ ಗಡ್ಡೆಯನ್ನು ತಿಕ್ಕಿದರೆ ಸಾಕು ಕಪ್ಪುಕಲೆಗಳನ್ನು ಹೋಗಲಾಡಿಸುವುದು ಮಾತ್ರವಲ್ಲ ಮತ್ತೆಂದು ಬೆಳೆಯದಂತೆ ಕೂಡ ಮಾಡುತ್ತದೆ.

ಅಲೋವೆರಾ ಜೆಲ್ ಮುಖದಲ್ಲಿ ಕಪ್ಪು ಕಲೆ ಇರುವ ಜಾಗಕ್ಕೆ ಅಲೋವೆರ ಜೆಲ್ ಅನ್ನು ಹಾಕಿ 10 ನಿಮಿಷ ಬಿಟ್ಟು ಅದನ್ನು ತೊಳೆದರೆ ಸಾಕು ಕಪ್ಪು ಕಲೆ ಹೋಗುವುದರೊಂದಿಗೆ ಮುಖ ಸ್ವಚ್ಛವಾಗಿ ಕೂಡ ಕಾಣಿಸುತ್ತದೆ. ನಿಂಬು ಲಿಂಬು ಹಾಗೂ ಮೊಸರನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ನಂತರ ತಣ್ಣೀರಿನಿಂದ ತೊಳೆದರೆ ಸಾಕು ಕಪ್ಪು ಕಲೆಗಳು ಮಾಯವಾಗುತ್ತದೆ. ಚಾರ್ಕೋಲ್ ಈ ಚಾರ್ಕೋಲ್ ನೊಂದಿಗೆ ಕೆಲವು ಹನಿಗಳಷ್ಟು ಲಿಂಬು ರಸವನ್ನು ಉಪಯೋಗ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸಾಕು ಕಪ್ಪು ಕಲೆಗಳು ತನ್ನಿಂತಾನಾಗಿ ಮಾಯವಾಗುತ್ತದೆ. ಸ್ಟ್ರಿಪ್ಸ್ ಮಾರುಕಟ್ಟೆಯಲ್ಲಿ ಸಿಗುವ ಸ್ಟ್ರಿಪ್ಸ್ ಅನ್ನು ನೀವು ಕಪ್ಪು ಕಲೆ ಇರುವ ಜಾಗಕ್ಕೆ ಹಾಕಿ ತೆಗೆದರೆ ಖಂಡಿತವಾಗಿಯೂ ಇದು ಕೂಡ ಕೆಲಸ ಮಾಡುತ್ತದೆ. ಟೂತ್ಪೇಸ್ಟ್ ತುಳಸಿ ಎಲೆಯ ಟೂತ್ಪೇಸ್ಟ್ ಅನ್ನು ಕಪ್ಪು ಕಲೆ ಜಾಗಕ್ಕೆ ಹಾಕಿ ಒಣಗಲು ಬಿಡಬೇಕು. ನಂತರ ಒದ್ದೆಯಾಗಿರುವ ಟವೆಲ್ಲಿನಿಂದ ಆ ಜಾಗವನ್ನು ಒರೆಸಿಕೊಳ್ಳಬೇಕು. ಇದರಿಂದಾಗಿ ಕೂಡ ಕಪ್ಪು ಕಲೆ ತೆಗೆಯಲು ಸಹಕಾರಿಯಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Comments are closed.