ಮನೆಯವರೆಲ್ಲ ಬೇಡ ಬೇಡ ಎನ್ನುವ ಉಪ್ಪಿಟ್ಟಿನ ಬದಲು, ಈ ರೀತಿ ಉಪ್ಪಿಟ್ಟು ಮಾಡಿ, ಕೇಳಿ ಕೇಳಿ ಮಾಡಿಸಿಕೊಂಡು ತಿಂತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಉಪ್ಪಿಟ್ಟು ಅತ್ಯಂತ ಸುಲಭವಾಗಿ ಮಾಡಬಹುದಾದ ಒಂದು ಉಪಹಾರ. ಇದನ್ನು ನಮಗೆ ಬೇಕಾದ ರೀತಿ, ಬೇಕಾದ ತರಕಾರಿಗಳನ್ನು ಹಾಕಿಕೊಂಡು ತಯಾರಿಸಬಹುದು. ಇಂದು ನಾವಿಲ್ಲಿ ಎಲ್ಲರಿಗೂ ಇಷ್ಟವಾಗುವಂಥ ಹಾಗೂ ಆರೋಗ್ಯಕರವಾದ ಕ್ಯಾರೆಟ್ ಉಪ್ಪಿಟ್ಟು ತಯಾರಿಸೋದು ಹೇಗೆ ಎಂಬುದನ್ನು ತಿಳಿಸ್ತೀವಿ ಮುಂದೆ ಓದಿ.

ಕ್ಯಾರೆಟ್ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು: ಒಂದು ಕಪ್ ರವೆ, ನಾಲ್ಕು ಚಮಚ ಎಣ್ಣೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಉದ್ದಿನಬೇಳೆ, ಎರಡು ಹಸಿಮೆಣಸಿನಕಾಯಿ, ಕರಿಬೇವು, ಒಂದು ಕಪ್ ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಮೂರು ಕಪ್ ನೀರು, ಹಿಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬಾಣಲೆಗೆ ಒಂದು ಕಪ್ ರವೆ ಹಾಕಿ, ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ. ಇದು ಹೆಚ್ಚು ಕಪ್ಪಾಗದಂತೆ ನೋಡಿಕೊಳ್ಳಿ. ಹುರಿಯುವುದನ್ನು ನಿಲ್ಲಿಸಿದರೆ ರವೆ ಸೀದುಹೋಗುತ್ತದೆ. ಹಾಗಾಗಿ ರವೆ ಹುರಿಯುವಾಗ ಜಾಗ್ರತೆ ಮಾಡಿ. ಹುರಿದ ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ತೆಗೆದಿಡಿ.

ನಂತರ ಅದೇ ಬಾಣಲೆಗೆ ಎಣ್ಣೆಹಾಕಿ ಕಾದ ಬಳಿಕ ಸಾಸಿವೆ, ಉದ್ದಿನಬೇಳೆ, ಹಿಂಗು, ಹಸಿಮೆಣಸಿನಕಾಯಿ, ಕರಿಬೇವು, ಕ್ಯಾರೆಟ್, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತರ ಮೂರು ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಬೇಕು. ಕುದಿ ಬಂದ ನಂತರ ಹುರಿದಿಟ್ಟ ರವೆ ಸೇರಿಸಿ ಗಂಟುಗಂಟಾಗದಂತೆ ಚೆನ್ನಾಗಿ ಮಿಕ್ಸ್ ಮಾಡಬೇಕು. ನೀರು ಆರುತ್ತಾ ಬಂದಂತೆ ಕಾಯಿತುರಿ, ಸ್ವಲ್ಪ ಲಿಂಬೆರಸ ಸೇರಿಸಿ ಒಂದು ನಿಮಿಷಗಳ‌ಕಾಲ ಮುಚ್ಚಳ ಮುಚ್ಚಿ ಬೇಯಿಸಿ ನಂತರ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಕರವಾದ ಕ್ಯಾರೆಟ್ ಉಪ್ಪಿಟ್ಟು ಸವಿಯಲು ಸಿದ್ಧ. ಕೆಳಗೆ ಈ ರೆಸಿಪಿಯ ವಿಡಿಯೋವನ್ನು ಕೊಡಲಾಗಿದೆ.

Comments are closed.