ನೀವು ಊಟ ಮಾಡುತ್ತಿದ್ದಾಗ ಈ ತಪ್ಪುಗಳನ್ನು ಮಾಡುತ್ತಿದ್ದರೇ ದಯವಿಟ್ಟು ನಿಲ್ಲಿಸಿ !

ನಮಸ್ಕಾರ ಸ್ನೇಹಿತರೇ, ಧರ್ಮಶಾಸ್ತ್ರದ ಪ್ರಕಾರ ಊಟ ಮಾಡುವಾಗಲೂ ಕೂಡ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಇವುಗಳ ಕುರಿತು ಯಾರು ಗಮನ ಹರಿಸುವುದಿಲ್ಲವಾದರೂ ಧಾರ್ಮ ಧರ್ಮಶಾಸ್ತ್ರದ ಪ್ರಕಾರ ಅನುಸರಿಸಿದರೇ ಉತ್ತಮ ಲಾಭಗಳಿವೆ ಎಂಬುದು ತಿಳಿದುಬರುತ್ತದೆ. ಮೊದಲನೆಯದಾಗಿ ನೀವು ಎಷ್ಟೇ ಬ್ಯುಸಿ ಇದ್ದರೂ ಕೂಡ ಈಗಾಗಲೇ ಊಟ ಬಡಿಸಿರುವ ತಟ್ಟೆಯ ಮುಂದೆ ಕುಳಿತು ಕೊಳ್ಳಬಾರದು. ನೀವು ಸಿದ್ದವಾದ ಬಳಿಕ ಊಟ ಬಡಿಸಿಕೊಂಡು ತಿನ್ನುವುದನ್ನು ಆರಂಭಿಸಬೇಕು. ಯಾಕೆಂದರೆ ನಾವು ಅನ್ನಕ್ಕಾಗಿ ಕಾಯಬೇಕೇ ಹೊರತು ಅನ್ನ ನಮಗಾಗಿ ಕಾಯಬಾರದು. ಹಾಗೆ ಮಾಡುವುದರಿಂದ ಮುಂಬರುವ ವರ್ಷಗಳಲ್ಲಿ ಅನ್ನದ ಕೊರತೆ ಕಾಣುವ ಪರಿಸ್ಥಿತಿ ಉಂಟಾಗಬಹುದು.

ಇನ್ನು ನೀವು ಊಟಕ್ಕೆ ಕುಳಿತುಕೊಳ್ಳುವಾಗ ಸ್ವಚ್ಛವಾದ ಬಟ್ಟೆ ಧರಿಸಿ, ಅಷ್ಟೇ ಅಲ್ಲದೇ ತಿನ್ನುವ ಮೊದಲು ನಿಮ್ಮ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಿರಿ. ಕುಳಿತು ತಿನ್ನುವುದು ಉತ್ತಮ. ಅನಾರೋಗ್ಯ, ದುರ್ಬಲ, ವೃದ್ಧರು ಮತ್ತು ಶುಶ್ರೂಷಾ ತಾಯಂದಿರ ವಿಷಯದಲ್ಲಿ ಇವುಗಳನ್ನು ಅನುಸರಿಸದೇ ಇದ್ದರೂ ಪರವಾಗಿಲ್ಲ ಆದರೆ ಸಾಧ್ಯವಾದಷ್ಟು ದಿವಸ ಈ ನಿಯಮಗಳನ್ನು ಪಾಲಿಸಿ.

ಯಾವುದೇ ದಿಕ್ಕಿನಲ್ಲಿ ಕುಳಿತು ಊಟ ಮಾಡ ಬಹುದಾಗಿದೆ ಆದರೆ ಪೂರ್ವಕ್ಕೆ ಕುಳಿತು ಊಟ ಮಾಡುವುದು ಉತ್ತಮವಾಗಿದೆ ಎಂದು ಧರ್ಮ ಶಾಸ್ತ್ರ ಹೇಳುತ್ತದೆ., ಏಕೆಂದರೆ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ದೀರ್ಘಾಯುಷ್ಯ ಬರುತ್ತದೆ. ಪೂರ್ವ ದಿಕ್ಕಿನಲ್ಲಿ ಇಂದ್ರನು ಪ್ರಾಬಲ್ಯ ಹೊಂದಿದ್ದಾನೆ ಮತ್ತು ಸೂರ್ಯನ ವಾಸಸ್ಥಾನವಾಗಿದೆ. ಪಶ್ಚಿಮಕ್ಕೆ ಎದುರಾಗಿ ಕುಳಿತುಕೊಳ್ಳುವುದರಿಂದ ಸಾಮರ್ಥ್ಯ ಬರುತ್ತದೆ. ಸಂಪತ್ತು ಉತ್ತರಕ್ಕೆ ಎದುರಾಗಿ ಕುಳಿತುಕೊಳ್ಳುವುದರಿಂದ ಬರುತ್ತದೆ. ದಕ್ಷಿಣಕ್ಕೆ ಎದುರಾಗಿ ಕುಳಿತುಕೊಳ್ಳುವುದರಿಂದ ಖ್ಯಾತಿ ಬರುತ್ತದೆ ಎಂದು ಧರ್ಮ ಶಾಸ್ತ್ರ ಹೇಳುತ್ತದೆ.

ಇನ್ನು ನೀವು ಊಟಕ್ಕೆ ಕುಳಿತಿರುವಾಗ ಅನ್ನ ಬಡಿಸುವುವರನ್ನು ಗದರಿಸಬೇಡಿ. ಅಳುತ್ತ ಊಟ ಮಾಡಬೇಡಿ. ಯಾವುದೇ ಪರಿಸ್ಥಿತಿಯಲ್ಲಿ ಅನ್ನವನ್ನು ತೊಡೆಯ ಮೇಲೆ ತಟ್ಟೆ ಇಟ್ಟುಕೊಂಡು ತಿನ್ನೆಬೇಡಿ, ಏಕೆಂದರೆ ಅದು ಒಳ್ಳೆಯದಲ್ಲ. ಊಟದ ಸಮಯದಲ್ಲಿ ನಗುವುದು, ಕೂಗುವುದು, ಶಪಥ ಮಾಡುವುದು ಮತ್ತು ಕೀಟಲೆ ಮಾಡುವುದು ಮಾಡಬಾರದು. ಅಷ್ಟೇ ಅಲ್ಲದೇ ಊಟದ ನಂತರ ಎಲೆಗಳನ್ನು ಮತ್ತು ತಟ್ಟೆಯನ್ನು ಎತ್ತುವ ವ್ಯಕ್ತಿಗೆ ಬರುವ ಸದ್ಗುಣವು ಬೇರೆ ಯಾರಿಗೂ ಸಹ ಬರುವುದಿಲ್ಲ.

Comments are closed.