ಇಂದು ಏಕಾದಶಿ, ಈ ವೈಕುಂಠ ಏಕಾದಶಿಯಂದು ಈ ಮಂತ್ರಗಳನ್ನು ಪಠಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಶ್ರೀ ಮಹಾವಿಷ್ಣು.

ನಮಸ್ಕಾರ ಸ್ನೇಹಿತರೇ ವೈಕುಂಟ ಏಕಾದಶಿಯ ಈ ದಿನ (ಡಿಸೆಂಬಂರ್ ೧೪) ಉಪವಾಸ ಮಾಡಿದರೆ ಅದು ಭಗವಾನ್ ಮಹಾವಿಷ್ಣುವಿನ ಕ್ರಪೆಗೆ ಪಾತ್ರರಾಗಲು ಸಾಧ್ಯವಾಗಿತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಭಕ್ತರ ಎಲ್ಲಾ ಇಷ್ಟಾರ್ಧಗಳನ್ನು ಇಡೇರಿಸಬಲ್ಲ ಮಹಾವಿಷ್ಣುವಿನ ಪೂಜೆಯನ್ನು ಹಾಗೂ ಉಪವಾಸವನ್ನು ಈ ದಿನ ಸರಿಯಾಗಿ ನೆರವೇರಿಸಬೇಕು.

krishna 1 | ಇಂದು ಏಕಾದಶಿ, ಈ ವೈಕುಂಠ ಏಕಾದಶಿಯಂದು ಈ ಮಂತ್ರಗಳನ್ನು ಪಠಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಶ್ರೀ ಮಹಾವಿಷ್ಣು.
ಇಂದು ಏಕಾದಶಿ, ಈ ವೈಕುಂಠ ಏಕಾದಶಿಯಂದು ಈ ಮಂತ್ರಗಳನ್ನು ಪಠಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಶ್ರೀ ಮಹಾವಿಷ್ಣು. 2

ಇಂದು ಸ್ನಾನ, ಪೂಜೆಗಳನ್ನು ಮುಗಿಸಿ ಉಪವಾಸ ಸಂಕಲ್ಪ ಕೈಗೊಂಡು ಇಡೀ ದಿನ ಆಹಾರವನ್ನು ಸೇವಿಸದೇ ದೇವರ ಧ್ಯಾನದಲ್ಲಿಯೇ ತೊಡಗಬೇಕು. ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ, ಅಲಂಕರಿಸಿ ಮಹಾವಿಷ್ಣುವಿನ ಕಥೆಯನ್ನು ಕೇಳಬೇಕು ಅಥವಾ ಓದಬೇಕು. ಇದರಿಂದ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು. ಇವುಗಳ ಜೊತೆಗೆ ಮನಸ್ಸಿನ ಸಂತೋಷ, ಆರ್ಥಿಕ ಸಮೃದ್ಧಿಗಾಗಿ ವಿಷ್ಣು ಹಾಗೂ ಲಕ್ಷ್ಮಿ ಸ್ತೋತ್ರಗಳನ್ನೂ ಪಠಿಸಬೇಕು. ಹಾಗಾದರೆ ಯಾವ ಮಂತ್ರ ಪಠಿಸಿದರೆ ನಮ್ಮ ಯಾವ ಇಷ್ಟಾರ್ಧಗಳು ಸಿದ್ಧಿಯಾಗುತ್ತವೆ. ಆ ಮಂತ್ರಗಳು ಯಾವವು ನಾವಿಲ್ಲಿ ಹೇಳಿದೀವಿ ನೋಡಿ.

ಆರ್ಥಿಕ ಬಲಕ್ಕಾಗಿ, ಐಶ್ಚರ್ಯ ಪ್ರಾಪ್ತಿಗಾಗಿ ಈ ಮಂತ್ರ ಜಪಿಸಬೇಕು: ”ಓಂ ಭೂರಿದ ಭೂರಿ ದೇಹಿನೋ, ಮಾ ದಭ್ರಂ ಭೂರ್ಯಾ ಭರ| ಭೂರಿ ಘೇದಿಂದ್ರ ದಿತ್ಸಸಿ| ಓಂ ಭೂರಿದ ತ್ಯಸಿ ಶ್ರುತಃ ಪುರೂತ್ರಾ ಶೂರ ವೃತ್ರಹನ್‌| ಆ ನೋ ಭಜಸ್ವ ರಾಧಸಿ|”

ಸಂತೋಷ ಮತ್ತು ಮನಸ್ಸಿನ ಶಾಂತಿಗಾಗಿ ವಿಷ್ಣು ಗಾಯತ್ರಿ ಮಂತ್ರ ಜಪಿಸಬೇಕು: ”ಓ ನಾರಾಯಣಾಯ ವಿದ್ಮಹೇ| ವಾಸುದೇವಾಯ ಧೀಮಹೀ| ತನ್ನೋ ವಿಷ್ಣು ಪ್ರಚೋದಯಾತ್‌||” ಸಾಧ್ಯವಾದಷ್ಟು ಬಾರಿ “ಓಂ ನಮೋ ಭಗವತೇ ವಾಸುದೇವಾಯ” ಎಂದು ಪಠಿಸಬೇಕು. ”ಮಂಗಲಂ ಭಗವಂತ ವಿಷ್ಣುಃ| ಮಂಗಳಂ ಗರುಣ್ಧ್ವಜಃ| ಮಂಗಲಂ ಪುಂಡರೀಕಾಕ್ಷಃ| ಮಂಗಳಾಯ ತನೋ ಹರಿಃ|” ಈ ಮಂತ್ರ ಪಠಿಸಿದರೆ ಮಂಗಳಕರ.

ವಿಷ್ಣು ಪೂಜಾ ಮಂತ್ರ ಹೀಗಿದೆ: “ಶಾಂತಾಕಾರಂ ಭುಜಂಗ ಶಯನಂ ಪದ್ಮ ನಾಭಂ ಸುರೇಶಂ| ವಿಶ್ವಾಧರಂ ಗಗನಸ್ದೃಶ್ಯಂ ಮೇಘವರ್ಣಂ ಶುಭಾಂಗಂ| ಲಕ್ಷ್ಮೀಕಾಂತಂ ಕಮಲ ನಯನಂ ಯೋಗಿಭಿರ್ಧ್ಯಾನ ನಗಮ್ಯಂ| ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕಕೇನಾಥಂ|”. ಈ ಮೇಲಿನ ಎಲ್ಲಾ ಮಂತ್ರಗಳನ್ನು ಅತ್ಯಂತ ಶ್ರದ್ಧೆಯಿಂದ, ಏಕಾಗ್ರತೆಯಿಂದ ಪಠಿಸಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳನ್ನೂ ಭಗವಂತನು ಈಡೇರಿಸುತ್ತಾನೆ.

Comments are closed.