ನೀವು ಸದಾ ಯಂಗ್ ಆಗಿ ಕಾಣಬೇಕ?? ಹೆಚ್ಚೇನೂ ಬೇಡ ಆಗಾಗ ಇವುಗಳನ್ನು ಸೇವಿಸಿ ಸಾಕು, ಸದಾ ಯಂಗ್ ಆಗಿ ಕಾಣುತ್ತೀರಾ.

ನಮಸ್ಕಾರ ಸ್ನೇಹಿತರೇ ಬಹುಬೇಗ ವಯಸ್ಸಾದಂತೆ ಕಾಣುವುದು ಯಾರಿಗೆ ತಾನೆ ಇಷ್ಟ ಹೇಳಿ? ಕಾಲಕ್ಕೆ ತಕ್ಕ ಹಾಗೆ ಬದಲಾಗುವುದು ಅಥವಾ ವಯಸ್ಸಾದಂತೆ ಮುಖದಲ್ಲಿ ಸುಕ್ಕು, ಕಲೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ ಅದನ್ನ ನಾವು ತಡೆಗಟ್ಟಲು ಸಾಧ್ಯವಿಲ್ಲ, ಆದರೆ ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲಿಯೇ ಮುಖದ ಸೌಂದರ್ಯ ಹಾಳಾಗುತ್ತೆ ಆ ಸಮಯದಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ.

vayassu | ನೀವು ಸದಾ ಯಂಗ್ ಆಗಿ ಕಾಣಬೇಕ?? ಹೆಚ್ಚೇನೂ ಬೇಡ ಆಗಾಗ ಇವುಗಳನ್ನು ಸೇವಿಸಿ ಸಾಕು, ಸದಾ ಯಂಗ್ ಆಗಿ ಕಾಣುತ್ತೀರಾ.
ನೀವು ಸದಾ ಯಂಗ್ ಆಗಿ ಕಾಣಬೇಕ?? ಹೆಚ್ಚೇನೂ ಬೇಡ ಆಗಾಗ ಇವುಗಳನ್ನು ಸೇವಿಸಿ ಸಾಕು, ಸದಾ ಯಂಗ್ ಆಗಿ ಕಾಣುತ್ತೀರಾ. 2

ಮುಖದ ಸೌಂದರ್ಯ ಹಾಳಾಗುವುದಕ್ಕೆ ನಮ್ಮ ಜೀವನ ಶೈಲಿಯೇ ಪ್ರಮುಖ ಕಾರಣ. ಹಾಗಾಗಿ ನಾವು ಆಹಾರ ವಿಚಾರದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನಮ್ಮ ತ್ವಚೆಯ ಆರೋಗ್ಯಕ್ಕೆ ವಿಟಮಿನ್ ಸಿ ಅಂಶ ಹೆಚ್ಚಾಗಿ ಬೇಕು. ಇದನ್ನು ನಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಬೇಕು. ಇನ್ನು ಮುಖದಲ್ಲಿನ ಸುಕ್ಕು ತೆಗೆಯಲು ಬಾಹ್ಯವಾಗಿ ಮಾಡಬಹುದಾದ ಮನೆಮದ್ದು ಎಂದರೆ, ನಿಂಬೆಹಣ್ಣು, ಮೂಸಂಬಿ, ಕಿತ್ತಳೆ ದ್ರಾಕ್ಷಿಹಣ್ಣಿನಂತ ವಿಟಮಿನ್ ಗಳು ಹೇರಳವಾಗಿರುವ ಹಣ್ಣಿನ ರಸವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖ ಕಾಂತಿಯುತವಾಗುತ್ತದೆ. ವಯಸ್ಸಾದ ಗೆರೆಗಳು ಕೂಡ ಮಾಸುತ್ತವೆ.

ಇನ್ನು ಒಂದು ಚಮಚ ನಿಂಬೆ ಹಣ್ಣಿನ ರಸ ಮತ್ತು ಒಂದು ಚಮಚ ಕೋಳಿ ಮೊಟ್ಟೆಯ ಬಿಳಿಭಾಗ ಜೊತೆಗೆ ಅರ್ಧ ಚಮಚ ಹಾಲಿನ ಕೆನೆ ಇವುಗಳನ್ನು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ವೃತ್ತಾಕಾರದಲ್ಲಿ ಮಸಾಜ್ ಮಾಡಿ ೧೫ ನಿಮಿಷಗಳ ಬಳಿಕ ತೊಳೆದರೆ ಮುಖದಲ್ಲಿನ ಸುಕ್ಕು, ಕಪ್ಪು ಕಲೆಗಳು ಮಾಯವಾಗುತ್ತವೆ. ಇನ್ನೊಂದು ಅತ್ಯುತ್ತಮ ಔಷಧಿ ಎಂದರೆ ನಿಂಬೆರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಸುಮಾರು ೨೦ ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರದಲ್ಲಿ ನಾಲ್ಕೈದು ಬಾರಿ ಹೀಗೆ ಮಾಡುವುದರಿಂದ ತ್ವಚೆಯ ಆರೋಗ್ಯ ಸುಧಾರಿಸುತ್ತದೆ. ಮೇಲಿನ ಕ್ರಮಗಳನ್ನು ನಿಯಮಿತವಾಗಿ ಪಾಲಿಸುವುದು ಹಾಗೂ ಆಹಾರ ಹಾಗೂ ಬದುಕುವ ಶೈಲಿಯಲ್ಲಿ ತುಸು ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ನಾವು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.

Comments are closed.