ಮೊದಲ ಬಾರಿಗೆ ಪವಿತ್ರ ರವರ ಕುರಿತು ಪ್ರತಿಕ್ರಿಯೆ ನೀಡಿದ ಸುಚೇಂದ್ರ ಪ್ರಸಾದ್, ನೀಡಿದ ಷಾಕಿಂಗ್ ಹೇಳಿಕೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರತಿಯೊಂದು ಚರ್ಚೆಗಳು ಹಾಗೂ ಕೇಂದ್ರೀಕೃತ ವಿಷಯಗಳು ನಡೆಯುತ್ತಿರುವುದು ಪವಿತ್ರ ಲೋಕೇಶ್ ಹಾಗೂ ನರೇಶ್ ರವರ ವಿಚಾರದ ಕುರಿತಂತೆ. ಇತ್ತೀಚಿಗಷ್ಟೇ ನರೇಶ ರವರು ಕೂಡ ಬೆಂಗಳೂರಿಗೆ ಬಂದು ಇದರ ಕುರಿತಂತೆ ಮಾತನಾಡಿ ಹೋಗಿರುವುದು ನಿಮಗೆ ತಿಳಿದಿದೆ. ಇನ್ನು ಈ ಕಡೆ ಪವಿತ್ರ ಲೋಕೇಶ್ ರವರು ಯಾವುದೇ ಪ್ರೆಸ್ ಮೀಟ್ ಅನ್ನು ಕರೆದಿಲ್ಲ. ಹೀಗಾಗಿ ಅವರಿಂದ ಈ ವಿಚಾರದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ ಎಂದು ಹೇಳಬಹುದಾಗಿದೆ.

ಆದರೆ ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಒಂದು ವಿಡಿಯೋದಲ್ಲಿ ಪವಿತ್ರ ಲೋಕೇಶ್ ಅವರ ಪತಿ ಆಗಿರುವ ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಲ್ಲೊಬ್ಬರಾಗಿರುವ ಸುಚೇಂದ್ರ ಪ್ರಸಾದ್ ರವರು ಈ ವಿಚಾರದ ಕುರಿತಂತೆ ತಮ್ಮ ಮೌನ ಮುರಿದಿರುವ ಕುರಿತಂತೆ ತಿಳಿದುಬಂದಿದೆ. ಹೌದು ಗೆಳೆಯರೇ ಹಿರಿಯ ಪತ್ರಕರ್ತರೊಬ್ಬರ ಜೊತೆಗೆ ಸುಚೇಂದ್ರ ಪ್ರಸಾದ್ ರವರು ಮಾತನಾಡಿರುವ ಫೋನ್ ಕಾಲ್ ಆಡಿಯೋ ಈಗಾಗಲೇ ಲೀಕ್ ಆಗಿದ್ದು ಅದರಲ್ಲಿರುವ ಸಾರಾಂಶದ ಕುರಿತಂತೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಈ ಕುರಿತಂತೆ ಸುಚೇಂದ್ರ ಪ್ರಸಾದ್ ರವರು ಪವಿತ್ರ ಲೋಕೇಶ್ ರವರ ಬಳಿ ಮಾತನಾಡಿದ್ದು ಅವರು ತಾನು ಹೀಗೆ ಮಾಡಿಲ್ಲ ಇದೆಲ್ಲವೂ ಸುಳ್ಳು ಎಂಬುದಾಗಿ ಹೇಳಿದ್ದಾರೆ ಎಂಬುದಾಗಿ ಸುಚೇಂದ್ರ ಪ್ರಸಾದ್ ರವರು ಹೇಳಿರುವ ಕುರಿತಂತೆ ಇಲ್ಲಿ ಉಲ್ಲೇಖವಾಗಿದೆ.

ಇಷ್ಟು ಮಾತ್ರವಲ್ಲದೆ ಪವಿತ್ರ ಲೋಕೇಶ್ ರವರಿಗೆ ಆಸೆ ಜಾಸ್ತಿ ಎಂಬುದಾಗಿ ಕೂಡ ಹೇಳಿದ್ದು ನರೇಶ್ ಅವರ ಪತ್ನಿ ರಮ್ಯಾರವರ ಕುರಿತಂತೆ ಕೂಡ ಸುಚೇಂದ್ರ ಪ್ರಸಾದ್ ರವರು ಮಾತನಾಡಿದ್ದು ಅವರ ಕುರಿತಂತೆ ಅನುಕಂಪವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಒಂದುವೇಳೆ ನರೇಶ್ ರವರ ಜೊತೆಗೆ ಪವಿತ್ರ ಲೋಕೇಶ್ ರವರು ಇದ್ದರೆ ಖಂಡಿತವಾಗಿ ಅಲ್ಲಿಯೂ ಕೂಡ ಆತನೊಂದಿಗೆ ಆರು ತಿಂಗಳು ಮಾತ್ರ ಇರುತ್ತಾರೆ ಎಂಬುದಾಗಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಿಚಾರ ಕಾರ್ಯಕ್ರಮಗಳಿಂದ ಕಾರ್ಯಕ್ರಮಕ್ಕೆ ಹಾಗೂ ವಾಹಿನಿಯಿಂದ ವಾಹಿನಿಗೆ ಹಲವಾರು ಆಯಾಮವನ್ನು ಪಡೆದುಕೊಳ್ಳುತ್ತಿದೆ. ಈ ಕುರಿತಂತೆ ಅತ್ಯಂತ ಪ್ರಮುಖವಾಗಿ ಸಂಬಂಧಪಟ್ಟವರು ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಮಾಡುವ ಮೂಲಕ ವಿಚಾರಕ್ಕೆ ತೆರೆಯುವುದು ಪ್ರಮುಖವಾಗಿದೆ ಎಂದು ಹೇಳಬಹುದಾಗಿದೆ.