ಇದೇ ಮೊದಲ ಬಾರಿಗೆ ಐಶ್ವರ್ಯಾ ರೈ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ ಶ್ವೇತಾ ಬಚ್ಚ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬದ ಬಗ್ಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ. ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಮಗಳು ಶ್ವೇತಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹೀಗೆ ಪ್ರತಿಯೊಬ್ಬರಿಗೂ ಬಣ್ಣದ ನಂಟು ಇದೆ. ಇದೇ ಮೊದಲ ಭಾರಿಗೆ ಬಿಗ್ ಬಿ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ತನ್ನ ಅತ್ತಿಗೆಯಾದ ಐಶ್ವರ್ಯಾ ರೈ ಬಚ್ಚನ್ ಮೇಲೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಹೌದು ಈ ಘಟನೆ ನಡೆದಿದ್ದು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ.

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಭಾಗವಹಿಸಿ ಮನಬಿಚ್ಚಿ ಮಾತನಾಡಿದರು. ಇದೇ ವೇಳೆ ರ್ಯಾಪಿಡ್ ಫೈರ್ ನಲ್ಲಿ ಭಾಗವಹಿಸಿದ ಶ್ವೇತಾ ಬಚ್ಚನ್ ತಮ್ಮ ಅತ್ತಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ಎಂದು ಟೈಮ್ ಮ್ಯಾನೇಜ್ ಮಾಡುವುದಿಲ್ಲ. ಹೇಳಿದ ಸಮಯಕ್ಕೆ ಎಂದಿಗೂ ಬರುವುದಿಲ್ಲ,

ಇದೇ ಮೊದಲ ಬಾರಿಗೆ ಐಶ್ವರ್ಯಾ ರೈ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ ಶ್ವೇತಾ ಬಚ್ಚ. ಯಾಕೆ ಗೊತ್ತೇ?? 2

ಇದರ ಜೊತೆ ನಾವು ಕಾಲ್ ಮಾಡಿದರೇ ತಕ್ಷಣ ಪಿಕ್ ಮಾಡುವುದಿಲ್ಲ, ಬಹಳ ಸಮಯದ ನಂತರ ವಾಪಸ್ ನಮಗೆ ಕಾಲ್ ಮಾಡುತ್ತಾರೆ. ಅತ್ತಿಗೆಯ ಈ ಗುಣ ನನಗೆ ಸಹ್ಯವಾಗುವುದಿಲ್ಲ ಎಂದು ಹೇಳಿದರು. 2007 ರಲ್ಲಿ ವಿವಾಹವಾದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ರವರಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ. ಅಭಿಷೇಕ್ ಇತ್ತಿಚೆಗೆ ಬಿಗ್ ಬುಲ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ವಿಶ್ವ ಸುಂದರಿಯಾಗಿದ್ದ ಐಶ್ವರ್ಯಾ ಈಗ ಗೃಹಿಣಿಯಾಗಿ , ಮಗಳಿಗೆ ತಾಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.