ಅಪ್ಪು ಸ್ವರ್ಗದಲ್ಲಿ ಇದ್ದರೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ, ಜೇಮ್ಸ್ ಚಿತ್ರಕ್ಕೆ ಭಾರಿ ಹೊಡೆತ; ಕಲೆಕ್ಷನ್ ಕಡಿಮೆಯಾಗಲಿದೆಯೇ, ಅಷ್ಟಕ್ಕೂ ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ಪ್ರತಿಯೊಬ್ಬ ಕನ್ನಡಿಗರು ಅದರಲ್ಲಿ ಕೂಡ ಫ್ಯಾಮಿಲಿ ಆಡಿಯನ್ಸ್ ಗುಂಪುಗುಂಪಾಗಿ ಹೌಸ್ಫುಲ್ ಚಿತ್ರಮಂದಿರಗಳಲ್ಲಿ ಕೂಡ ಛಲಬಿಡದ ತ್ರಿವಿಕ್ರಮನಂತೆ ನೋಡುತ್ತಿದ್ದಾರೆ ಎಂದರೆ ನಿಜಕ್ಕೂ ಕೂಡ ಮೆಚ್ಚಿಕೊಳ್ಳಲೇಬೇಕು.

ಪ್ರಿಯಾ ಆನಂದ್ ರವರು ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಜೇಮ್ಸ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲಿನಿಂದಲೂ ಕೂಡ ಅಪ್ಪು ಅವರಿಗೆ ನಿರ್ದೇಶನ ಮಾಡಬೇಕೆಂದು ಕನಸು ಕಂಡಿದ್ದ ಚೇತನ್ ಕುಮಾರ್ ಅವರು ಜೇಮ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿಶೋರ್ ಪತ್ತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರತಂಡ ಬಹು ತಾರಾಗಣವನ್ನು ಹೊಂದಿದೆ. ನಿಜಕ್ಕೂ ಕೂಡ ಒಂದು ಲೆಕ್ಕದಲ್ಲಿ ಹೇಳುವುದಾದರೆ ಬಹುತೇಕ ರಾಜಕುಮಾರ ಚಿತ್ರತಂಡವೇ ಜೇಮ್ಸ್ ಚಿತ್ರತಂಡದಲ್ಲಿ ಕೂಡಿದೆ.

ಅಪ್ಪು ಸ್ವರ್ಗದಲ್ಲಿ ಇದ್ದರೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ, ಜೇಮ್ಸ್ ಚಿತ್ರಕ್ಕೆ ಭಾರಿ ಹೊಡೆತ; ಕಲೆಕ್ಷನ್ ಕಡಿಮೆಯಾಗಲಿದೆಯೇ, ಅಷ್ಟಕ್ಕೂ ನಡೆದದ್ದೇನು ಗೊತ್ತಾ?? 4

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೇಮ್ಸ್ ಚಿತ್ರ ಕನ್ನಡದ ಚಿತ್ರರಂಗದ ಇತಿಹಾಸದಲ್ಲಿ ಅತ್ಯಧಿಕ ಮೊದಲ ದಿನದ ಕಲೆಕ್ಷನ್ ಅಂದರೆ ಮೊದಲ ದಿನವೇ 32 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗಾಗಲೇ ಮೊದಲ ವಾರಾಂತ್ಯದಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಪೂರೈಸಿ ಮುನ್ನುಗ್ಗುತ್ತಿದೆ. ಮುಂದಿನ ವಾರಾಂತ್ಯದಲ್ಲಿ ಜೇಮ್ಸ್ ಚಿತ್ರ ಬರೋಬ್ಬರಿ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 1 ಮಾಡಿರುವಂತಹ ರೆಕಾರ್ಡನ್ನು ಅಳಿಸುವ ಮೂಲಕ 88 ವರ್ಷದ ಕನ್ನಡದ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವತ್ತ ಮುನ್ನುಗ್ಗುತ್ತಿದೆ.

ಜೇಮ್ಸ್ ಚಿತ್ರ ಎನ್ನುವುದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಎಷ್ಟು ಹತ್ತಿರವಾಗಿರುವ ಸಿನಿಮಾ ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಆದರೂ ಕೂಡ ಕೆಲವೊಂದು ಕಿಡಿಗೇಡಿಗಳು ಮಾಡುತ್ತಿರುವ ಕಾರ್ಯಗಳಿಂದಾಗಿ ಈಗ ಮತ್ತೊಂದು ಸಮಸ್ಯೆ ಜೇಮ್ಸ್ ಚಿತ್ರಕ್ಕೆ ಎದುರಾಗಿದೆ. ಆ ಸಮಸ್ಯೆಯನ್ನು ಚಿತ್ರರಂಗ ಹಲವಾರು ವರ್ಷಗಳಿಂದ ಎದುರಿಸುತ್ತ ಬರುತ್ತದೆ. ಹೌದು ನಾವು ಮಾತನಾಡುತ್ತಿರುವುದು ಪೈರಸಿಯ ಕುರಿತಂತೆ.

ಅಪ್ಪು ಸ್ವರ್ಗದಲ್ಲಿ ಇದ್ದರೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ, ಜೇಮ್ಸ್ ಚಿತ್ರಕ್ಕೆ ಭಾರಿ ಹೊಡೆತ; ಕಲೆಕ್ಷನ್ ಕಡಿಮೆಯಾಗಲಿದೆಯೇ, ಅಷ್ಟಕ್ಕೂ ನಡೆದದ್ದೇನು ಗೊತ್ತಾ?? 5

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಕೊರತೆಯಿಂದಾಗಿ ಕೇವಲ ಹೊಸಬರ ಸಿನಿಮಾಗಳು ಮಾತ್ರವಲ್ಲದೆ ಸ್ಟಾರ್ ನಟರ ಸಿನಿಮಾಗಳು ಕೂಡ ಕಷ್ಟವನ್ನು ಅನುಭವಿಸಿದೆ ಎಂಬುದನ್ನು ಈ ಹಿಂದೆ ಇತಿಹಾಸ ಕೆದಕಿದರೆ ನಿಮಗೆ ಸಿಗುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಎನ್ನುವ ಪರಿಜ್ಞಾನವೂ ಇಲ್ಲದೆ ಚಿತ್ರವನ್ನು ಪೈರಸಿ ಮಾಡಿ ಸಿನಿಮಾವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದಾಗಿ ಸಿನಿಮಾದ ನಿರೀಕ್ಷಿತ ಕಲೆಕ್ಷನ್ನಲ್ಲಿ ಇಳಿತ ಕಂಡುಬರಬಹುದಾದ ಎಲ್ಲ ಸಾಧ್ಯತೆ ಇದೆ.

ಈ ಕುರಿತಂತೆ ಅಭಿಮಾನಿಗಳು ಈಗಾಗಲೇ ದೂರನ್ನು ದಾಖಲಿಸಿದ್ದರು ಕೂಡ ಸರಕಾರ ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಇದುವರೆಗೂ ಕೂಡ ಕಂಡು ಹಿಡಿಯಲಾಗಲಿಲ್ಲ. ಕನ್ನಡ ಚಿತ್ರರಂಗ ಹಾಗೂ ಸಿನಿಮಾಗಳು ಉಳಿಯಬೇಕು ಎಂದರೆ ಇಂತಹ ಪ್ರಶಸ್ತಿಯನ್ನು ಮಾಡುವಂತಹ ಜನರಿಗೆ ಅಥವಾ ವೆಬ್ಸೈಟ್ಗಳಿಗೆ ಶಾಶ್ವತ ಪರಿಹಾರವನ್ನು ಸರ್ಕಾರ ಮಾಡಬೇಕಾಗಿರುವುದು ಅತ್ಯವಶ್ಯಕವಾಗಿದೆ. ಆದರೆ ಒಬ್ಬ ಕನ್ನಡಿಗನಾಗಿ ಅಥವಾ ಅಪ್ಪು ಅಭಿಮಾನಿಯಾಗಿ ನಾವು ಮಾಡಬೇಕಾಗಿರುವ ಕೆಲಸ ಏನು ಗೊತ್ತಾ.

ಅಪ್ಪು ಸ್ವರ್ಗದಲ್ಲಿ ಇದ್ದರೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ, ಜೇಮ್ಸ್ ಚಿತ್ರಕ್ಕೆ ಭಾರಿ ಹೊಡೆತ; ಕಲೆಕ್ಷನ್ ಕಡಿಮೆಯಾಗಲಿದೆಯೇ, ಅಷ್ಟಕ್ಕೂ ನಡೆದದ್ದೇನು ಗೊತ್ತಾ?? 6

ಇಂತಹ ಪೈರಸಿ ಆದಂತಹ ಲಿಂಕುಗಳು ನಮಗೆ ದೊರೆತರೆ ಅದನ್ನು ಚಿತ್ರತಂಡಕ್ಕೆ ಕಳುಹಿಸಿದರೆ ಕುರಿತಂತೆ ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕು. ಇಲ್ಲವೇ ಅವುಗಳನ್ನು ಡಿಲೀಟ್ ಮಾಡಬೇಕು ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡುವ ಮೂಲಕ ಅಪ್ಪು ಅವರಿಗೆ ನಿಜವಾದ ವಿದಾಯವನ್ನು ಕೋರಬೇಕು. ಕನ್ನಡಿಗರೆಲ್ಲರೂ ಒಟ್ಟಾದರೆ ಪೈರಸಿಯನ್ನು ವ ಮಹಾ ಭೂತವನ್ನು ಒದ್ದು ಓಡಿಸಬಹುದಾಗಿದೆ. ಆದರೆ ಸದ್ಯಕ್ಕೆ ಜೇಮ್ಸ್ ಚಿತ್ರಕ್ಕೆ ಈ ಪೈರಸಿಯಿಂದ ಆಗಿ ತಾಪತ್ರಯ ಎದುರಾಗಿರುವುದಂತೂ ಸುಳ್ಳಲ್ಲ.