ಅಂದು ಅಪ್ಪು ರವರ ಅಂತಿಮ ದರ್ಶನಕ್ಕೆ ಮಂಡ್ಯ ರಮೇಶ್ ರವರು ಯಾಕೆ ಹೋಗಲಿಲ್ಲ ಗೊತ್ತೇ?? ರಮೇಶ್ ರವರು ಇದೀಗ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮನ್ನೆಲ ಇಷ್ಟು ಚಿಕ್ಕ ವಯಸ್ಸಿಗೆ ಅಗಲಿದ್ದಾರೆ ಎಂಬುದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಜಾತ ಶತ್ರುವಾಗಿ ಇದ್ದಂತಹ ನಿಷ್ಕಲ್ಮಶ ನಗುವಿನ ಒಡೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲಾ ಅಕಾಲಿಕವಾಗಿ ಆಗಿರುತ್ತಾರೆ ಎಂಬುದನ್ನು ನಾವು ಕನಸಿನಲ್ಲಿ ಕೂಡ ಅಂದಾಜಿಸಲು ಸಾಧ್ಯವಿಲ್ಲ. ಅಪ್ಪು ಅವರ ಆಪ್ತರಿಗೆ ಅವರನ್ನು ಆಗಲಿರುವ ದುಃಖ ಇನ್ನು ಕೂಡ ಕಡಿಮೆಯಾಗಿಲ್ಲ. ಅವರಲ್ಲಿ ಮಂಡ್ಯ ರಮೇಶ್ ರವರು ಕೂಡ. ಮೊದಲಿನಿಂದಲೂ ಕೂಡ ಅಪ್ಪು ರವರ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿರುವ ಮಂಡ್ಯ ರಮೇಶ್ ರವರು ಪುನೀತ್ ರಾಜಕುಮಾರ್ ರವರ ಕುರಿತಂತೆ ಭಾವನಾತ್ಮಕವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆದರೆ ಮಂಡ್ಯ ರಮೇಶ್ ರವರು ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಅಂದಿನ ಪರಿಸ್ಥಿತಿಯನ್ನು ವಿವರಿಸುತ್ತ ಮಂಡ್ಯ ರಮೇಶ್ ರವರು ಮೊದಲಿಗೆ ನಮಗೆ ಕರೆ ಬಂದಾಗ ನಾವು ಅದನ್ನು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ ನಾನು ಹಾಗೂ ನನ್ನ ಪತ್ನಿ ಮಕ್ಕಳು ಎಲ್ಲರೂ ಕೂಡ ಇದೊಂದು ಅನ್ಯಾಯ ಎಂಬುದಾಗಿ ಭಾವಿಸಿದ್ದೆವು. ಆದರೆ ಯಾವಾಗ ದರ್ಶನ್ ಯಶ್ ಹಾಗೂ ಶ್ರುತಿ ರವರು ಆಸ್ಪತ್ರೆಯಿಂದ ಹೊರ ಬರುತ್ತಿರಬೇಕಾದರೆ ಭಾವುಕರಾಗಿದ್ದರು ಕಂಡು ಅಲ್ಲಿ ನಡೆದಿರುವುದು ನಿಜ ಎಂಬುದಾಗಿ ಅರಿತು ಕೊಂಡೆವು. ಇಡೀ ರಾಜ್ಯಕ್ಕೆ ರಾಜ್ಯವೇ ನಮ್ಮ ಮನೆಯವರನ್ನು ಕಳೆದುಕೊಂಡೆವು ಎಂಬ ಸೂತಕದ ಛಾಯೆಯಲ್ಲಿ ಇದ್ದುದನ್ನು ಕಂಡೆವು. ರಾಘಣ್ಣ ಪರಿಸ್ಥಿತಿಯನ್ನು ಪ್ರಬುದ್ಧವಾಗಿ ನಿಯಂತ್ರಿಸಲು ಯತ್ನಿಸುತ್ತಿದ್ದುದ್ದನ್ನು ಕೂಡ ಕಂಡಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಆದರೆ ಪೊಲೀಸರಿಂದಲೂ ಕೂಡ ಅಭಿಮಾನಿಗಳ ಭಾವೋದ್ರೇಕವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಅಂದು ಅಪ್ಪು ರವರ ಅಂತಿಮ ದರ್ಶನಕ್ಕೆ ಮಂಡ್ಯ ರಮೇಶ್ ರವರು ಯಾಕೆ ಹೋಗಲಿಲ್ಲ ಗೊತ್ತೇ?? ರಮೇಶ್ ರವರು ಇದೀಗ ಹೇಳಿದ್ದೇನು ಗೊತ್ತೇ?? 4

ಬಾಲನಟನಾಗಿ ಮಾಸ್ಟರ್ ಲೋಹಿತ್ ಆಗಿ ರಾಷ್ಟ್ರಪ್ರಶಸ್ತಿ ಗೆದ್ದಂತಹ ಅಪರಿಮಿತ ಪ್ರತಿಭೆಯನ್ನು ಹೊಂದಿರುವಂತಹ ಸಾಧಾರಣ ಕಲಾವಿದನಾಗಿ ಪುನೀತ್ ರಾಜಕುಮಾರ್ ಅವರು ತಾವು ಇಲ್ಲಿಯವರೆಗೆ ಸಾಧಿಸಿಕೊಂಡು ಬಂದಂತಹ ಎಲ್ಲಾ ಸಾಧನೆಗಳನ್ನು ಕೂಡ ಈ ಸಂದರ್ಭದಲ್ಲಿ ಅವರು ನೆನಪಿಸಿಕೊಳ್ಳುತ್ತಾರೆ. ಚಿಕ್ಕವಯಸ್ಸಿನಿಂದಲೇ ಪ್ರತಿಭೆಯ ಮೇರುಪರ್ವತ ವಾಗಿ ಕಾಣಿಸಿಕೊಂಡ ಪುನೀತ್ ರಾಜಕುಮಾರ್ ರವರ ಸಾಧನೆ ಅಸಾಧಾರಣ. ಜನುಮದ ಜೋಡಿ ಚಿತ್ರೀಕರಣದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ತಮಗೆ ಹಾರಹಾಕಿ ಸ್ವಾಗತಿಸಿದ್ದನ್ನು ಕೂಡ ಮಂಡ್ಯ ರಮೇಶ್ ರವರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.

ಅಂದು ಅಪ್ಪು ರವರ ಅಂತಿಮ ದರ್ಶನಕ್ಕೆ ಮಂಡ್ಯ ರಮೇಶ್ ರವರು ಯಾಕೆ ಹೋಗಲಿಲ್ಲ ಗೊತ್ತೇ?? ರಮೇಶ್ ರವರು ಇದೀಗ ಹೇಳಿದ್ದೇನು ಗೊತ್ತೇ?? 5

ಎಲ್ಲಿ ಸಿಕ್ಕಿದರೂ ಕೂಡ ಪುನೀತ್ ರಾಜಕುಮಾರ್ ರವರು ಮಂಡ್ಯ ರಮೇಶ್ ರವರಿಗೆ ಎದ್ದುನಿಂತು ಗೌರವ ಸಲ್ಲಿಸಿ ಮುಗುಳ್ನಗುತ್ತಿದ್ದ ಮುಖ ನೆನಪಿಗೆ ಬರುತ್ತದೆ ಎಂಬುದಾಗಿ ಕೂಡಾ ಈ ಕಾರ್ಯಕ್ರಮದಲ್ಲಿ ಕಂಬನಿಯ ಜೊತೆಗೆ ನೆನಪಿಸಿಕೊಳ್ಳುತ್ತಾರೆ. ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಆಡಿಯೋ ಸಂಸ್ಥೆಗಳ ಮೂಲಕ ಹೊಸ ಯುವ ಪ್ರತಿಭೆಗಳಿಗೆ ಮಿಂಚಲು ವೇದಿಕೆ ನೀಡುತ್ತಿದ್ದುದ್ದು ಕೂಡ ಅವರ ವ್ಯಕ್ತಿತ್ವದ ಶ್ರೇಷ್ಠತೆಗೆ ಉದಾಹರಣೆಯಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ರಾಜಕುಮಾರ್ ಅವರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಾಗುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಶಿಕ್ಷಣ ಕೇಂದ್ರವನ್ನು ಕೂಡ ಸ್ಥಾಪಿಸಿರುವುದು ಮಹಾನ್ ವ್ಯಕ್ತಿತ್ವಕ್ಕೆ ಹಿಡಿದಂತಹ ಕೈಗನ್ನಡಿಯಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕೂಡ ಎಲ್ಲರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದ ಸರಳ ಯಜಮಾನ ರಾಗಿದ್ದರು.

ಇಷ್ಟೆಲ್ಲ ಒಳ್ಳೆಯ ಕಾರ್ಯವನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನದ ಕ್ಷಣಗಳನ್ನು ಟಿವಿ ಆನ್ ಮಾಡಿ ನೋಡುತ್ತಿದ್ದೆ. ಮತ್ತೆ ಪುನೀತ್ ರಾಜಕುಮಾರ್ ಅವರು ಏಳುವುದಿಲ್ಲ ಎನ್ನುವ ಭಾವನೆಯ ಭಾರದೊಂದಿಗೆ ಪುನೀತ್ ರಾಜಕುಮಾರ್ ಅವರ ಪತ್ನಿ ಹಾಗೂ ಚಿಕ್ಕಮಗಳು ದುಃಖದಿಂದ ಕಣ್ಣೀರಿಡುತ್ತಿದ್ದದ್ದನ್ನು ನೋಡಲು ಸಾಧ್ಯವಾಗದೇ ಟಿವಿ ಆಫ್ ಮಾಡಿದೆ ಎಂಬುದಾಗಿ ಮಂಡ್ಯ ರಮೇಶ್ ರವರು ಅಂದಿನ ದಿನ ನಡೆದಂತಹ ಘಟನೆಯನ್ನು ಕಣ್ಣೀರಿಡುತ್ತಲೇ ವಿವರಿಸಿದ್ದಾರೆ.

ಅಂದು ಅಪ್ಪು ರವರ ಅಂತಿಮ ದರ್ಶನಕ್ಕೆ ಮಂಡ್ಯ ರಮೇಶ್ ರವರು ಯಾಕೆ ಹೋಗಲಿಲ್ಲ ಗೊತ್ತೇ?? ರಮೇಶ್ ರವರು ಇದೀಗ ಹೇಳಿದ್ದೇನು ಗೊತ್ತೇ?? 6

ಬಹುಶಃ ಜೀವನಪೂರ್ತಿ ಪುನೀತ್ ರಾಜಕುಮಾರ್ ರವರ ಸದಾ ಹಸನ್ಮುಖಿ ಮುಖವನ್ನು ನೋಡಿಕೊಂಡು ಇದ್ದಂತಹ ಮಂಡ್ಯ ರಮೇಶ್ ರವರಿಗೆ ಪುನೀತ್ ರಾಜಕುಮಾರ್ ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಅಂತಿಮದರ್ಶನಕ್ಕೆ ಮಂಡ್ಯ ರಮೇಶ್ ರವರು ಬರಲಿಲ್ಲ ಎನ್ನುವುದಾಗಿ ಹೇಳಬಹುದಾಗಿದೆ. ದೈಹಿಕವಾಗಿ ನಮ್ಮನ್ನು ಪುನೀತ್ ರಾಜಕುಮಾರ್ ರವರು ಆಗಲಿ ಇರಬಹುದು ಆದರೆ ನಮ್ಮ ಮನಸ್ಸಿನಲ್ಲಿ ಅವರು ಸದಾ ಚಿರನೂತನ ರಾಜಕುಮಾರನಾಗಿ ಅಜರಾಮರವಾಗಿ ಉಳಿದುಕೊಳ್ಳಲಿದ್ದಾರೆ.