ನಮಸ್ಕಾರ ಸ್ನೇಹಿತರೇ ನೀವು ಶರಣ್ ಹಾಗೂ ಚಿಕ್ಕಣ್ಣ ಅಭಿನಯದ ಕನ್ನಡದ ಸಿನಿಮಾ ಅಧ್ಯಕ್ಷ ನೋಡಿದ್ದಿರೇ, ಈ ನಟಿ ನಿಮಗೆ ನೆನಪಿರುತ್ತಾರೆ. ನಟ ಚಿಕ್ಕಣ್ಣರವರ ಜೋಡಿಯಾಗಿ ನಟಿಸಿರುವ ಈ ನಟಿಯ ಹೆಸರು ಆರೋಹಿತ ಎಂದು. ಇವರು ಪಕ್ಕಾ ಲೋಕಲ್ ಬೆಂಗಳೂರಿಯನ್. ಕೇವಲ ಅಧ್ಯಕ್ಷ ಸಿನಿಮಾ ಮಾತ್ರವಲ್ಲ, ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲೂ ಇವರೇ ನಟಿಸಿದ್ದಾರೆ.
ಇನ್ನು ಆಟಗಾರ ಸಿನಿಮಾದಲ್ಲಿ ಸಹ ಹಳ್ಳಿ ಹುಡುಗಿ ಪಾತ್ರದಲ್ಲೂ ಸಹ ನಟಿಸಿದ್ದಾರೆ. ಆದರೇ ಅಧ್ಯಕ್ಷ ಸಿನಿಮಾದಲ್ಲಿ ಸಿಕ್ಕ ಬ್ರೇಕ್ ಬೇರೆ ಸಿನಿಮಾದಲ್ಲಿ ಸಿಕ್ಕಿಲ್ಲ ಎಂದು ಹೇಳಿದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ನಟಿ ಆರೋಹಿತ, ಈ ಮಧ್ಯೆ ಸ್ವಾರಸ್ಯಕರ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ.
ಕನ್ನಡದ ಒಬ್ಬ ಸಿನಿಮಾ ನಟನ ಮೇಲೆ ನನಗೆ ಲವ್ ಆಗಿತ್ತು. ಅದು ಲವ್ ಎಟ್ ಫಸ್ಟ್ ಸೈಟ್ ಥರ. ನಾನಾಗ ಏಳನೇ ತರಗತಿಯಲ್ಲಿ ಓದುತ್ತಿದೆ. ಸ್ಕೂಲ್ ಮುಗಿಸಿ ಬಂದು ಟಿವಿ ನೋಡುತ್ತಿದ್ದಾಗ, ಆ ನಟ ಅಭಿನಯಿಸಿದ ಸಿನಿಮಾ ಹಾಡು ಬರುತ್ತಿತ್ತು. ಆ ನಟನ ಡ್ಯಾನ್ಸ್, ಡೈಲಾಗ್, ಫೈಟಿಂಗ್ ಹೀಗೆ ಎಲ್ಲಾ ನೋಡಿ ನನಗೆ ಆ ನಟನ ಮೇಲೆ ಲವ್ ಆಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಆ ನಟ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಬೇರಾರೂ ಅಲ್ಲ, ಡೈನಾಮಿಕ್ ಪ್ರಿನ್ಸ್ ದೇವರಾಜ್. ಹೌದು ನಟಿ ಆರೋಹಿತ ಡೈನಾಮಿಕ್ ಪ್ರಿನ್ಸ್ ದೇವರಾಜ್ ಅಭಿನಯಿಸಿದ ಸಿಕ್ಸರ್ ಹಾಗೂ ಗೆಳೆಯ ಸಿನಿಮಾವನ್ನ ನೋಡಿದ್ದರಂತೆ. ಆಗ ಡೈನಾಮಿಕ್ ಪ್ರಿನ್ಸ್ ದೇವರಾಜ್ ಮೇಲೆ ನನಗೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು ಎಂದು ಹೇಳಿದ್ದಾರೆ.
ನಟಿ ಆರೋಹಿತರವರ ಈ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.