SIIMA ಕಾರ್ಯಕ್ರದಲ್ಲಿ ಮಿಂಚಿದ್ದ ಡಿ ಬಾಸ್ ಕಟ್ಟಿಕೊಂಡಿದ್ದ ವಾಚ್ ಬೆಲೆ ಎಷ್ಟು ಗೊತ್ತೆ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ. ಎಷ್ಟು ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದು ಅವರಿಗೆ ದುಬಾರಿ ಕಾರುಗಳ ಪ್ರೀತಿ ಯಾವ ಮಟ್ಟಿಗೆ ಇದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿ ಇರುವುದಕ್ಕೆ ಕಾರಣ ಅವರು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿರುವ ಸೈಮ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿರುವುದು. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇದುವರೆಗೂ ಯಾವುದೇ ಅವಾರ್ಡ್ ಕಾರ್ಯಕ್ರಮಗಳಿಗೆ ಹೋದವರಲ್ಲ. ಆದರೆ ಈ ಬಾರಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಸೈಮ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂತೋಷಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ ಸೈಮ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಕೈಯಲ್ಲಿ ಧರಿಸಿರುವ ವಾಚ್ ನೆಟ್ಟಿಗರ ಗಮನವನ್ನು ಸೆಳೆದಿದ್ದು ಇದರ ಬೆಲೆಯನ್ನು ಕಂಡು ಹುಡುಕಿ ಈಗ ಸಖತ್ ಸರ್ಪ್ರೈಸ್ ಆಗಿದ್ದಾರೆ ಎಂದು ಹೇಳಬಹುದು.

SIIMA ಕಾರ್ಯಕ್ರದಲ್ಲಿ ಮಿಂಚಿದ್ದ ಡಿ ಬಾಸ್ ಕಟ್ಟಿಕೊಂಡಿದ್ದ ವಾಚ್ ಬೆಲೆ ಎಷ್ಟು ಗೊತ್ತೆ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ. ಎಷ್ಟು ಅಂತೇ ಗೊತ್ತೇ?? 2

ಹೌದು ಡಿ ಬಾಸ್ ರವರು ಧರಿಸಿರುವ ಈ ವಾಚಿನ ಬೆಲೆ ಸಾಕಷ್ಟು ದುಬಾರಿಯಾಗಿದ್ದು ಪ್ರತಿಷ್ಠಿತ ಹಬ್ಲೋಟ್ ಸಂಸ್ಥೆಯ ವಾಚ್ ಆಗಿದೆ. ಇನ್ನು ಡಿ ಬಾಸ್ ಧರಿಸಿರುವ ಈ ವಾಚಿನ ಬೆಲೆ ಬರೋಬ್ಬರಿ 2 ಕೋಟಿ 80 ಲಕ್ಷ ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ನೋಡಿರುವ ನೆಟ್ಟಿಗರು ಈ ಹಣದಲ್ಲಿ ಎರಡು ಐಷಾರಾಮಿ ಮನೆಗಳನ್ನು ಕಟ್ಟಿಸಬಹುದು ಎಂಬುದಾಗಿ ಮಾತನಾಡಿಕೊಂಡಿದ್ದಾರೆ.