ಪುಷ್ಪ ಸಿನೆಮಾಗೆ ಬಂದ ಪ್ರಶಸ್ತಿ ಸ್ವೀಕಾರ ಮಾಡುವಾಗ ಅಪ್ಪು ಕುರಿತು ತೆಲುಗಿನ ಖ್ಯಾತ ಗಾಯಕ ದೇವಿಶ್ರೀ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕೆಲವು ಸಮಯಗಳ ಹಿಂದೆ ಅಷ್ಟೇ ಸೈಮ ಅವಾರ್ಡ್ಸ್ ನಮ್ಮ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಈಗ ಮತ್ತೊಂದು ಪ್ರತಿಷ್ಠಿತ ಅವಾರ್ಡ್ ಕಾರ್ಯಕ್ರಮ ಆಗಿರುವ ಫಿಲಂ ಫೇರ್ ಅವಾರ್ಡ್ ಕೂಡ ಅಕ್ಟೋಬರ್ 9 ರಂದು ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚಿನ ಸಮಯದಲ್ಲಿ ಇಡೀ ಭಾರತೀಯ ಚಿತ್ರರಂಗ ಎನ್ನುವುದು ಕನ್ನಡ ಚಿತ್ರರಂಗದತ್ತ ಅತ್ಯಂತ ಕುತೂಹಲದಿಂದ ನೋಡುತ್ತಿದ್ದ ಎನ್ನುವುದನ್ನು ಇದಕ್ಕಿಂತ ಹೆಚ್ಚಾಗಿ ಉದಾಹರಣೆ ನೀಡಿ ವಿವರಿಸಬೇಕಾಗಿಲ್ಲ ಎಂದು ಭಾವಿಸುತ್ತೇವೆ. ಇನ್ನು ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಪ್ರಶಸ್ತಿಯನ್ನು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಪರವಾಗಿ ಪಡೆದುಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರಿಗಿಂತ ಹೆಚ್ಚಾಗಿ ತೆಲುಗು ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ತಾವು ಗೆದ್ದಿರುವ ಪ್ರಶಸ್ತಿಯನ್ನು ಅಪ್ಪು ಅವರಿಗೆ ಅರ್ಪಿಸಿದ್ದನ್ನು ನಾವು ನೋಡಬಹುದಾಗಿತ್ತು. ಇದು ನಿಜಕ್ಕೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೇರೆ ರಾಜ್ಯದ ಸಿನಿಮಾ ರಂಗದಲ್ಲಿ ಕೂಡ ಅಲ್ಲಿನ ಕಲಾವಿದರು ಹಾಗೂ ತಂತ್ರಜ್ಞರೊಂದಿಗೆ ಯಾವ ರೀತಿಯ ಸಂಬಂಧವನ್ನು ಹೊಂದಿದ್ದರು ಎಂಬುದನ್ನು ತಿಳಿಸುತ್ತದೆ. ಇನ್ನು ಪುಷ್ಪ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡ ದೇವಿ ಶ್ರೀಪ್ರಸಾದ್ ವೇದಿಕೆಯ ಮೇಲೆ ಬಂದು ಕನ್ನಡದಲ್ಲಿಯೇ, ನಮಸ್ಕಾರ ಬೆಂಗಳೂರು ಎಲ್ಲರೂ ಹೇಗಿದ್ದೀರ ಚೆನ್ನಾಗಿದ್ದೀರಾ ಎಂಬುದಾಗಿ ಕನ್ನಡದಲ್ಲಿ ಮಾತನಾಡಿದರು. ಇದು ಅಲ್ಲಿ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಮನವನ್ನು ಗೆದ್ದಿದೆ.

ಪುಷ್ಪ ಸಿನೆಮಾಗೆ ಬಂದ ಪ್ರಶಸ್ತಿ ಸ್ವೀಕಾರ ಮಾಡುವಾಗ ಅಪ್ಪು ಕುರಿತು ತೆಲುಗಿನ ಖ್ಯಾತ ಗಾಯಕ ದೇವಿಶ್ರೀ ಹೇಳಿದ್ದೇನು ಗೊತ್ತೇ?? 2

ಇನ್ನು ತಾವು ಗೆದ್ದಂತಹ ಪ್ರಶಸ್ತಿಯನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂಬುದಾಗಿ ದೇವಿ ಶ್ರೀಪ್ರಸಾದ್ ರವರು ಶಿರಭಾಗಿ ನಮಸ್ಕರಿಸಿದ್ದಾರೆ. ಇನ್ನು ಬೆಂಗಳೂರಿಗೆ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಾಗ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹೋಗಿ ಪೂಜೆಯನ್ನು ಕೂಡ ಸಲ್ಲಿಸಿ ಬಂದಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ವೇದಿಕೆಯ ಮೇಲೆ ಅವಾರ್ಡ್ ಸ್ವೀಕರಿಸುವಾಗಲು ಕೂಡ ಈ ಪ್ರಶಸ್ತಿಯನ್ನು ನನ್ನ ಸಹೋದರ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂಬುದಾಗಿ ದೇವಿ ಶ್ರೀಪ್ರಸಾದ್ ಹೇಳುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೇ ವೇದಿಕೆಯ ಮೇಲೆ ರಾಜ್ ಕುಟುಂಬದ ಸರಳತೆಯ ಬಗ್ಗೆ ಕೂಡ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರ ಈ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.