Gandhada Gudi: ಗಂಧದ ಗುಡಿಯಲ್ಲಿ ಪುನೀತ್ ರವರ ಅದೊಂದು ಡೈಲಾಗ್ ಕೇಳಿದರೆ ಎಲ್ಲರೂ ಅಳುತ್ತಾರೆ, ಫ್ಯಾನ್ಸ್ ಕಣ್ಣಲ್ಲಿ ನೀರು. ಯಾವ ಡೈಲಾಗ್ ಗೊತ್ತೇ?

ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಗಂಧದಗುಡಿ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇಡೀ ಮನೆ ಮಂದಿ ನಿಮ್ಮ ಮಕ್ಕಳೊಂದಿಗೆ ಬಂದು ಚಿತ್ರವನ್ನು ನೋಡಿ, ಈ ಚಿತ್ರದಿಂದ ಕಲಿಯುವಂತದ್ದು ಸಾಕಷ್ಟು ಇದೆ ಎಂದು ಹೇಳುತ್ತಿದ್ದಾರೆ. ಚಿತ್ರವಿಡಿ ಪುನೀತ್ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಎಲ್ಲರೊಂದಿಗೆ ಬೆರೆತು ಒಡನಾಡಿದ್ದಾರೆ. ಈ ಚಿತ್ರದ ಮೂಲಕ ಅವರ ವ್ಯಕ್ತಿತ್ವ ನಮಗೆ ಇನ್ನಷ್ಟು ಹೆಚ್ಚು ಪರಿಚಯವಾಗುತ್ತದೆ. ಪುನೀತ್ ಅವರು ಕಂಡ ದೃಶ್ಯ ವೈಭವವನ್ನು ಅದ್ಬುತವಾಗಿ ತೆರೆ ಮೇಲೆ ಕಟ್ಟಿ ಕೊಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಇಂತಹದೊಂದು ಚಿತ್ರವನ್ನು ನೀಡಿದಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಚಿತ್ರ ನೋಡಿದ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಚಿತ್ರದಲ್ಲಿ ಬರುವ ಅದೊಂದು ಪುನೀತ್ ಆಡುವ ಮಾತು ನೋಡಿದಾಗ ಎಲ್ಲರೂ ಬಿಕ್ಕಿ ಬಿಕ್ಕಿ ಅಳುವುದು ನಿಶ್ಚಿತ.

ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಗಂಧದಗುಡಿ ಚಿತ್ರವು ಒಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾಗಿದೆ. ಗಂಧದಗುಡಿಯಲ್ಲಿ ಕರ್ನಾಟಕದ ಪ್ರಾಕೃತಿಕ ಸೊಬಗನ್ನು ಸೆರೆಹಿಡಿಯಲಾಗಿದೆ. ಕರ್ನಾಟಕದ ಪ್ರಕೃತಿ ವೈಭವ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಇಡೀ ಚಿತ್ರದಲ್ಲಿ ಪುನೀತ್ ಸ್ವತಹ ಪುನೀತಾಗಿ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಅವರ ಕಣ್ಣಿನ ಮೂಲಕ ಕಂಡ ಕರ್ನಾಟಕದ ಚೆಲುವನ್ನು ಪ್ರತಿ ಪ್ರೇಕ್ಷಕನ ಮುಂದೆ ತಂದಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬರು ಅಪ್ಪು ನೆನೆದು ಭಾವುಕರಾಗುತ್ತಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಬರುವ ಪುನೀತ್ ಅವರ ಆ ಒಂದು ಮಾತು ಅದೆಷ್ಟು ಅಭಿಮಾನಿಗಳಿಗೆ ಕಣ್ಣೀರು ತರಿಸುತ್ತಿದೆ. ಹೌದು ಪುನೀತ್ ಅವರು ಹೇಳುವ ಅದೊಂದು ಸಂಭಾಷಣೆ, ಅದೊಂದು ಮಾತು ನಿಜಕ್ಕೂ ಕರುಳು ಕಿವುಚಿದಂತಾಗುತ್ತದೆ. ಇಂತಹ ಮನುಷ್ಯ ನಮ್ಮನ್ನು ಬಿಟ್ಟು ಹೊರಟು ಹೋದರಲ್ಲ ಎಂದು ನೋವಾಗುತ್ತದೆ.

Gandhada Gudi: ಗಂಧದ ಗುಡಿಯಲ್ಲಿ ಪುನೀತ್ ರವರ ಅದೊಂದು ಡೈಲಾಗ್ ಕೇಳಿದರೆ ಎಲ್ಲರೂ ಅಳುತ್ತಾರೆ, ಫ್ಯಾನ್ಸ್ ಕಣ್ಣಲ್ಲಿ ನೀರು. ಯಾವ ಡೈಲಾಗ್ ಗೊತ್ತೇ? 2

ಪುನೀತ್ ಅವರಿಗೆ ಚಿಕ್ಕಂದಿನಿಂದಲೂ ಹಾವು ಕಂಡರೆ ಭಯ. ಭಕ್ತ ಪ್ರಹಲ್ಲಾದ ಸಿನಿಮಾದಲ್ಲಿ ಅವರ ಕೊರಳ ಸುತ್ತಾ ಹಾವನ್ನು ಸುತ್ತಲಾಗಿತ್ತು. ಆಗ ಹಾವು ಬುಷ್ ಗುಡುವ ಶಬ್ದ ಅವರಿಗೆ ಚೆನ್ನಾಗಿ ಕೇಳಿಸುತ್ತಿದ್ದಂತೆ, ಆಗಿನಿಂದಲೂ ಕೂಡ ಪುನೀತ್ ಅವರಿಗೆ ಹಾವು ಕಂಡರೆ ಭಯ. ಚಿತ್ರದ ಮಧ್ಯೆ ಪುನೀತ್ ಅವರು ನಾವು ನಾನು ಸೇಫ್ ಆಗಿದ್ದೀನಿ ಅಲ್ವಾ, ನಾನು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಮನೆಯಲ್ಲಿ ಹೆಂಡತಿ ಮಕ್ಕಳಿದ್ದಾರೆ. ಅವರೆಲ್ಲ ನನ್ನನ್ನೇ ನಂಬಿಕೊಂಡಿದ್ದಾರೆ. ನಾನು ವಾಪಸ್ ಮನೆಗೆ ಹೋಗಬೇಕು ಎಂದು ಹೇಳುತ್ತಾರೆ. ಈ ಸಂಭಾಷಣೆ ಕೇಳಿದ ಎಲ್ಲ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಣ್ಣೀರು ಹಾಕಿದ್ದಾರೆ. ಇದೊಂದು ಮಾತು ಚಿತ್ರ ನೋಡುವ ಪ್ರತಿಯೊಬ್ಬರಿಗೂ ಅಳು ತರಿಸುತ್ತದೆ.