ಥಿಯೇಟರ್ ಸಮಸ್ಯೆ ಜೊತೆಗೆ ಪೈರಸಿ ಸಮಸ್ಯೆ ನಂತರ ಎರಡನೇ ದಿನದ ಅಂತ್ಯಕ್ಕೆ ಗಂಧದ ಗುಡಿ ಗಳಿಸಿದ್ದು ಎಷ್ಟು ಗೊತ್ತೇ??

ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಗಂಧದಗುಡಿ ಬಿಡುಗಡೆಗೊಂಡಿದೆ. ಇದೊಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾಗಿದ್ದು ಚಿತ್ರದಲ್ಲಿ ಪುನೀತ್ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದ ಬೆಟ್ಟ, ಗುಡ್ಡ, ಕಾಡು, ವನ್ಯಜೀವಿಧಾಮ ಪ್ರಾಣಿ, ಪಕ್ಷಿ ಸಸ್ಯ ಸಂಪತ್ತು ಹೀಗೆ ಸಾಕಷ್ಟು ಕಡೆ ಸುತ್ತಾಡಿ ಅಲ್ಲಿನ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಒಂದು ಸಿನಿಮಾ ಅಲ್ಲ. ಈ ರೀತಿಯ ಶೈಲಿಯ ಚಿತ್ರವೂ ಕನ್ನಡದಲ್ಲಿ ಬಂದಿಯೇ ಇಲ್ಲ. ಕನ್ನಡ ಚಿತ್ರರಂಗಕ್ಕೇನೆ ಇದು ಹೊಸ ಪ್ರಯೋಗವೇ ಆಗಿದೆ. ಈ ಪ್ರಯೋಗದಲ್ಲಿ ನೈಜ ಜೀವನದ ಚಿತ್ರಣವೇ ಇದೆ.

ಒಂದೊಮ್ಮೆ ನಾವೆಲ್ಲ ಟ್ರೆಕ್ಕಿಂಗ್ ಹೋದ್ರೆ, ಆಗುವ ಅನುಭವವೇ ಇಲ್ಲಿ ಸಿನಿಮಾ ರೂಪದಲ್ಲಿ ಬಂದಿದೆ. ಅದನ್ನ ಅಪ್ಪು ಅನುಭವಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಕ್ಷಣ ಕ್ಷಣಕ್ಕೂ ಸಂತೋಷ ಪಟ್ಟಿದ್ದಾರೆ. ಕಾಡಿನ ಕೌತುಕಗಳನ್ನ ಕಂಡು ಚಕಿತಗೊಂಡಿದ್ದಾರೆ. ಅಪ್ಪು ಬದುಕಿದ್ದೇ ಹಾಗೆ, ಆಫ್ ದಿ ರೆಕಾರ್ಡ್ ಇದ್ದದ್ದೂ ಹಾಗೇ ಅಲ್ವೇ. ಅದುವೇ ಗಂಧದ ಗುಡಿಯಲ್ಲಿ ಚಿತ್ರಣಗೊಂಡಿದೆ. ಆದರೆ ಈ ಒಂದು ಜರ್ನಿಯಲ್ಲಿ ಮಾತುಗಳಿವೆ. ಡೈರೆಕ್ಟರ್ ಅಮೋಘವರ್ಷ ಮತ್ತು ಅಪ್ಪು ಮಾತನಾಡುತ್ತಲೇ ಇರ್ತಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡುತ್ತಿದ್ದ ವೀಕ್ಷಕರು ‘ಗಂಧದ ಗುಡಿ’ಯಲ್ಲಿ ಪುನೀತ್‌ರನ್ನು ಪುನೀತ್‌ರಾಗಿಯೇ ನೋಡಿ ಪುಳಕಿತರಾಗಿದ್ದಾರೆ. ‘ಗಂಧದ ಗುಡಿ’ಯು ಅವಧಿ 1 ಗಂಟೆ 37 ನಿಮಿಷಗಳು. ಕರ್ನಾಟಕದ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ, ಪ್ರಾಣಿ-ಪಕ್ಷಿಗಳು, ಪಶ್ಚಿಮ ಘಟ್ಟಗಳು, ಕರಾವಳಿ ತೀರ, ಬೆಟ್ಟ-ಗುಡ್ಡ, ತುಂಗಭದ್ರಾ ನದಿ, ಕಾಳಿ ನದಿ, ಆನೆ ಬಿಡಾರಗಳು ಎಲ್ಲವೂ ಚಿತ್ರದಲ್ಲಿವೆ.

ಥಿಯೇಟರ್ ಸಮಸ್ಯೆ ಜೊತೆಗೆ ಪೈರಸಿ ಸಮಸ್ಯೆ ನಂತರ ಎರಡನೇ ದಿನದ ಅಂತ್ಯಕ್ಕೆ ಗಂಧದ ಗುಡಿ ಗಳಿಸಿದ್ದು ಎಷ್ಟು ಗೊತ್ತೇ?? 2

ನಾಗರಹೊಳೆಯಿಂದ ಅಣ್ಣಾವ್ರ ಹುಟ್ಟೂರು ಗಾಜನೂರು ತಲುಪಿ, ಅಲ್ಲಿಂದ ಮಲೆನಾಡು, ವಿಜಯನಗರ, ದಾಂಡೇಲಿ, ಬಿಆರ್‌ಟಿ ಟೈಗರ್ ರಿಸರ್ವ್, ಜೋಗ ಹೀಗೆ ಸಾಕಷ್ಟು ಸ್ಥಳಗಳು ಇಲ್ಲಿವೆ. ರಾಜ್ಯಾದ್ಯಂತ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿದ್ದು, ಈಗಾಗಲೇ ಶೇ.62.77ರಷ್ಟು ಟಿಕೆಟ್‌ಗಳು ಮಾರಾಟ ಆಗಿವೆ. ಸಿನಿಮಾ ಗಳಿಕೆಯ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ. ಆದರೆ, ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ತೆರೆಕಂಡಿದೆ. ಮೊದಲ ದಿನವೇ 1800ಕ್ಕೂ ಹೆಚ್ಚು ಶೋಗಳನ್ನು ಕಂಡಿದ್ದು, ಪ್ರತಿ ಚಿತ್ರಮಂದಿರಗಳಲ್ಲೂ ಒಂದೇ ದಿನ 6 ರಿಂದ 7 ಪ್ರದರ್ಶನಗಳನ್ನು ಕಂಡಿದೆ. ಚಿತ್ರ ಬಿಡುಗಡೆಗೊಂಡ ಎರಡನೇ ದಿನ ಚಿತ್ರವೂ ಬರೋಬ್ಬರಿ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ.