Kannada Biggboss: ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಗೆ ಶಾಕ್ ಕೊಡಲು ಹೋದ ಸೋನು ಗೌಡ, ಕೊನೆಗೆ ಸೋನು ಗೌಡ ಗೆ ಶಾಕ್ ಕೊಟ್ಟ ಬಿಗ್ ಬಾಸ್. ಏನಾಗಿದೆ ಗೊತ್ತೆ?

Kannada Biggboss: ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ರಲ್ಲಿ ಈಗ ಕಾಡಿನ ಟಾಸ್ಕ್ ನಡೆಯುತ್ತಿದ್ದು, ಮನೆಯ ಸ್ಪರ್ಧಿಗಳು ಕಾಡಿನ ಒಳಗೆ ಇರುವ ಹಾಗೆ ಜೀವನ ಸಾಗಿಸುತ್ತಿದ್ದಾರೆ. ಈ ಟಾಸ್ಕ್ ನಲ್ಲಿ ಕಾಡಿನ ಅನುಭವವನ್ನು ಅನುಭವಿಸುತ್ತಿದ್ದಾರೆ. ಬಿಗ್ ಮನೆ ವಾಸದಲ್ಲಿ ಈಗ 9ನೇ ವಾರದ ಪ್ರಯಾಣ ನಡೆಯುತ್ತಿದೆ. ಈ ಸಮಯದಲ್ಲಿ ಬಿಗ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಬೇಕಿತ್ತು. ಅದಕ್ಕಾಗಿ ಬಿಗ್ ಬಾಸ್ ಮನೆಗೆ ಸೋನು ಗೌಡ ಅವರನ್ನು ಕರೆಸುವ ಪ್ಲಾನ್ ಮಾಡಿಕೊಳ್ಳಲಾಗಿತ್ತು, ಸೋನು ಗೌಡ (Sonu Srinivas Gowda) ಕೂಡ ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ..

ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಸೋನು ಗೌಡ ಭಾರಿ ಸುದ್ದಿಯಾಗಿದ್ದರು. ಕಂಟೆಂಟ್ ಕ್ವೀನ್ ಎಂದೇ ಖ್ಯಾತಿಯಾಗಿದ್ದ ಸೋನು ಯಾವುದೇ ಹೇಳಿಕೆ ನೀಡಿದರು ಕೂಡ ಅದು ಭಾರಿ ವೈರಲ್ ಆಗುತ್ತಿತ್ತು. ಜೊತೆಗೆ ಮನೆಯ ಸ್ಪರ್ಧಿಗಳ ಜೊತೆಗೆ ಜಗಳ ಆಡುವ ಕಾರಣದಿಂದ ಕೂಡ ಸೋನು ಗೌಡ ಗುರುತಿಸಿಕೊಂಡಿದ್ದರು. ರಾಕೇಶ್ ಅಡಿಗ (Rakesh Adiga) ಅವರ ಮೇಲೆ ಸೋನು ಅವರಿಗೆ ಲವ್ ಆಗಿದ್ದ ವಿಷಯದಿಂದಲು ಸೋನು ಗೌಡ ಹೆಚ್ಚು ಸುದ್ದಿಯಾಗಿದ್ದರು. ಹಾಗಾಗಿ ಇವರನ್ನು ಮನೆಗೆ ಕರೆಸುವ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಸೋನು ಕೂಡ ಓಕೆ ಅಂದಿದ್ದರು..

Kannada Biggboss: ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಗೆ ಶಾಕ್ ಕೊಡಲು ಹೋದ ಸೋನು ಗೌಡ, ಕೊನೆಗೆ ಸೋನು ಗೌಡ ಗೆ ಶಾಕ್ ಕೊಟ್ಟ ಬಿಗ್ ಬಾಸ್. ಏನಾಗಿದೆ ಗೊತ್ತೆ? 2

ಬಿಗ್ ಬಾಸ್ ಗೆ ರೀಎಂಟ್ರಿ ಕೊಡುವ ಸಲುವಾಗಿ ಸೋನು ಗೌಡ ಭರ್ಜರಿಯಾಗಿ 2 ಲಕ್ಷ ರೂಪಾಯಿಗೆ ಶಾಪಿಂಗ್ ಕೂಡ ಮಾಡಿದ್ದರಂತೆ. ಬಿಗ್ ಬಾಸ್ ಮನೆಗೆ ಬರಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದರಂತೆ. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಉಲ್ಟಾ ಹೊಡೆದಿದೆ. ಸೋನು ಗೌಡ ಅವರು ಓಟಿಟಿ ಸೀಸನ್ ಗೆ ಬರುವಾಗ ಅವರಿಗೆ ವಾರಕ್ಕೆ 30 ಸಾವಿರ ಸಂಭಾವನೆ ನೀಡಲಾಗುತ್ತಿತ್ತು, ಆದರೆ ಟಿವಿ ಸೀಸನ್ ಗೆ ಬರಲು ವಾರಕ್ಕೆ 2 ಲಕ್ಷ ರೂಪಾಯಿ ಸಂಭಾವನೆ ಕೊಡಬೇಕು ಎಂದು ಸೋನು ಗೌಡ ಬೇಡಿಕೆ ಇಟ್ಟಿದ್ದು, ಇದರಿಂದಾಗಿ ಬಿಗ್ ಬಾಸ್ ಗೆ ಬರುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಸೋನು ಗೌಡ ಬದಲಾಗಿ ಬೇರೆಯವರು ಬಂದಿದ್ದಾರೆ.