Kannada News: ಧೈರ್ಯದಿಂದ ಮುನ್ನುಗುತ್ತಿದ್ದ ಕನ್ನಡದ ಸಿಂಹ ಡಿ ಬಾಸ್ ಗೆ ಏನಾಯ್ತು?? ಸೋಲನ್ನು ಒಪ್ಪಿಕೊಂಡರೆ? ಷಾಕಿಂಗ್ ಹೇಳಿಕ ಕೊಟ್ಟ ಡಿ ಬಾಸ್. ಏನು ಗೊತ್ತೇ??

Kannada News: ದರ್ಶನ್ (Darshan) ಅವರ ಬಹು ನಿರೀಕ್ಷಿತ ಕ್ರಾಂತಿ (Kranti) ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಜನವರಿ 26ರಂದು ಚಿತ್ರ ಭರ್ಜರಿಯಾಗಿ ತೆರೆ ಕಾಣಲಿದೆ. ಕಳೆದ ಕೆಲವು ದಿನಗಳಿಂದ ನಟ ದರ್ಶನ್ ನಿರಂತರವಾಗಿ ವಿವಿಧ ಯುಟ್ಯೂಬ್ ಚಾನೆಲ್ ಗಳಿಗೆ ತಮ್ಮ ಸಂದರ್ಶನ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಅವರು ಅತ್ಯಂತ ಕಡಿಮೆ ಅವಧಿಗೆ ಈ ರೀತಿಯಾಗಿ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿರುವುದು. ಇನ್ನು ಚಿತ್ರ ಬಿಡುಗಡೆಗೊಳ್ಳಲು ಮೂರ್ನಾಲ್ಕು ದಿನಗಳು ಬಾಕಿ ಇರುವಾಗ ಅವರು ತಮ್ಮ ಅಭಿಮಾನಿಗಳ ಚಾನಲೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರ ಅವರು ಆಡಿರುವ ಮಾತುಗಳು ಶಾಕಿಂಗ್ ರೀತಿಯಲ್ಲಿದೆ. ಎಲ್ಲಾ ನನ್ನ ಬ್ಯಾಡ್ ಲಕ್ ಎಂದು ಅವರು ಸಂದರ್ಶನದಲ್ಲಿ ಬೇಸರ ಪಟ್ಟುಕೊಂಡಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಯಾವ ಕಾರಣಕ್ಕೆ ಈ ರೀತಿಯಾಗಿ ಬೇಜಾರಿನಿಂದ ಮಾತನಾಡಿದ್ದಾರೆ ಎಂದು ತಿಳಿದರೆ ನಿಜಕ್ಕೂ ಶಾಕಿಂಗ್ ಅನಿಸುತ್ತದೆ.

ನಟ ದರ್ಶನ್ ಬ್ಯಾಕ್ ಟು ಬ್ಯಾಕ್ ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ತಮ್ಮ ವೃತ್ತಿ ಜೀವನ, ಏಳು ಬೀಳುಗಳು, ಸೋಲು ಗೆಲುವು, ಕಲಿತ ಪಾಠ, ಸಹೋದ್ಯೋಗಿಗಳು ಈ ರೀತಿಯಾಗಿ ಹಲವಾರು ವಿಚಾರಗಳ ಕುರಿತು ಅವರು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗೆ ಅವರು ತಮ್ಮ ಅಭಿಮಾನಿಗಳ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ವಿಶೇಷವೆಂದರೆ ಈ ಸಂದರ್ಶನದಲ್ಲಿ ಅವರು ತಮ್ಮ ಇಡೀ ಫಾರ್ಮ್ ಹೌಸ್ ತೋರಿಸಿದ್ದಾರೆ. ಜೊತೆಗೆ ಸಾಮಾನ್ಯವಾಗಿ ಅವರು ತಮ್ಮ ಮನೆಯಲ್ಲಿ ಯಾವ ರೀತಿ ಇರುತ್ತಾರೆ, ಅದೇ ರೀತಿಯ ಉಡುಪಿನಲ್ಲಿ ಅವರು ಈ ಸಂದರ್ಶನದಲ್ಲಿ ಯಾವುದೇ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ಎಲ್ಲವೂ ನನ್ನ ಬ್ಯಾಡ್ ಲಕ್ ಅನಿಸುತ್ತದೆ ಎಂದು ಬೇಸರದಿಂದ ಮಾತನಾಡಿದ್ದಾರೆ. ಇದನ್ನು ಓದಿ.. Kannada News: ಅಂಬಾನಿ ಮಗ ಅನಂತ್ ಮದುವೆಗೆ ಹೋಗಿದ್ದ ದೀಪಿಕಾ ಉಟ್ಟಿದ್ದ ಸೀರೆ ಬೆಲೆ ಕೇಳಿದರೆ, ಊಟ ಮಾಡೋದು ಬಿಡ್ತೀರಾ. ಎಷ್ಟು ಅಂತೇ ಗೊತ್ತೆ?

Kannada News: ಧೈರ್ಯದಿಂದ ಮುನ್ನುಗುತ್ತಿದ್ದ ಕನ್ನಡದ ಸಿಂಹ ಡಿ ಬಾಸ್ ಗೆ ಏನಾಯ್ತು?? ಸೋಲನ್ನು ಒಪ್ಪಿಕೊಂಡರೆ? ಷಾಕಿಂಗ್ ಹೇಳಿಕ ಕೊಟ್ಟ ಡಿ ಬಾಸ್. ಏನು ಗೊತ್ತೇ?? 2

ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಂಡಿರುವ ನಟ ದರ್ಶನ್ “ಸಂದರ್ಶನ ಎಂದರೆ ನಾವು ಏನಿದ್ದೆವೋ, ಹೇಗಿದ್ದೇವೋ ಅದನ್ನೇ ಜನರಿಗೆ ತೋರಿಸುವುದು. ನಾನು ಮೇಕಪ್ ಮಾಡಿಕೊಂಡು ಚೆನ್ನಾಗಿ ರೆಡಿಯಾಗಿ ಬಂದು ಕುಳಿತುಕೊಂಡು ಏನೇನೋ ಮಾತನಾಡುವುದಿಲ್ಲ. ನಾನು ಈಗ ಮನೆಯಲ್ಲಿ ಹೇಗಿದ್ದೇನೋ ಹಾಗೆಯೇ ನಿಮ್ಮ ಮುಂದೆ ಬಂದಿದ್ದೇನೆ. ಬ್ರಷ್ ಕೂಡ ಮಾಡಲಾಗಿಲ್ಲ. ನನ್ನ ಅಭಿಮಾನಿಗಳು ಕೂಡ ನಾನು ಹೇಗಿದ್ದೇನೆ ಹಾಗೆಯೇ ನಿರೀಕ್ಷಿಸುತ್ತಾರೆ. ನಾನು ನಾಟಕ ಮಾಡುವುದು ನನಗೂ ನನ್ನ ಅಭಿಮಾನಿಗಳಿಗೂ ಇಷ್ಟವಾಗುವುದಿಲ್ಲ. ಜೊತೆಗೆ ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್ ಮಾರ್ಕ್ ಇರುವ ನಟ ಮತ್ತೊಬ್ಬರಿಲ್ಲ ಎನಿಸುತ್ತದೆ. ನಾನು ಹಿಟ್ ಸಿನಿಮಾ ಕೂಡ ನೀಡಿದ್ದೇನೆ, ಡಬ್ಬ ಸಿನಿಮಾ, ಫ್ಲಾಪ್ ಸಿನಿಮಾ ಕೂಡ ನೀಡಿದ್ದೇನೆ. ಎಲ್ಲವನ್ನು ನಾನು ನೋಡಿದ್ದೇನೆ. ಬಹುಷಃ ಎಲ್ಲವೂ ನನ್ನ ಬ್ಯಾಡ್ ಲಕ್ ಎನಿಸುತ್ತದೆ” ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನು ಓದಿ..Kannada News: ಇರುವುದನ್ನು ಇದ್ದಹಾಗೆ ಒಪ್ಪಿಕೊಂಡ ರಶ್ಮಿಕಾ: ಆರಂಭದಲ್ಲಿಯೇ ಆ ತಪ್ಪು ಮಾಡಿಬಿಟ್ಟೆ, ಅದಾದ ಮೇಲೆ ಅಭ್ಯಾಸ ಆಗೋಯ್ತು ಎಂದಿದ್ದು ಯಾಕೆ ಗೊತ್ತೇ??