Kannada News: ಬಾಲಿವುಡ್ ಗೆ ಹೋದಮೇಲೆ ವಿಜಯ್ ಗೆ ಕೈ ಕೊಟ್ಟರೆ ರಶ್ಮಿಕಾ: ನಟನ ಜೊತೆ ಬಹಿರಂಗವಾಗಿ ಮಾಡಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ವಿಜಯ್.

Kannada News: ನಟಿ ರಶ್ಮಿಕಾ ಮಂದಣ್ಣ ಸದ್ಯ ಬಹುಭಾಷೆಯ ಮತ್ತು ಬಹು ಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ಪರಿಚಯಗೊಂಡ ಅವರು ಸದ್ಯ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿರುವುದರ ಜೊತೆಗೆ ಬಾಲಿವುಡ್ ಕಡೆಗೂ ಗಮನ ನೆಟ್ಟಿದ್ದಾರೆ. ತಮ್ಮ ಮೊದಲ ಬಾಲಿವುಡ್ ಚಿತ್ರ ಗುಡ್ ಬೈ ಮೂಲಕ ಅದೃಷ್ಟ ಪರೀಕ್ಷೆಗೆ ಬಂದ ರಶ್ಮಿಕ ಇದೀಗ ತಾವು ಮೊದಲು ಒಪ್ಪಿಕೊಂಡಿದ್ದ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದಾರೆ. ಇನ್ನು ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಸಿದ್ಧಾರ್ಥ ಮಲ್ಹೋತ್ರಾ ಅವರೊಂದಿಗೆ ಹಾರ್ಟ್ ಸಿಂಬಲ್ ಗೆ ಪೋಸ್ ಕೊಟ್ಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Kannada News: ಬಾಲಿವುಡ್ ಗೆ ಹೋದಮೇಲೆ ವಿಜಯ್ ಗೆ ಕೈ ಕೊಟ್ಟರೆ ರಶ್ಮಿಕಾ: ನಟನ ಜೊತೆ ಬಹಿರಂಗವಾಗಿ ಮಾಡಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ವಿಜಯ್. 3

ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆಗೆ ಚಿತ್ರ ಒಂದರಲ್ಲಿ ನಟಿಸಿದ ನಂತರ ಈ ಜೋಡಿಯ ಬಗ್ಗೆ ವರ್ಷಗಳಿಂದ ಒಂದಿಲ್ಲೊಂದು ಗಾಸಿಪ್ ಕೇಳಿ ಬರುತ್ತಲೇ ಇದೆ. ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕಪ್ ಮಾಡಿಕೊಂಡ ನಂತರ ನಟಿ ರಶ್ಮಿಕ ಅವರ ಬಗ್ಗೆ ಇದ್ದ ಅಭಿಮಾನಿಗಳ ಪ್ರೀತಿ, ಗೌರವ ಎಲ್ಲವನ್ನು ಕಳೆದುಕೊಂಡರು. ಅಲ್ಲದೆ ಪದೇ ಪದೇ ಏನೋ ಹೇಳಲು ಹೋಗಿ ಮತ್ತೇನೋ ಅವಾಂತರ ಸೃಷ್ಟಿಸಿಕೊಳ್ಳುವ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬಹುತೇಕ ಕನ್ನಡಿಗರು ಸದಾ ಕೆಂಡಕಾರುತಲೆ ಇರುತ್ತಾರೆ. ಅಲ್ಲದೆ ಒಂದಿಲ್ಲೊಂದು ಕಾರಣಕ್ಕೆ ಅವರು ದಿನನಿತ್ಯವು ಟ್ರೊಲ್ ಆಗುತ್ತಲೇ ಇರುತ್ತಾರೆ. ಇದನ್ನು ಓದಿ..Kannada News: ಯಶಸ್ಸು ಗಳಿಸಿದ ತಕ್ಷಣ, ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿ ಮಾಡಲು ಸಿದ್ದ ಎಂದ ಶ್ರೀ ಲೀಲಾ; ಈ ವಯಸ್ಸಿಗೆ ಈ ಗಟ್ಟಿ ನಿರ್ಧಾರ ಬೇಕಾ ಎಂದ ಫ್ಯಾನ್ಸ್.? ಏನಂತೀರಿ??

ಇನ್ನು ತೆಲುಗಿಗೆ ಹಾರಿದ ನಂತರ ಅಲ್ಲಿ ರಶ್ಮಿಕ ಅವರೊಟ್ಟಿಗೆ ವಿಜಯ್ ದೇವರಕೊಂಡ ಅವರ ಹೆಸರನ್ನು ತಾಳೆಹಾಕಿ ಸಾಕಷ್ಟು ಸುದ್ದಿ ಹರಿದಾಡುತ್ತಲೇ ಇತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕ ನಡುವೆ ಏನೋ ಸಂಥಿಂಗ್ ಸಂಥಿಂಗ್ ಇದೆ ಎಂಬ ಮಾತು ಸಾಕಷ್ಟು ದಿನಗಳಿಂದಲೂ ಇದ್ದೆ ಇದೆ. ಈ ಹಿಂದೆ ರಶ್ಮಿಕ ಅಭಿಮಾನಿಗಳ ಜೊತೆಗೆ ಲೈವ್ ನಲ್ಲಿ ಮಾತನಾಡುವಾಗ ಹಿಂದಿನಿಂದ ಯಾರೋ ಜೋರಾಗಿ ಮಾತನಾಡಿದ್ದರು. ಅದು ವಿಜಯ್ ದೇವರಕೊಂಡ ಅವರ ಧ್ವನಿಯೇ ಎಂದು ಸಾಕಷ್ಟು ಜನರು ಕಮೆಂಟ್ ಮಾಡಿದ್ದರು. ಆದರೆ ಇದನ್ನು ರಶ್ಮಿಕಾ ತಳ್ಳಿ ಹಾಕಿದ್ದರು. ಈ ರೀತಿಯಾಗಿ ಸಾಕಷ್ಟು ಕಾರಣಗಳಿಗೆ ಈ ಜೋಡಿ ಪ್ರೀತಿಸುತ್ತಿದೆ, ಈ ಜೋಡಿಯ ನಡುವೆ ಸಂಬಂಧವಿದೆ ಎಂಬ ಮಾತುಗಳು ಹರಿದಾಡುತ್ತಲೇ ಇರುತ್ತವೆ.

Kannada News: ಬಾಲಿವುಡ್ ಗೆ ಹೋದಮೇಲೆ ವಿಜಯ್ ಗೆ ಕೈ ಕೊಟ್ಟರೆ ರಶ್ಮಿಕಾ: ನಟನ ಜೊತೆ ಬಹಿರಂಗವಾಗಿ ಮಾಡಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ವಿಜಯ್. 4

ಆದರೆ ಇದೀಗ ಇದೆಲ್ಲವನ್ನು ಮೀರಿ ರಶ್ಮಿಕ ಕುರಿತಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ಮಿಷನ್ ಮಜ್ನು ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ನಟಿ ರಶ್ಮಿಕ ಪಾಲ್ಗೊಂಡಿದ್ದರು. ಈ ಚಿತ್ರದ ನಾಯಕ ನಟ ಸಿದ್ಧಾರ್ಥ ಮಲ್ಹೋತ್ರಾ ಅವರು ಕೂಡ ಈ ಪಾರ್ಟಿಯಲ್ಲಿದ್ದರು. ಈ ವೇಳೆ ಈ ಜೋಡಿ ಹಾರ್ಟ್ ಸಿಂಬಲ್ ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇನ್ನು ಕೆಲವರು ವಿಜಯ್ ಗೆ ಕೈ ಕೊಟ್ಟು ಸಿದ್ದಾರ್ಥ್ ಜೊತೆಗೆ ರಶ್ಮಿಕ ಪೋಸ್ ಎಂಬ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ರಶ್ಮಿಕ ವಿಜಯ್ ಗೂ ಕೈ ಕೊಟ್ಟು ಸಿದ್ಧಾರ್ಥ್ ಹಿಂದೆ ಬಿದ್ದಿದ್ದಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಓದಿ..Kannada News: ಅದೆಷ್ಟೋ ಸುಳ್ಳು ಮಾಹಿತಿಗಳ ನಡುವೆ ಕ್ರಾಂತಿ ಸಿನಿಮಾ ನಿಜಕ್ಕೂ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ?? ಫ್ಯಾನ್ಸ್ ಸುಳ್ಳು ಹೇಳುತ್ತಿದ್ದಾರೆಯೇ? ಆಗಿದ್ದರೆ ಕಲೆಕ್ಷನ್ ಎಷ್ಟು ಗೊತ್ತೇ??