ಕನ್ನಡತಿಯಲ್ಲಿ ಅಂತ್ಯವಾದ ಅಮ್ಮಮ್ಮ ಪಾತ್ರ: ಇವರಿಗೆ ಒಂದು ಎಪಿಸೋಡಿಗೆ ಕೊಡುತಿದ್ದ ಸಂಭಾವನೆ ಎಷ್ಟು ಅಂತೇ ಗೊತ್ತೇ?? ಯಪ್ಪಾ ಇಷ್ಟೊಂದ?

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿ ಈ ಧಾರಾವಾಹಿಯಲ್ಲಿ ಅಮ್ಮಮ್ಮ ರತ್ನಮಾಲಾ ಪಾತ್ರ ನಿರ್ವಹಿಸುತ್ತಿರುವ ನಟಿ ಚಿತ್ಕಲಾ ಬಿರಾದಾರ್. ಅಗ್ನಿಸಾಕ್ಷಿಯಲ್ಲಿ ನಾಯಕಿಯ ಅಮ್ಮನಾಗಿ ವೀಕ್ಷಕರ ಮನ ಸೆಳೆದ ಚಿತ್ಕಲಾ ಅವರು ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಅಯ್ಯಂಗಾರ್ ಪುಷ್ಪವಲ್ಲಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡರು .ಇದೀಗ ಇವರು ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿರಿತೆರೆಯಲ್ಲಿಯೂ ಸಹ ನಟಿಸಿದ್ದಾರೆ. ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ನಟನೆಯನ್ನು ಶುರು ಮಾಡಿದರು ಚಿತ್ಕಲಾ ಬಿರಾದಾರ್.

ಇಂಗ್ಲಿಷ್​ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ಒಂದಷ್ಟು ಸಮಯಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಮುಂದೆ ಉಪನ್ಯಾಸಕಿ ವೃತ್ತಿಗೆ ಬಾಯ್ ಹೇಳಿದ ಚಿತ್ಕಲಾ ಪೂರ್ಣ ಪ್ರಮಾಣದ ನಟಿಯಾಗಿ ಯಶಸ್ಸು ಪಡೆಯುತ್ತಿದ್ದಾರೆ. ಚಿತ್ಕಲಾ ಅವರು ಅತಿಹೆಚ್ಚು ಜನಪ್ರಿಯತೆ ಪಡೆದದ್ದು ಕನ್ನಡತಿ ಧಾರವಾಹಿ ಎಂದರೆ ತಪ್ಪಲ್ಲ. ಹರ್ಷನ ತಾಯಿಯಾಗಿ, ಭುವಿಗೆ ಅತ್ತೆಯಾಗಿ, ಭುವಿಗೆ ಜೀವನ ಪಾಠ ಕಲಿಸಿ, ಹರ್ಷನಿಗೆ ಜೀವನ ಕಲಿಸಿದರು ಅಮ್ಮಮ್ಮ. ಎರಡು ವರ್ಷಗಳಿಂದ ಈ ಧಾರಾವಾಹಿಯ ಅಮ್ಮಮ್ಮ ಪಾತ್ರದ ಮೂಲಕ ಜನರಿಗೆ ಮೆಚ್ಚುಗೆಯಾಗಿದ್ದರು.

ಕನ್ನಡತಿಯಲ್ಲಿ ಅಂತ್ಯವಾದ ಅಮ್ಮಮ್ಮ ಪಾತ್ರ: ಇವರಿಗೆ ಒಂದು ಎಪಿಸೋಡಿಗೆ ಕೊಡುತಿದ್ದ ಸಂಭಾವನೆ ಎಷ್ಟು ಅಂತೇ ಗೊತ್ತೇ?? ಯಪ್ಪಾ ಇಷ್ಟೊಂದ? 2

ಆದರೆ ಈಗ ಅಮ್ಮಮ್ಮ ಪಾತ್ರ ಕನ್ನಡತಿ ಧಾರವಾಹಿಯಲ್ಲಿ ಮುಕ್ತಾಯವಾಗಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮಮ್ಮ ಧಾರವಾಹಿಯಲ್ಲಿ ಕೊನೆಯುಸಿರೆಳೆದರು. ಧಾರವಾಹಿಯಲ್ಲಿ ಈಗ ಅಮ್ಮಮ್ಮ ಪಾತ್ರ ಕೊನೆಯಾಗಿದೆ, ಈ ಪಾತ್ರ ಮುಗಿದ ನಂತರ, ರತ್ನಮಾಲಾ ಪಾತ್ರ ನಿರ್ವಹಿಸಿದ ಚಿತ್ಕಲಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆ ಕೇಳಿಬಂದಿದ್ದು, ಚಿತ್ಕಲಾ ಅವರಿಗೆ ಒಂದು ಎಪಿಸೋಡ್ ಗೆ 30 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು.