ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಅದೆಂತೆಂಥಾ ಬುದ್ದಿವಂತರು ಇದ್ದಾರೆ ಎನ್ನುವುದು ಹಲವು ಅನ್ವೇಷಣೆಗಳಲ್ಲಿ ಭಾರತೀಯರ ಹೆಸರನ್ನು ನೋಡಿದಾಗ ತಿಳಿಯುತ್ತೆ. ಇನ್ನು ವಿದೇಶಗಳಲ್ಲಿ ಭಾರತೀಯರನ್ನು ಕರೆದು ಕೆಲಸ ಕೊಡುತ್ತಾರೆ ಎಂದರೆ ಅದು ನಮ್ಮಲ್ಲಿರುವ ಪ್ರತಿಭೆಗೆ ಸಾಕ್ಷಿ. ಇನ್ನು ಹಿಂದಿಯಲ್ಲಿ ಪ್ರಸಾರವಾಗಿವ ಕೆಬಿಸಿ ಗೊತ್ತಲ್ಲ! ಇದು ಬುದ್ದಿವಂತರಿಗೆ ಮಾತ್ರ ಎನ್ನುವಂಥ ಕ್ವಿಝ್ ಶೋ! ಇದು ನಮ್ಮಲ್ಲಿರುವ ಇನ್ನೊಂದಿಷ್ಟು ಬುದ್ಧಿವಂತರನ್ನ ಜಗತ್ತಿಗೆ ಪರಿಚಯಿಸುತ್ತಾ ಇರುವ ಒಂದು ಕಾರ್ಯಕ್ರಮ!

ಸ್ನೇಹಿತರೆ, ಬಾಲಿವುಡ್ ನ ಮೇರು ನಟ ಅಮಿತಾನ್ ಬಚ್ಚನ್ ನಡೆಸಿಕೊಡುವ ಸೂಪರ್ ಹಿಟ್ ಶೋ ಕೌನ್ ಬನೇಗಾ ಕರೋಡ್ ಪತಿ. ಇದರ ೧೩ ನೇ ಆವೃತ್ತಿ ಆರಂಭವಾಗಿದ್ದು ಈಗಾಗಲೇ ಸಾಕಷ್ಟು ಸ್ಪರ್ಧಿಗಳು ದೊಡ್ಡ ಮೊತ್ತದ ಹಣವನ್ನೇ ಗಳಿಸಿದ್ದಾರೆ. ಕೇವಲ ನಮ್ಮ ಬುದ್ದಿವಂತಿಕೆ, ಹಲವು ವಿಷಯಗಳ ಬಗ್ಗೆ ಜ್ಞಾನ ಹಾಗೂ ಸ್ವಲ್ಪ ಅದೃಷ್ಟ ಇದ್ದರೆ ಕೆಬಿಸಿ ಅಂಥವರಿಗೆ ತಕ್ಕುದಾದ ವೇದಿಕೆ. ಇಲ್ಲಿ ಹಲವಾರು ಸ್ಪರ್ಧಿಗಳು ಈ ವರೆಗೆ ಭಾಗವಹಿಸಿದ್ದು ಅದೆಷ್ಟೋ ಜನರಿಗೆ ಸಹಾಯವೂ ಆಗಿದೆ. ಇನ್ನು ಕೆಬಿಸಿ ೧೩ ನೇ ಆವೃತ್ತಿಯಲ್ಲಿ ಒಂದು ಕೋಟಿ ಹಣದ ಪ್ರಶ್ನೆಗೆ ಉತ್ತರಿಸುವ ಸೀಟ್ ನಲ್ಲಿ ಕುಳಿತವರು ಸವಿತಾ ಭಾಟಿ. ಜೋಧಪುರ ಮೂಲದ ಹಿರಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಈಕೆ. ಇವರಿಗೆ ಕೇಳಲಾದ ಒಂದು ಕೋಟಿ ರೂಪಾಯಿಯ ಪ್ರಶ್ನೆ ಯಾವುದು ಗೊತ್ತೇ?

‘1915ರಲ್ಲಿ ನಡೆದ ಮೊದಲನೇ ವರ್ಲ್ಡ್ ವಾರ್ ಸಮಯದಲ್ಲಿ, ಭಾರತದ ಸುಮಾರು 16,000 ಯೋಧರು ಹೋರಾಡಿದ್ದರು. ಆ ಯುದ್ಧ ಯಾವುದು?’ – ಆಯ್ಕೆಗಳು ಹೀಗಿದ್ದವು. ಗೆಲೀಶಿಯಾ, ಅಂಕರಾ, ಟಾಬ್ಸೋರ್, ಗಲಿಪೊಲಿ. ಇದಕ್ಕೆ ಸರಿಯಾದ ಉತ್ತರ ಗಲಿಪೊಲಿ. ಆದರೆ ಉತ್ತರ ಗೊತ್ತಿಲ್ಲದ ಕಾರಣ ಸವಿತಾ ಆಟಅನ್ನು ಕ್ವಿಟ್ ಮಾಡಿದ್ದರು. ಆದರೆ ಆಟ ಮುಗಿದ ನಂತರ ಉತ್ತರವನ್ನು ಅಂದಾಜಿಸಲು ಹೇಳಿದರೆ ಅವರ ಉತ್ತರವೂ ಗಲಿಪೊಲಿ ಎಂಬುದೇ ಆಗಿತ್ತು. ಸ್ವಲ್ವದರಲ್ಲಿ ಕೈತಪ್ಪಿ ಹೋದ ಕೋಟಿ ಹಣಕ್ಕೆ ಬೇಸರಗೊಂಡರು ಸವಿತಾ ಭಾಟಿ. ಪ್ರತಿ ಶ್ರುಕ್ರವಾರ ಸಿನಿತಾರೆಯರನ್ನು ಕೆಬಿಸಿ ವೇದಿಕೆಗೆ ಕರೆಸುತ್ತಿರುವುದು ವೀಕ್ಷಕರಿಗೆ ಇನ್ನಷ್ಟು ಮನೋರಂಜನೆಯನ್ನು ನೀಡುತ್ತಿದೆ. ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವ ಕೆಬಿಸಿ ೧೩ ನಲ್ಲಿ ಈ ವಾರ ಬಾಲಿವುಡ್ ನಟರಾದ ಪಂಕಜ್ ತ್ರಿಪಾಟಿ ಹಾಗೂ ಪ್ರತೀಕ್ ಗಾಂಧಿ ಭಾಗವಹಿಸಿದ್ದರು.