ಕೆ.ಜಿ.ಎಫ್ -2 ಚಿತ್ರದ ಅಧೀರ, ಸಂಜಯ್ ದತ್ ಗೆ ಯು.ಎ.ಇ ಸರ್ಕಾರ ಕೊಟ್ಟ ದೊಡ್ಡ ಗಿಫ್ಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಂಜಯ್ ದತ್ ಬಾಲಿವುಡ್ ನ ಖ್ಯಾತ ನಟ. ಲೆಜೆಂಡ್ ಸುನೀಲ್ ದತ್ ಹಾಗೂ ನರ್ಗೀಸ್ ರವರ ಪುತ್ರ. ನಟನೆ ಎಂಬುದು ರಕ್ತದಿಂದಲೇ ಬಂದಿರುವಂತಹ ಕಲಾವಿದ. ಸಂಜಯ್ ದತ್ ತಮ್ಮ ಸಿನಿ ಕರಿಯರ್ ನಲ್ಲಿ ಹಲವಾರು ಏಳು-ಬೀಳುಗಳನ್ನ ಕಂಡಿದ್ದಾರೆ. ನೀವು ರಣಬೀರ್ ಕಪೂರ್ ನಟಿಸಿರುವ ಸಂಜು ಸಿನಿಮಾ ನೋಡಿದರೇ ಸಾಕು, ಸಂಜಯ್ ದತ್ ರಷ್ಟು ಜೀವನದಲ್ಲಿ ಏಳುಬೀಳನ್ನ ಕಂಡ ನಟ ಯಾರೂ ಇರಲಿಕ್ಕೆ ಸಾಧ್ಯವಿಲ್ಲ. ಅಂತಹ ಸಂಜಯ್ ದತ್ ಗೆ ಜೀವಮಾನದಲ್ಲಿಯೇ ಒಂದು ದೊಡ್ಡ ಉಡುಗೊರೆ ಇಂದು ಸಿಕ್ಕಿದೆ.

ಹೌದು ಸಂಜಯ್ ದತ್ ಗೆ ಯು.ಎ.ಇ ಸರ್ಕಾರ ಗೋಲ್ಡನ್ ವೀಸಾ ನೀಡಿದೆ. ಗೋಲ್ಡನ್ ವೀಸಾ ಪಡೆದುಕೊಂಡಿರುವ ಫೋಟೋವನ್ನು ನಟ ದತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯು.ಎ.ಇ ಸರ್ಕಾರದಿಂದ ಈ ಗೋಲ್ಡನ್ ವೀಸಾ ಪಡೆದರೇ ಅದರಿಂದ ಹಲವಾರು ಲಾಭಗಳಿವೆ. ಈ ವೀಸಾ ಅವಧಿ 10 ವರ್ಷಗಳ ತನಕ ಇರುತ್ತದೆ. ಈ ವೀಸಾ ಹೊಂದಿದವರು ಯು.ಎ.ಇ ಸರ್ಕಾರದಿಂದ ಯಾವುದೇ ಪ್ರಮಾಣ ಪತ್ರ ಪಡೆಯದೇ ಬದುಕಬಹುದು, ಹೊಸ ವ್ಯಾಪಾರ ಅಥವಾ ಉದ್ಯಮ ಆರಂಭಿಸಬಹುದು,

ಇನ್ನು ವಿಶೇಷವೆಂದರೇ ಆ ಕಂಪನಿಯಲ್ಲಿ ಶೇ 100ರಷ್ಟು ಒಡೆತನ ಹೊಂದಬಹುದು. ಹಾಗಾಗಿ ಹೊರದೇಶದ ಹಲವಾರು ಜನ ಯು.ಎ.ಇ ಯಲ್ಲಿ ಗೋಲ್ಡನ್ ವೀಸಾ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಯು.ಎ.ಇ ದೇಶದ ಪ್ರಧಾನಮಂತ್ರಿ ಶೇಖ್ ಮಹಮದ್ ಬಿನ್ ರಷೀದ್ ಅಲ್ ಮಕ್ತೌಮ್ ಗೋಲ್ಡನ್ ವೀಸಾ ಅನುಮತಿ ನೀಡಿದ್ದರು. ಸದ್ಯ ಕೆ.ಜಿ.ಎಫ್ – 2 ಚಿತ್ರದಲ್ಲಿ ಅಧೀರ ಪಾತ್ರ ಮಾಡಿರುವ ಸಂಜಯ್ ದತ್ ಗೆ ಆ ಸಿನಿಮಾ ಬಿಡುಗಡೆ ಮುನ್ನವೇ ಅದೃಷ್ಠ ಖುಲಾಯಿಸಿದೆ ಎಂದು ಹೇಳಬಹುದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಕೆ.ಜಿ.ಎಫ್-2 ಇದೇ ಜುಲೈ 13 ರಂದು ಬಿಡುಗಡೆಯಾಗಬೇಕಿತ್ತು. ಆದರೇ ಕೋವಿಡ್ ಕಾರಣದಿಂದ ಅಕ್ಟೋಬರ್ ಇಲ್ಲವೇ ದೀಪಾವಳಿಗೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬಹುದೆಂದು ಮೂಲಗಳು ತಿಳಿಸಿವೆ.