ಕಿರುತೆರೆಯ ನಟಿಯರಾಗುವ ಮುನ್ನ ಏನೆಲ್ಲಾ ಕೆಲಸ ಮಾಡುತ್ತಿದ್ದರು ಗೊತ್ತೇ?? ಪಾರು ಪಾಠ ಮಾಡುತ್ತಿದ್ದರು, ಉಳಿದವರು ಏನು ಮಾಡುತ್ತಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಸಿನಿಮಾ ರಂಗ ಅಂದ್ರೆ ಒಂದು ಸಾಗರ ಎನ್ನುತ್ತಿದ್ದೆವು. ಆದ್ರೆ ಈಗ ಕಿರುತೆರೆ ಲೋಕವೇ ದೊಡ್ಡ ಸಮುದ್ರವಾಗಿದೆ. ಯಾಕಂದ್ರೆ ಕಿರುತೆರೆಯಲ್ಲಿ ಧಾರಾವಾಹಿಗಳು, ರಿಯಾಲಿಟಿ ಶೋಗಳು ಸಾಲು ಸಾಲಾಗಿ ಬರುತ್ತಿವೆ. ದಿನದ 24 ಗಂಟೆಯೂ ಟಿವಿ ಮುಂದೆ ಕುಳಿತ್ರೂ ಮುಗಿಯದಷ್ಟು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲೂ ಧಾರಾವಾಹಿಗಳಿಗೆ ಪ್ರಮುಖ ಸ್ಥಾನವಿದೆ.

ಇತ್ತೀಚಿಗೆ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಬಹುತೇಕ ಹೊಸ ಮುಖಗಳನ್ನೇ ಕಾಣಬಹುದು. ಅದರಲ್ಲೂ ಮುಖ್ಯ ಭೂಮಿಕೆಯಲ್ಲಿ ಹೊಸಬರನ್ನೇ ಹುಡುಕಿ ತರುತ್ತಾರೆ ನಿರ್ದೇಶಕರು. ಜ್ನರೂ ಕೂಡ ಹೊಸ ಹೊಸ ಮುಖಗಳಿಗೆ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಇನ್ನು ಹೀಗೆ ಅಚಾನಕ್ ಆಗಿ ನಟನೆಗೆ ಬರುವುದಕ್ಕಿಂತ ಮೊದಲು ನಿಮ್ಮ ನೆಚ್ಚಿನ ನಟಿಯರು ಏನು ಮಾಡುತ್ತಿದದ್ರು ಎಂದ್ ತಿಳಿದುಕೊಳ್ಳುವ ಆಸೆ ಇದ್ಯಾ? ಹಾಗಾದರೆ ಬನ್ನಿ ನಾವು ಈ ಬಗ್ಗೆ ಮಾಹಿತಿಯನ್ನ ಕೊಡುತ್ತೇವೆ.

ಕಿರುತೆರೆಯ ನಟಿಯರಾಗುವ ಮುನ್ನ ಏನೆಲ್ಲಾ ಕೆಲಸ ಮಾಡುತ್ತಿದ್ದರು ಗೊತ್ತೇ?? ಪಾರು ಪಾಠ ಮಾಡುತ್ತಿದ್ದರು, ಉಳಿದವರು ಏನು ಮಾಡುತ್ತಿದ್ದರು ಗೊತ್ತೇ?? 2

’ಗಟ್ಟಿಮೇಳ’ ಧಾರಾವಾಹಿಯ ರೌಡಿ ಬೇಬಿ ಅಮೂಲ್ಯಾ ಪಾತ್ರಧಾರಿ ನಿರಾ ರವೀಂದ್ರ, ಬಿಕಾಂ ಪದವಿಯನ್ನು ಮಾಡುತ್ತಲೇ ನಟನೆಯನ್ನು ಮಾಡುತ್ತಿದ್ದಾರೆ. ಹಾಗೆಯೇ ’ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸಂಜನಾ ಬುರ್ಲಿ ಇಂಜನಿಯರಿಂಗ್ ಕೊನೆಯ ಸೆಮಿಸ್ಟರ್ ನಲ್ಲಿದ್ದಾರೆ. ’ಜೊತೆ ಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ ಓದುತ್ತಿರುವಾಗಲೇ ನಟನೆಗೆ ಬಂದು ಇದೀಗ ಸಂಪೂರ್ಣ ವೃತ್ತಿಯನ್ನು ಅಭಿನಯವಾಗಿಸಿಕೊಂಡಿದ್ದಾರೆ.

ಇನ್ನು ’ನನ್ನರಸಿ ರಾಧೆ’ಯ ಇಂಚರಾ ಪಾತ್ರಧಾರಿ ಕೌಸ್ತುಭಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸವನ್ನು ಬಿಟ್ಟು ನಟನಾ ಲೋಕಕ್ಕೆ ಕಾಲಿಟ್ಟರು. ’ಪಾರು’ ಧಾರಾವಾಹಿಯ ಮೋಕ್ಷಿತಾ ಪೈ ಶೇಷಾದ್ರಿಪುರಂ ನಲ್ಲಿ ಮ್ಮಕ್ಕಳಿಗೆ ಪಾಠ ಮಾಡುತ್ತಿದ್ದವರು, ಅವಕಾಶ ಸಿಕ್ಕ ಕೂಡಲೆ ಇಲ್ಲಿಯೇ ವೃತ್ತಿಯನ್ನ ಮುಂದುವರೆಸಿದ್ರು. ’ಲಕ್ಷ್ಮಿ ಬಾರಮ್ಮ’ ಚಿನ್ನು, ರಶ್ಮಿ ಪ್ರಭಾಕರ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಆದರೆ ನಟನೆ ಮಾಡುವ ಉದ್ದೇಶದಿಂದ ಆ ಕೆಲಸವನ್ನು ತೊರೆದು ಕಿರುತೆರೆಗೆ ಕಾಲಿಟ್ಟರು. ಸ್ನೇಹಿತರೆ ಇನ್ನೂ ಹಲವಾರು ಕಲಾವಿದರು ಹೀಗೆ ತಮ್ಮ ವೃತ್ತಿ ಹಾಗೂ ವಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡ್ತಾ, ಜನರಿಗೆ ಮನರಂಜನೆಯನ್ನೂ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.