ಎಷ್ಟೇ ಪ್ರಯತ್ನ ಪಟ್ಟು ಸಿನೆಮಾ ತಡೆದರೂ ಕಿಂಚಿತ್ತೂ ಕಡಿಮೆಯಾಗಲಿಲ್ಲ ಕೋಟಿಗೊಬ್ಬ, ಹೆಸರಿಗೆ ತಕ್ಕಂತೆ ಬಾಚಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ3 ಅಂದುಕೊಂಡಂತೆ ನಡೆದಿದ್ದರೆ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ನಡೆದಿರುವ ಹಲವಾರು ಅಡಚಣೆಗಳಿಂದಾಗಿ ಕೋಟಿಗೊಬ್ಬ3 ಚಿತ್ರವೊಂದು ದಿನ ತಡವಾಗಿ ಬಿಡುಗಡೆಯಾಗಿತ್ತು. ಇದರಿಂದಾಗಿ ಕೋಟಿಗೊಬ್ಬ3 ಚಿತ್ರದ ನಿರ್ಮಾಪಕರಿಗೆ ಎಂಟರಿಂದ 10 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ.

ಇನ್ನು ಕೋಟಿಗೊಬ್ಬ3 ಚಿತ್ರ ತಡವಾಗಿ ಬಿಡುಗಡೆಯಾಗಲು ಕಾರಣವಾಗಿರುವುದು ಕೆಲವು ವಿತರಕರ ಷಡ್ಯಂತ್ರ ಎಂಬುದಾಗಿ ನಿರ್ಮಾಪಕ ಸೂರಪ್ಪ ಬಾಬು ರವರು ಠಾಣೆಯ ಮೊರೆ ಹೋಗಿದ್ದಾರೆ. ಇನ್ನು ಈ ಕುರಿತಂತೆ ಸೂರಪ್ಪ ಬಾಬು ರವರು ಚಿತ್ರದುರ್ಗದ ವಿತರಕರಾಗಿರುವ ಖಾಜಾಫೀರ್ ರವರಿಗೆ ಕರೆ ಮಾಡಿದ ಮಕೆ ಹಾಕಿದ್ದಾರೆ ಎಂಬ ಕುರಿತಂತೆ ಸುದ್ದಿ ಕೂಡ ವರದಿಯಾಗಿದ್ದು ಸೂರಪ್ಪಬಾಬು ರವರ ಮೇಲೆ ಕೂಡ ಪ್ರಕರಣ ದಾಖಲಾಗಿದೆ. ಇನ್ನು ಇವೆಲ್ಲದರ ನಡುವೆ ಕೋಟಿಗೊಬ್ಬ 3 ಚಿತ್ರದ ಮೊದಲ ದಿನದ ಗಳಿಕೆಯ ಅಧಿಕೃತ ಘೋಷಣೆ ಕೂಡ ಈಗ ನಡೆದಿದೆ.

ಹೌದು ಸ್ನೇಹಿತರ ಅಭಿನಯ ಚಕ್ರವರ್ತಿ ಕೋಟಿಗೊಬ್ಬ 3 ಚಿತ್ರ ಲೇಟಾಗಿ ಬಿಡುಗಡೆಯಾಗಿದ್ದರೂ ಕೂಡ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಕುಗ್ಗಿರಲಿಲ್ಲ. ಮೊದಲ ದಿನವೇ 12.5 ಕೋಟಿ ಗಳಿಕೆ ಮಾಡಿದೆ ಎಂಬ ಅಧಿಕೃತ ಘೋಷಣೆಗಳು ಹೊರಬಿದ್ದಿವೆ. ಬಿಡುಗಡೆಯ ಗೊಂದಲದ ನಡುವೆ ಕೂಡ ಇಷ್ಟೊಂದು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವುದು ಗಮನಾರ್ಹ ಬೆಳವಣಿಗೆ ಎಂದೇ ಹೇಳಬಹುದಾಗಿದೆ. ಇನ್ನು ವಾರಾಂತ್ಯದಲ್ಲಿ ಇದರ ಕಲೆಕ್ಷನ್ 30 ಕೋತಿ ದಾಟಲಿದೆ ಎಂಬುದು ಖಚಿತವಾಗಿದೆ. ಒಟ್ಟಾರೆಯಾಗಿ ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗಿ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ಮೂರು ವರ್ಷಗಳ ಕಾಯುವಿಕೆಯ ನಂತರ ಕೋಟಿಗೊಬ್ಬ3 ಚಿತ್ರ ಲಾಭವನ್ನೇ ಪಡೆಯುತ್ತಿದೆ ಎಂದು ಹೇಳ ಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.