ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ. ಇದೊಂದು ಜೀವನ ಪಾಠವೇ ಸರಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಶ್ರೀಕೃಷ್ಣನ ಹಲವಾರು ಕಥೆಗಳು, ಲೀಲೆಗಳು, ಪವಾಡಗಳು ಗೊತ್ತಿರುತ್ತದೆ. ಮಹಾಭಾರತ, ಕುರುಕ್ಷೇತ್ರ, ಭಗವದ್ಗೀತೆ, ಇವೆಲ್ಲವೂ ಶ್ರೀಕೃಷ್ಣ ನಮಗೆ ತಿಳಿಸಿದ ಜೀವನ ಪಾಠಗಳು. ಅಷ್ಟೇ ಅಲ್ಲ ಶ್ರೀಕೃಷ್ಣ ತನ್ನ ಪ್ರತಿಯೊಂದು ಅವತಾರದಲ್ಲಿಯೂ ಮನುಷ್ಯ ಅರ್ಥಮಾಡಿಕೊಳ್ಳಬೇಕಾದ ಹಲವಾರು ಅಂಶಗಳನ್ನು ತಿಳಿಸಿದ್ದಾನೆ. ಶ್ರೀಕೃಷ್ಣ ಕೆಲವರಲ್ಲಿ ಇದ್ದ ಅಹಂಭಾವವನ್ನು ಹೇಗೆ ನಿವಾರಿಸಿದನು ಎಂಬುದನ್ನು ಒಂದು ನಿದರ್ಶನದ ಮೂಲಕ ನಾವು ತಿಳಿಯಬಹುದು. ಅಂತ ಒಂದು ಕಥೆಯನ್ನು ನಾವಿಂದು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ. ಇದೊಂದು ಜೀವನ ಪಾಠವೇ ಸರಿ. 4

ಒಮ್ಮೆ ಶ್ರೀಕೃಷ್ಣನು ದ್ವಾರಕೆಯಲ್ಲಿ ಸತ್ಯಭಾಮಾಳ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ, ಸತ್ಯಭಾಮ ಶ್ರೀಕೃಷ್ಣನನ್ನು ಒಂದು ಪ್ರಶ್ನೆ ಕೇಳುತ್ತಾಳೆ. ’ಸ್ವಾಮಿ ನೀವು ತ್ರೇತಾಯುಗದಲ್ಲಿ ಶ್ರೀರಾಮನ ಅವತಾರ ತಾಳಿದ್ದೀರೀಅಲ್ಲವೇ, ಅಲ್ಲಿ ಸೀತೆ ನನಗಿಂತಲೂ ಸುಂದರವಾಗಿದ್ದಳೇ’ ಎಂದು ಪ್ರಶ್ನಿಸುತ್ತಾಳೆ. ಇದೇ ಸಮಯದಲ್ಲಿ ಶ್ರೀಕೃಷ್ಣನ ಜೊತೆಗಿದ್ದ ಗರುಡ, ತನಗಿಂತಲೂ ವೇಗವಾಗಿ ಹಾರ ಬಲ್ಲವರು ಇದ್ದಾರೆ ಎಂದು ಕೇಳುತ್ತಾನೆ ಇನ್ನೊಂದು ಕಡೆಗೆ ಶ್ರೀಕೃಷ್ಣನ ಜೊತೆಯಲ್ಲಿದ್ದ ಸುದರ್ಶನ ಚಕ್ರ ಯಾರಾದರೂ ತನಗಿಂತ ಬಲಶಾಲಿಗರೇ ಎಂದು ಕೇಳುತ್ತದೆ.

ಈ ಮೂರು ಪ್ರಶ್ನೆಗಳನ್ನು ಕೇಳಿ ಶ್ರೀಕೃಷ್ಣನು ಮುಗುಳ್ನಗುತ್ತಾನೆ ಮತ್ತು ಈ ಮೂವರಲ್ಲಿ ನಾವೇ ಶ್ರೇಷ್ಠರು ಎಂಬ ಅಹಂಕಾರ ತುಂಬಿತುಳುಕುತ್ತಿದೆ ಹಾಗಾಗಿ ಇವರಲ್ಲಿನ ಅಹಂಕಾರವನ್ನು ನಾನು ಹೋಗಲಾಡಿಸಬೇಕು ಎಂದು ತೀರ್ಮಾನಿಸುತ್ತಾನೆ. ಇದಕ್ಕಾಗಿ ಶ್ರೀಕೃಷ್ಣ ಒಂದು ಯೋಜನೆಯನ್ನು ರೂಪಿಸುತ್ತಾರೆ. ಗರುಡನ ಬಳಿ ಶ್ರೀಕೃಷ್ಣನು, ನಾನು ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ ಆದರೆ ಅದಕ್ಕೂ ಮೊದಲು ಹನುಮಂತನ ಬಳಿ ಹೋಗಿ ಶ್ರೀರಾಮ ಹಾಗೂ ಸೀತಾಮಾತೆ ದ್ವಾರಕೆಯಲ್ಲಿ ನಿನಗಾಗಿ ಕಾಯುತ್ತಿದ್ದಾರೆ ಎಂದು ಹೇಳಿ ಕರೆದುಕೊಂಡು ಬಾ ಎಂದು ಒಂದು ಕೆಲಸವನ್ನು ವಹಿಸುತ್ತಾನೆ.

ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ. ಇದೊಂದು ಜೀವನ ಪಾಠವೇ ಸರಿ. 5

ಇದೇ ಸಮಯದಲ್ಲಿ ಸತ್ಯಭಾಮೆಗೆ ನೀನು ಸೀತಾಮಾತೆಯಂತೆ ಉಡುಗೆ ತೊಟ್ಟು ಬಾ. ಹನುಮಂತನು ಇನ್ನೇನು ದ್ವಾರಕೆಯನ್ನು ಪ್ರವೇಶಿಸುತ್ತಾನೆ ನಾನು ಶ್ರೀರಾಮನಂತೆ ಉಡುಗೆ ತೊಡುತ್ತೇನೆ ಎಂದು ಹೇಳುತ್ತಾನೆ. ಜೊತೆಗೆ ಸುದರ್ಶನ ಚಕ್ರಕ್ಕೆ ನೀನು ದ್ವಾರಕೆಯ ಬಾಗಿಲು ಬಳಿ ಕಾವಲು ಕಾಯಿ ಯಾರನ್ನೂ ಒಳಗೆ ಬಿಡಬೇಡ ಎಂದು ಆದೇಶ ನೀಡುತ್ತಾನೆ ಶ್ರೀಕೃಷ್ಣ. ಶ್ರೀಕೃಷ್ಣನ ಆಜ್ಞೆಯಂತೆ ಸತ್ಯಭಾಮೆ ಸೀತಾಮಾತೆಯಂತೆ ಉಡುಗೆ ತೊಟ್ಟು ಸಿದ್ಧವಾದರೆ ಹನುಮಂತನನ್ನು ಅರಸಿ ಗರುಡ ಹೊರಡುತ್ತಾನೆ. ಸುದರ್ಶನ ಚಕ್ರ ದ್ವಾರಕೆಯ ಪ್ರವೇಶದ್ವಾರದಲ್ಲಿ ಕಾವಲು ಕಾಯಲು ನಿಲ್ಲುತ್ತದೆ. ಮುಂದೇನಾಯಿತು? ಓದಿ.

ಗರುಡನು ಹನುಮಂತನ ಬಳಿ ವಿಷಯವನ್ನು ತಿಳಿಸಿ ದ್ವಾರಕೆಗೆ ಮರಳುವಷ್ಟರಲ್ಲಿ ಹನುಮಂತನು ಶ್ರೀಕೃಷ್ಣನ ಬಳಿ ಕುಳಿತು ಮಾತನಾಡುತ್ತಿದ್ದನು. ಇದನ್ನು ನೋಡಿ ಗರುಡನು ತನಗಿಂತ ಹನುಮಂತನು ವೇಗವಾಗಿ ಚಲಿಸಬಲ್ಲನು ಎಂಬುದನ್ನು ಅರಿತುಕೊಳ್ಳುತ್ತಾನೆ. ಹಾಗೆಯೇ ಶ್ರೀಕೃಷ್ಣನ ಬಳಿ ಕ್ಷಮೆ ಯಾಚಿಸುತ್ತೇನೆ. ವಾಯುಪುತ್ರ ಹನುಮಂತ ಅರಮನೆಯನ್ನು ಪ್ರವೇಶಿಸಿದ್ದಕ್ಕೆ ಶ್ರೀಕೃಷ್ಣನು ದ್ವಾರದಲ್ಲಿ ನಿಮ್ಮನ್ನು ಯಾರು ತಡೆಯಲಿಲ್ಲವೇ ಎಂದು ಕೇಳುತ್ತಾನೆ. ಆಗ ಹನುಮಂತನು ತನ್ನ ಬಾಯಿಂದ ಸುದರ್ಶನ ಚಕ್ರವನ್ನು ತೆಗೆದು ಶ್ರೀಕೃಷ್ಣನ ಕೈಗಿಡುತ್ತಾನೆ. ನಾನು ನೋಡಲು ಬಂದಿದ್ದು ನನ್ನ ದೇವರನ್ನು. ದೇವರ ದರ್ಶನವನ್ನು ಯಾರಾದರೂ ತಡೆಯಲಾದೀತೇ? ಸುದರ್ಶನ ಚಕ್ರವು ನನ್ನನ್ನು ತಡೆಯಲು ಸಾಕಷ್ಟು ಪ್ರಯತ್ನಪಟ್ಟಿತು. ಆದರೆ ನಾನು ಅದನ್ನು ನನ್ನ ಬಾಯೊಳಗಿಟ್ಟುಕೊಂಡು ಬಂದೆ ಎಂದು ಹೇಳುತ್ತಾನೆ. ಇದರಿಂದ ಸುದರ್ಶನ ಚಕ್ರಕ್ಕೆ ನಾಚಿಕೆಯಾಗುತ್ತದೆ ತನಗಿಂತ ಬಲಶಾಲಿಯಾದವನು ಈ ಜಗತ್ತಿನಲ್ಲಿ ಇದ್ದೆ ಎಂಬುದನ್ನು ಅರಿತುಕೊಳ್ಳುತ್ತದೆ.

ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮ ಇವರ ಅಹಂ ಕಡಿಮೆ ಮಾಡಲು ಶ್ರೀಕೃಷ್ಣ ಬಳಸಿದ ತಂತ್ರದ ಕಥೆ. ಇದೊಂದು ಜೀವನ ಪಾಠವೇ ಸರಿ. 6

ಹನುಮಂತನು ಶ್ರೀ ಕೃಷ್ಣನನ್ನು ನೋಡಿ ನೀವು ಶ್ರೀಕೃಷ್ಣ ಎಂದು ನನಗೆ ತಿಳಿದಿದೆ. ನಾನು ನಿಮ್ಮಲ್ಲಿ ಶ್ರೀರಾಮನನ್ನು ನೋಡುತ್ತಿದ್ದೇನೆ ಆದರೆ ನಿಮ್ಮ ಪಕ್ಕದಲ್ಲಿ ಕುಳಿತಿರುವವರು ಸೀತಾ ಮಾತೆ ಅಲ್ಲವೆಂಬುದು ನನಗೆ ಅರಿವಿದೆ. ಮಾತೆ ಸೀತೆಯನ್ನು ಬೇರೆ ಯಾರಲ್ಲಿಯೂ ಕಾಣಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾನೆ. ಹನುಮಂತನ ಈ ಮಾತನ್ನು ಆಲಿಸಿದ ಸತ್ಯಭಾಮ ತಾನು ಯಾವುದೇ ಕಾರಣಕ್ಕೂ ಸೀತೆಯ ಸಮಾನಕ್ಕೆ ನಿಲ್ಲಲು ಸಾಧ್ಯವೇ ಇಲ್ಲ ಎಂದು ಅರಿತು ತಾನು ಅಹಂಕಾರ ಪಟ್ಟಿದ್ದಕ್ಕೆ ತಲೆತಗ್ಗಿಸುತ್ತಾಳೆ. ಹೀಗೆ ಸುಲಭವಾಗಿ, ಅರ್ಥವಾಗುವ ರೀತಿಯಲ್ಲಿ ಸುದರ್ಶನ ಚಕ್ರ, ಗರುಡ ಹಾಗೂ ಸತ್ಯಭಾಮಳಿಗೆ ತಮ್ಮ ಅಹಂ ಬಗ್ಗೆ ಅರಿವು ಮೂಡಿಸಿ ಅದು ತಪ್ಪು ಎಂಬುದನ್ನು ಮನವರಿಕೆ ಮಾಡುತ್ತಾನೆ ಶ್ರೀ ಮಾಧವ. ಹೌದು ಸ್ನೇಹಿತರೆ ನಾವು ನಮ್ಮ ಜೀವನದಲ್ಲಿ ಅಹಂಕಾರವನ್ನು ಬಿಟ್ಟು ಸಾಧನೆಯತ್ತ ಮುಖ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.