Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್

Lakshana: ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಪ್ರತಿ ಸಂಚಿಕೆಗಳಲ್ಲೂ ಟ್ವಿಸ್ಟ್ ಇಡಲಾಗಿದ್ದು ಮುಂದೇನು ಎಂದು ವೀಕ್ಷಕ ಕಾದು ಕುಳಿತುಕೊಳ್ಳುವಂತೆ ಮಾಡಲಾಗಿದೆ. ಪ್ರತಿ ಎಪಿಸೋಡ್ ಅನ್ನು ಕೂಡ ನಾಯಕ, ನಾಯಕಿ ಹೇಗೆ ತನ್ನ ಸಮಸ್ಯೆಗಳನ್ನು ಭೇದಿಸುತ್ತಾರೆ? ತೆರೆ ಮರೆಯಲ್ಲಿ ನಡೆಯುವ ಮೋಸಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎನ್ನುವುದರ ಸುತ್ತ ಇಂಟರೆಸ್ಟಿಂಗ್ ಆಗಿ ಕಥೆ ಹೆಣೆಯಲಾಗಿದೆ. ನಕ್ಷತ್ರ (Nakshatra) ಮತ್ತು ಭೂಪತಿ (Bhoopathi) ನಡುವಿನ ಕಥೆ ಇದಾಗಿದ್ದು ಅವರು ಹೇಗೆ ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೀರಿ ನಿಲ್ಲುತ್ತಾರೆ, ಮೆಟ್ಟಿ ನಿಲ್ಲುತ್ತಾರೆ ಎನ್ನುವುದೇ ಲಕ್ಷಣದ ಧಾರವಾಹಿ ಸ್ಟೋರಿ ಆಗಿದೆ.

Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್ 4

ಕಲರ್ಸ್ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಲಕ್ಷಣ ಧಾರವಾಹಿಯೂ ಒಂದು. ಇತ್ತೀಚಿಗಷ್ಟೇ ಕಥೆಯಲ್ಲಿ ಡೆವಿಲ್ ಅಂದರೆ ಖಳನಾಯಕಿ ಯಾರು ಎನ್ನುವುದನ್ನು ಕಂಡುಹಿಡಿಯುವುದರ ಕುರಿತ ದೃಶ್ಯಗಳನ್ನು ಹೆಣೆಯಲಾಗಿತ್ತು. ಈ ಸಂಚಿಕೆಗಳು ರೋಚಕತೆಯನ್ನು ಉಂಟುಮಾಡಿದ್ದವು. ಇನ್ನೇನು ಡೆವಿಲ್ ಯಾರು ಎನ್ನುವುದು ಗೊತ್ತಾಗುವ ವೇಳೆಗೆ ಇದು ಚಂದ್ರಶೇಖರ್ ಎಣದಿರುವ ಬಲೆ ಎಂದು ಅರಿವಾದ ಮೇಲೆ ಡೆವಿಲ್ ಅಲ್ಲಿಂದ ಪರಾರಿಯಾಗಿದ್ದಳು. ಕೊನೆ ಕ್ಷಣದಲ್ಲಿ ಡೆವಿಲ್ ಭೂಪತಿ ಮತ್ತು ನಕ್ಷತ್ರಕ್ಕೆ ಸಿಗದೆ ಬಚಾವ್ ಆಗಿದ್ದಳು.

ತಾನು ಮಾಡುವ ಎಲ್ಲಾ ಕೆಲಸಗಳನ್ನು ಮೌರ್ಯನ ಮೇಲೆ ಬರುವ ಹಾಗೆ ಉಪಾಯದಿಂದ ಯೋಚಿಸಿ ಎಲ್ಲ ಕೆಲಸಗಳನ್ನು ಡೆವಿಲ್ ಮಾಡುತ್ತಿದ್ದಾಳೆ. ಅಲ್ಲದೆ ಮೌರ್ಯನಿಗೆ ಇದುವರೆಗೆ ಚಂದ್ರಶೇಖರ್ ಮೇಲೆ ದ್ವೇಷವಿತ್ತು. ತನ್ನ ತಾಯಿ ಶಕುಂತಲಾ ದೇವಿಯನ್ನು ಹೆದರಿಸಿ ಭೂಪತಿ ನಕ್ಷತ್ರಗಳನ್ನು ಮದುವೆಯಾಗುವ ಹಾಗೆ ಮಾಡಿದ್ದಾನೆ ಎಂದು ಆತನಿಗೆ ಅನುಮಾನವಿತ್ತು. ಇದೇ ಕಾರಣಕ್ಕೆ ನಕ್ಷತ್ರ ಮತ್ತು ಚಂದ್ರಶೇಖರ್ ಕಂಡರೆ ಮೌರ್ಯನಿಗೆ (Mourya) ಆಗುತ್ತಿರಲಿಲ್ಲ. ಯಾವಾಗಲೂ ಕೂಡ ದ್ವೇಷಿಸುತ್ತಿದ್ದ. ಆದರೆ ಇದೀಗ ಚಂದ್ರಶೇಖರ್ ಅನಿವಾರ್ಯ ಪರಿಸ್ಥಿತಿಯಿಂದಾಗಿ ಈ ರೀತಿ ನಕ್ಷತ್ರ ಮದುವೆ ಮಾಡಿಸಬೇಕಾಯಿತು. ಆತ ಶಕುಂತಲಾ ದೇವಿಗೆ ಬೆದರಿಕೆ ಹಾಕಿಲ್ಲ ಎನ್ನುವ ಸತ್ಯ ಅವನಿಗೆ ಮನದಟ್ಟಾಗಿದೆ.

Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್ 5

ಈ ರೀತಿಯಾಗಿ ತನ್ನ ಸತ್ಯ ಅರಿವಾದ ಮೇಲೆ ಅವನು ಒಳ್ಳೆಯವನಾಗಿದ್ದಾನೆ. ಇತ್ತ ಡೆವಿಲ್ ನಕ್ಷತ್ರಗಳನ್ನು ಕೊಲ್ಲಲೆಂದು ಹುಡುಗರನ್ನು ಕಳುಹಿಸಿರುತ್ತಾಳೆ. ಆದರೆ ಮೌರ್ಯ ಅವರೆಲ್ಲರನ್ನು ಎದುರಿಸಿ ನಕ್ಷತ್ರಗಳನ್ನು ರಕ್ಷಿಸುತ್ತಾನೆ. ನಂತರ ತನ್ನ ತಪ್ಪಿನ ಅರಿವಾಗಿ ಮೊದಲ ಬಾರಿಗೆ ಅತ್ತಿಗೆ ಎಂದು ಕರೆದು ನನ್ನನ್ನು ದಯಮಾಡಿ ಕ್ಷಮಿಸಿಬಿಡಿ ಅತ್ತಿಗೆ, ನಾನು ಇಷ್ಟು ದಿನ ತಪ್ಪು ತಿಳಿದುಕೊಂಡು ಇಷ್ಟೆಲ್ಲ ಮಾಡಿದೆ. ತಪ್ಪು ಮಾಡಿಬಿಟ್ಟೆ ನಾನು. ನನ್ನನ್ನು ದಯಮಾಡಿ ಕ್ಷಮಿಸಿ ಎಂದು ಕೈಮುಗಿದು ಮಂಡಿಯೂರಿ ಕೇಳಿಕೊಂಡಿದ್ದಾನೆ. ಈ ಮೂಲಕ ಮೌರ್ಯ ತನ್ನ ತಪ್ಪಿನ ಅರಿವಾಗಿ ಬದಲಾಗಿದ್ದಾನೆ. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯ ಮತ್ತು ಖುಷಿ ಒಟ್ಟೊಟ್ಟಿಗೆ ಆಗಿದೆ ಎಂದೇ ಹೇಳಬಹುದು.

ಇದರಿಂದಾಗಿ ನಕ್ಷತ್ರ ಅವನ ಮೇಲಿರುವ ಎಲ್ಲಾ ಕೇಸ್ ಗಳನ್ನು ಬಗೆಹರಿಸುವ ಯೋಚನೆಯಲ್ಲಿದ್ದಾಳೆ. ಸಾಕಷ್ಟು ಅಪರಾಧಗಳನ್ನು ಮಾಡಿರುವ ಮೌರ್ಯನ ಮೇಲೆ ಪೊಲೀಸ್ ಕೇಸ್ಗಳಿವೆ. ಇವುಗಳೆಲ್ಲವನ್ನು ತೆಗೆಸಬೇಕೆಂದು ನಕ್ಷತ್ರ ಯೋಚಿಸುತ್ತಿದ್ದಾಳೆ. ಜೊತೆಗೆ ಚಂದ್ರಶೇಖರ್ ಮೌರ್ಯನ ಮೇಲೆ ಹಾಕಿದ್ದ ಕೇಸ್ ಕೂಡ ತೆಗಿಸಬೇಕೆಂದು ತಂದೆಗೆ ಕೇಳಿದ್ದಾಳೆ. ಇದಕ್ಕೆ ಚಂದ್ರಶೇಖರ್ ಕೂಡ ಒಪ್ಪಿಕೊಂಡಿದ್ದು ಇನ್ನೂ ಮೌರ್ಯನ ಮೇಲೆ ಇದ್ದ ಎಲ್ಲ ಕೇಸ್ಗಳು ಕೂಡ ಬಗೆಹರಿಯಲಿವೆ. ಇನ್ನು ಮುಂದೆ ಒಳ್ಳೆಯವನಾಗಿ ಮನೆಯ ಮಗನಾಗಿ ಇರುತ್ತೇನೆ ಎಂದು ಮೌರ್ಯ ಹೇಳಿಕೊಂಡಿದ್ದಾನೆ.

Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್ 6

ತನ್ನ ತಪ್ಪನ್ನು ಕ್ಷಮಿಸಬೇಕೆಂದು ತಾಯಿ ಶಕುಂತಲಾ ದೇವಿಯಲ್ಲೂ ಕೂಡ ಕೇಳಿಕೊಂಡಿದ್ದಾನೆ. ಈ ಮೂಲಕ ಮೌರ್ಯ ಒಳ್ಳೆಯವನಾಗಿ ಬದಲಾಗಿದ್ದಾನೆ. ಆದರೆ ಇಷ್ಟೆಲ್ಲದರ ನಡುವೆಯೂ ಮತ್ತೊಂದು ಸಂದೇಹ ಮೂಡಿದೆ. ಇಷ್ಟು ದುಷ್ಟನ ಹಾಗೆ ವರ್ತಿಸಿ ಈಗ ಏಕ ಏಕೀ ಬಲದಲಾಗಿದ್ದೇನೆ ಎಂದರೆ ಹೇಗೆ ನಂಬುವುದು ಎನ್ನುವ ಮಟ್ಟಿಗೆ ಪ್ರೇಕ್ಷಕರಿಗೆ ತಲೆಗೆ ಹುಳ ಬಿಟ್ಟಂತೆ ಆಗಿದೆ. ಮೌರ್ಯ ಬದಲಾಗಿರುವುದು ಪ್ರೇಕ್ಷಕರಿಗೆ ಅನುಮಾನ ಮೂಡಿಸಿದೆ. ಬಹುಶಃ ಇದೆಲ್ಲವೂ ನಾಟಕ ಇರಬಹುದು ಎನ್ನುವ ಸಂದೇಹ ವ್ಯಕ್ತವಾಗುತ್ತಿದೆ.

ಜೊತೆಗೆ ಮೌರ್ಯ ಈ ರೀತಿ ನಾಟಕ ಮಾಡಿ ತನ ಮೇಲಿರುವ ಎಲ್ಲಾ ಕೇಸ್ ಗಳನ್ನು ಪರಿಹರಿಸಿಕೊಂಡರೆ ಆತ ಮಾಡುವ ಎಲ್ಲಾ ಅಪರಾಧಗಳಿಗೂ ಕೂಡ, ಹೊಸ ಪ್ಲಾನ್ಗಳಿಗೂ ಕೂಡ ಅನುಕೂಲವಾಗುತ್ತದೆ. ಹೀಗಾಗಿಯೇ ಈತ ಹೀಗೆ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ರೀತಿಯ ಅಪರಾಧದ ಕೇಸ್ ಗಳಿದ್ದರೆ ಆತ ಹೊರಗಡೆ ಆರಾಮಾಗಿ ಓಡಾಡುವುದು ಕಷ್ಟವಾಗುತ್ತದೆ. ಆದರೆ ಪೊಲೀಸ್ ಕೇಸ್ ಇಲ್ಲ ಎಂದರೆ ಎಲ್ಲಿ ಬೇಕಾದರೂ, ಯಾವಾಗ ಹೇಗೆ ಬೇಕಾದರೂ ಅವನು ಓಡಾಡಬಹುದು. ಹೀಗಾಗಿಯೇ ತನ್ನ ಹೊಸ ಪ್ಲಾನನ್ನು ಯಶಸ್ವಿಯಾಗಿ ಮಾಡಲು ಈ ಒಂದು ನಾಟಕ ಮೌರ್ಯ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಮುಂದಿನ ಸಂಚಿಕೆಗಳಲ್ಲಿ ಲಕ್ಷಣ ಧಾರಾವಾಹಿ ಹೇಗೆ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.