ತಮ್ಮ ಮೊದಲ ಕ್ರಶ್ ಯಾರು ಎಂದು ಬಹಿರಂಗ ಪಡಿಸಿದ ಕಿರುತೆರೆಯ ಟಾಪ್ ನಟಿ ನಮ್ರತಾ ಗೌಡ. ಆ ನಟ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡಿದ್ದ ನಮ್ರತಾ ಗೌಡರವರು ಇದೀಗ ನಾಗಿಣಿ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆಯನ್ನು ಪಡೆದು ಕೊಂಡಿದ್ದ ಪುಟ್ಟಗೌರಿ ಧಾರಾವಾಹಿ ಯಲ್ಲಿ ಹಿಮ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡಿದೆ ಇವರು

ಇದೀಗ ನಾಗಿಣಿ ಭಾಗ-2 ರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ, ಇನ್ನು ಇಷ್ಟೇ ಅಲ್ಲದೆ ಬಾಲ ಕಲಾವಿದೆಯಾಗಿ ಗುರುತಿಸಿ ಕೊಂಡಿದ್ದ ನಮ್ರತ ಗೌಡರವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ಕೂಡ ಬಾಲ ನಟಿಯಾಗಿ ಪ್ರವೇಶ ಮಾಡಿದ್ದರು. ಕನ್ನಡ ಚಿತ್ರರಂಗದ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿರುವ ಮಿಲನ ಚಿತ್ರದಲ್ಲಿ ಕೂಡ ನಟನೆ ಮಾಡಿದ್ದಾರೆ.

ಇನ್ನು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರಿಸಿ ಉತ್ತಮ ಜನಪ್ರಿಯತೆಯನ್ನು ಪಡೆದುಕೊಂಡಿರುವ ಇವರು, ಮದುವೆಯ ಕುರಿತು ಹಾಗೂ ತಮ್ಮ ಮೊದಲ ಕ್ರಶ್ ಕುರಿತು ಬಹಿರಂಗ ಪಡಿಸಿದ್ದಾರೆ. ಹೌದು ಸ್ನೇಹಿತರೇ ಇದೀಗ ಸಂದರ್ಶನದಲ್ಲಿ ಮಾತನಾಡಿರುವ ನಮ್ರತಾ ಗೌಡರವರು ನಾನು ಬಹಳ ಚಿಕ್ಕವಯಸ್ಸಿನಿಂದಲೂ ಕೂಡ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದೇನೆ, ಪರಮಾತ್ಮ ಚಿತ್ರವನ್ನು ಐದು ಬಾರಿ ನೋಡಿದ್ದೇನೆ, ಎಷ್ಟು ನೋಡಿದರೂ ಮತ್ತೆ-ಮತ್ತೆ ನೋಡಬೇಕು ಎನಿಸುತ್ತದೆ, ಪುನೀತ್ ರಾಜ್ ಕುಮಾರ್ ರವರು ನನ್ನ ಜೀವನದ ಮೊದಲ ಕ್ರಶ್, ಇನ್ನು ಮದುವೆ ಅಂತೂ ಸದ್ಯಕ್ಕೆ ಇಲ್ಲ ಇನ್ನೂ ಕನಿಷ್ಠ ಮೂರ್ನಾಲ್ಕು ವರ್ಷಗಳ ನಂತರ ಎಂದಿದ್ದಾರೆ.