ಇಷ್ಟು ದಿವಸ ಸೈಲೆಂಟ್ ಆಗಿ ಇದ್ದ ನವಾಜ್, ಗಂಧದಗುಡಿ ನೋಡಿ ರಿವ್ಯೂ ಕೊಟ್ಟು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??

ಚಿತ್ರ ಪ್ರೇಮಿಗಳಿಗೆ ನವಾಜ್ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಭಿನ್ನ ರೀತಿಯಾಗಿ ಚಿತ್ರದ ಬಗ್ಗೆ ರಿವೀವ್ ಹೇಳುವ ನವಾಜ್ ಕರ್ನಾಟಕದಾದ್ಯಂತ ಕ್ರೇಜ್ ಸೃಷ್ಟಿಸಿದ್ದಾರೆ ಎಂದೇ ಹೇಳಬಹುದು. ಸಿನಿಮಾ ನೋಡಿದ ನಂತರ ತನ್ನ ವಿಶಿಷ್ಟ ರೀತಿಯಲ್ಲಿ ಸಿನಿಮಾದ ಬಗ್ಗೆ ರಿವ್ಯೂ ಕೊಡುತ್ತಾ ಬಂದಿದ್ದಾರೆ. ತಮ್ಮ ಪ್ರಾಸಭದ್ಧ ಸಾಲುಗಳ ಮೂಲಕ ಸಿನಿಮಾದ ವಿಮರ್ಶೆ ನೀಡುವ ನವಾಜ್ ಸಾಕಷ್ಟು ಕ್ರೇಜ್ ಸೃಷ್ಟಿಸಿದ್ದಾರೆ ಎಂದು ಹೇಳಬಹುದು. ಇವರ ಪ್ರಸಿದ್ಧಿ ಇತ್ತೀಚಿಗೆ ಅವರನ್ನು ಬಿಗ್ ಬಾಸ್ ಮನೆಗೂ ಕೂಡ ಪ್ರವೇಶಿಸುವಂತೆ ಮಾಡಿತು. ಬಿಗ್ ಬಾಸ್ ಸೀಸನ್ 9ಕ್ಕೆ ನವಾಜ್ ಅವರು ಕಾಲಿಟ್ಟಿದ್ದರು. ಅಲ್ಲಿಯೂ ಕೂಡ ತಮ್ಮ ಆಟದಿಂದ ಎಲ್ಲರಿಗೂ ಮೆಚ್ಚುಗೆಯಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರು ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದರು. ಆದರೆ ನಂತರ ಅವರು ಇನ್ನಷ್ಟು ಚಿತ್ರಗಳಿಗೆ ರಿವ್ಯೂ ಕೊಡುತ್ತಿದ್ದಾರೆ. ಎಲ್ಲಾ ಹೊಸ ಹೊಸ ಚಿತ್ರಗಳ ಬಗ್ಗೆಯೂ ಪ್ರತಿಕ್ರಿಯೆ ನೀಡುತ್ತಾರೆ.

ಬಿಡುಗಡೆಗೊಳ್ಳುವ ಎಲ್ಲ ಚಿತ್ರಗಳನ್ನು ನೋಡಿ ಅದರ ಬಗ್ಗೆ ರಿವ್ಯೂ ನೀಡುತ್ತಾರೆ. ಇತ್ತೀಚಿಗಂತೂ ಎಲ್ಲಾ ಚಿತ್ರತಂಡದವರು ಇವರನ್ನು ಸಂಪರ್ಕಿಸುತ್ತಾರೆ. ಏಕೆಂದರೆ ನವಾಜ್ ಚಿತ್ರದ ಬಗ್ಗೆ ಹೇಳಿದರೆ ಅದು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುತ್ತದೆ, ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಾರೆ ಎಂದು ಎಷ್ಟೋ ಜನ ಭಾವಿಸುತ್ತಾರೆ. ಇವರು ಮಾಡುವ ರಿವ್ಯೂ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ವೀಕ್ಷಣೆ ಪಡೆದುಕೊಳ್ಳುತ್ತದೆ. ಇವರ ವಿಡಿಯೋಗಳು ವೈರಲ್ ಆಗುವುದರ ಜೊತೆ ಜೊತೆಗೆ ಎಷ್ಟೋ ಗೊತ್ತೇ ಇಲ್ಲದ ಹೊಸ ಹೊಸ ಚಿತ್ರಗಳ ಬಗ್ಗೆ ಜನರಿಗೆ ತಿಳಿಯುತ್ತದೆ. ನವಾಜ್ ರಿವ್ಯೂ ನೋಡಿ ಕೆಲವರು ಚಿತ್ರ ನೋಡುವ ಮನಸ್ಸು ಮಾಡುತ್ತಾರೆ ಎಂದು ಹೇಳಬಹುದು. ಇದೀಗ ನವಾಜ್ ಗಂಧದಗುಡಿ ಚಿತ್ರವನ್ನು ನೋಡಿ ತಮ್ಮ ರಿವ್ಯೂ ಹೇಳಿದ್ದಾರೆ.

ಇಷ್ಟು ದಿವಸ ಸೈಲೆಂಟ್ ಆಗಿ ಇದ್ದ ನವಾಜ್, ಗಂಧದಗುಡಿ ನೋಡಿ ರಿವ್ಯೂ ಕೊಟ್ಟು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?? 2

ಗಂಧದಗುಡಿ ಚಿತ್ರವು ಪುನೀತ್ ರಾಜಕುಮಾರ್ ಅವರ ಒಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾಗಿದ್ದು, ಅಮೋಘ ವರ್ಷ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಕರ್ನಾಟಕದ ಪ್ರಾಕೃತಿಕ ಶ್ರೀಮಂತಿಕೆ, ವನ್ಯಜೀವಿ, ಪ್ರಾಣಿ, ಪಕ್ಷಿ ಪರಿಸರ, ಬೆಟ್ಟ ಕಾಡು ಇಡೀ ಪ್ರಕೃತಿಯನ್ನು ತೆರೆಯ ಮೇಲೆ ತೋರಿಸಲಾಗಿದೆ. ಗಂಧದಗುಡಿಯ ಪ್ರಾಕೃತಿಕ ವೈಭವವನ್ನು ತೆರೆಯ ಮೇಲೆ ತರಲಾಗಿದೆ. ಇದು ಪುನೀತ್ ಅವರ ಕನಸಿನ ಕೂಸಾಗಿತ್ತು. ಈ ಚಿತ್ರ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದೆ. ಈ ಚಿತ್ರವನ್ನು ನೋಡಿದ ನಂತರ ನವಾಜ್ ಚಿತ್ರದ ಬಗ್ಗೆ ರಿವ್ಯೂ ಹೇಳಿದ್ದಾರೆ. ಇದೇ ಮೊದಲ ಬಾರಿ ಚಿತ್ರ ನೋಡಿದ ಬಳಿಕ ಚಿತ್ರಮಂದಿರದ ಬಳಿ ಹೇಳುತ್ತಿದ್ದ ನವಾಜ್ ಇದೇ ಮೊದಲ ಬಾರಿ ಗಂಧದಗುಡಿ ಚಿತ್ರ ಎನ್ನುವ ಕಾರಣಕ್ಕೆ ಹೊರಗಿನ ಜಾಗಕ್ಕೆ ಬಂದು ಒಳ್ಳೆಯ ಪರಿಸರದ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಎಂದಿನಂತೆ ಪ್ರಾಸಭದ್ಧ ಕವಿತೆಗಳ ಮೂಲಕ ಗಂಧದಗುಡಿ ಮತ್ತು ಪುನೀತ್ ಅವರನ್ನು ನವಾಜ್ ಹೊಗಳಿದ್ದಾರೆ. ಗಂಧದಗುಡಿ ನಮ್ಮ ಹೆಮ್ಮೆ ಈ ಚಿತ್ರವನ್ನು ನೀವೆಲ್ಲರೂ ನೋಡಿ ಎಂದು ಅವರು ಕೇಳಿಕೊಂಡಿದ್ದಾರೆ.