ಹೊಸ ವರ್ಷದ ಸಂಭ್ರಮದಲ್ಲಿ ಮಗುವಿನ ಜೊತೆ ಕ್ಯೂಟ್ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್, ಅಭಿಮಾನಿಗಳಿಗೆ ಕೊಂಚದರಲ್ಲೇ ನಿರಾಸೆ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಹಳೆ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿರುವ ಸಂಭ್ರಮ ಎನ್ನುವುದು ಎಲ್ಲರಲ್ಲಿ ಕೂಡ ಮನೆಮಾಡಿದೆ. ಇನ್ನು ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಶುಭಾಶಯವನ್ನು ಕೋರಿದ ಫೋಟೋಗಳನ್ನು ಪೋಸ್ಟ್ ಮಾಡಿರುತ್ತಾರೆ. ಹೌದು ನಾವು ಇಂದು ಮಾತನಾಡಲು ಹೊರಟಿರುವುದು ಅದೇ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ನಿಖಿಲ್ ಕುಮಾರ್ ಅವರ ಕುರಿತಂತೆ. ನಿಖಿಲ್ ಕುಮಾರ್ ರವರು ಈಗಾಗಲೇ ನಿಮಗೆ ತಿಳಿದಿರುವಂತೆ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ.

ನಂತರ ಸೀತರಾಮಕಲ್ಯಾಣ ಎನ್ನುವ ಚಿತ್ರದಲ್ಲಿ ಕೂಡ ನಟಿಸುತ್ತಾರೆ. ರಾಜಕೀಯದಲ್ಲಿ ಕೂಡ ಒಂದು ಮಟ್ಟಿಗೆ ಒಳ್ಳೆಯ ಹೆಸರನ್ನು ಮಾಡುತ್ತಾರೆ. ರಾಜ್ಯದ ಜೆಡಿಎಸ್ ಯುವ ಅಧ್ಯಕ್ಷರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇದೆಲ್ಲದರ ನಡುವೆ ಕಳೆದ ವರ್ಷದ ಪ್ರಾರಂಭದಲ್ಲಿ ರೇವತಿ ಅವರನ್ನು ಮದುವೆಯಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

ಹೊಸ ವರ್ಷದ ಸಂಭ್ರಮದಲ್ಲಿ ಮಗುವಿನ ಜೊತೆ ಕ್ಯೂಟ್ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್, ಅಭಿಮಾನಿಗಳಿಗೆ ಕೊಂಚದರಲ್ಲೇ ನಿರಾಸೆ. ಯಾಕೆ ಗೊತ್ತೇ?? 2

ಇತ್ತೀಚಿಗಷ್ಟೇ ಗಂಡು ಮಗುವಿನ ತಂದೆ ಕೂಡ ಆಗಿದ್ದಾರೆ ನಮ್ಮ ನಿಖಿಲ್ ಕುಮಾರ್ ರವರು. ಸದ್ಯದ ಮಟ್ಟಿಗೆ ಮಗುವಿನ ಫೋಟೋವನ್ನು ಎಲ್ಲು ಕೂಡ ಶೇರ್ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ನಿಖಿಲ್ ಕುಮಾರ್ ಅವರು ಹೇಳಿಕೊಂಡಿದ್ದರು. ಆದರೆ ಈಗ ನಿಖಿಲ್ ಕುಮಾರ್ ರವರು ಎಲ್ಲರಂತೆ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ ತಮ್ಮ ಮಗುವಿನ ಹಾಗೂ ಪತ್ನಿಯ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮುಖವನ್ನು ತೋರಿಸಿಲ್ಲವಾದರೂ ಕೂಡ ಮೂರು ಜನ ಒಟ್ಟಿಗೆ ಇರುವ ಫೋಟೋ ಅಭಿಮಾನಿಗಳ ಮನಸ್ಸಿನಲ್ಲಿ ಸಂತೋಷವನ್ನು ಸೃಷ್ಟಿಸಿದೆ. ಈ ಫೋಟೋ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.