ಮನೆಯಲ್ಲಿ ಇಷ್ಟೆಲ್ಲ ದಿನ ಇದ್ದರೂ ಕೂಡ ಪ್ರಿಯಾಂಕಾ ರವರು ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಪಾಪ ಇಷ್ಟೇನಾ.

ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವಂತೆ ಬಹು ನಿರೀಕ್ಷೆ ಮೂಡಿಸಿದ್ದ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರೂ ಕೂಡ ಮನೆಯಲ್ಲಿ ಬಹಳ ಅದ್ಭುತವಾಗಿ ಆಟವಾಡಿ ಇತ್ತೀಚಿಗೆ ಕೆಲವೊಂದಷ್ಟು ಕಹಿ ಘಟನೆಗಳು ನಡೆದರೂ ಕೂಡ ಕೆಲವೊಂದು ಟಾಸ್ಕ್ ಗಳಲ್ಲಿ ಅದ್ಭುತ ನಿರ್ಧಾರ ತೆಗೆದುಕೊಂಡು ಕೆಲವೊಂದು ಘಟನೆಗಳನ್ನು ಪ್ರಶ್ನಿಸಿ, ಸಾಧ್ಯವಾದಷ್ಟು ಮನರಂಜನೆ ನೀಡಿದ್ದ ಪ್ರಿಯಾಂಕಾ ತಿಮ್ಮೇಶ್ ರವರು ಹೊರಬಂದಿದ್ದಾರೆ. ಫೈನಲ್ ತಲುಪುವ ಸ್ಪರ್ದಿಗಳು ಎಂದೇ ಖ್ಯಾತಿ ಪಡೆದುಕೊಂಡಿರುವ ಮೂವರು ಸ್ಪರ್ದಿಗಳ ಜೊತೆ ನಾಮಿನೇಷನ್ ಲಿಸ್ಟ್ ನಲ್ಲಿ ಇದ್ದ ಪ್ರಿಯಾಂಕಾ ತಿಮ್ಮೇಶ್ ರವರು ಈ ವಾರ ಎಲಿಮಿನೇಷನ್ ಆಗಿದ್ದಾರೆ.

ಹೌದು ಸ್ನೇಹಿತರೇ, ವೈಷ್ಣವಿ ಗೌಡ, ಪ್ರಶಾಂತ್ ಸಂಭರ್ಗಿ ಹಾಗೂ ಶುಭ ಪೂಂಜಾ ರವರು ಈ ವಾರ ಪ್ರಿಯಾಂಕಾ ತಿಮ್ಮೇಶ್ ರವರ ಜೊತೆ ನಾಮಿನೇಷನ್ ಲಿಸ್ಟ್ ನಲ್ಲಿ ಇದ್ದರು. ಅದೇ ಸಮಯದಲ್ಲಿ ಶನಿವಾರದ ಎಪಿಸೋಡ್ ನಲ್ಲಿ ವೈಷ್ಣವಿ ಗೌಡ ರವರು ಮಾತ್ರ ಸೇವ್ ಆಗಿದ್ದರು. ಇನ್ನು ಹೀಗೆ ಇಷ್ಟೆಲ್ಲ ದಿವಸ ನಮಗೆ ಮನರಂಜನೆ ನೀಡಿ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮನೆಯಿಂದ ಹೊರ ಬಂದಿರುವ ಸಮಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ ಸೃಷ್ಟಿಯಾಗಿದೆ.

ಯಾಕೆಂದರೆ ಚಕ್ರವರ್ತಿ ಚಂದ್ರಚೂಡ್ ರವರು, ಶುಭ ಪೂಂಜಾ ರವರು ಸೇರಿದಂತೆ ಇನ್ನು ಹಲವಾರು ಜನರ ನಡುವೆ ಪ್ರಿಯಾಂಕಾ ತಿಮ್ಮೇಶ್ ರವರು ಹೊರ ಬರುವುದು ಸರಿ ಯಲ್ಲ ಎಂದು ಹಲವಾರು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನು ಹೀಗೆ ಇಷ್ಟೆಲ್ಲ ಚರ್ಚೆ ಸೃಷ್ಟಿಸಿರುವ ಪ್ರಿಯಾಂಕಾ ತಿಮ್ಮೇಶ್ ರವರ ಸಂಭಾವನೆ ವಿಚಾರ ಕೂಡ ಸದ್ದು ಮಾಡುತ್ತಿದೆ, ಯಾಕೆಂದರೆ ಪ್ರಿಯಾಂಕಾ ತಿಮ್ಮೇಶ್ ರವರಿಗೆ ಸಂಭಾವನೆ ಕಡಿಮೆಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಸಲಿಗೆ ಇವರ ಸಂಭಾವನೆ ಎಷ್ಟು ಎಂಬುದುದನ್ನು ನಾವು ನೋಡುವುದಾದರೆ ಇವರಿಗೆ ಒಂದು ವಾರಕ್ಕೆ 28 ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.