ಪುಷ್ಪ’ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಫರ್ಸ್ಟ್ ಲುಕ್ ಬಹಿರಂಗ; ನೂತನ ಗೆಟಪ್​ಗೆ ಫಿದಾ ಆದ ಅಭಿಮಾನಿಗಳು. ಹೇಗಿದೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಇದೀಗ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಗೆ ಎಲ್ಲಾ ಕಡೆ ಅವಕಾಶ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರ ಚಿತ್ರಗಳು ಕೂಡ ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರಗಳೂ ಕೂಡ ಸಿನಿ ಪ್ರಿಯರನ್ನು ರಂಜಿಸಲು ಬರುತ್ತಿವೆ.

ತೆಲುಗು ಚಿತ್ರ ’ಪುಷ್ಫ’ ಈಗಾಗಲೇ ತುಂಬಾ ಸುದ್ಧಿ ಮಾಡಿದೆ. ತೆಲಗು ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಈ ಚಿತ್ರಕ್ಕೆ 2018ರಲ್ಲಿ ತೆರೆಕಂಡ ’ರಂಗಸ್ಥಲಂ ನಂತಹ ಚಿತ್ರವನ್ನು ನೀಡಿರುವ ಖ್ಯಾತ ನಿರ್ದೇಶಕ ಸುಕುಮಾರ್ ಅವರ ನಿರ್ದೇಶನವಿದೆ. ಪುಷ್ಫ ಸಿನಿಮಾ ಸಂಪೂರ್ಣ ಕಾಡು ಹಾಗೂ ಸ್ಥಳೀಯ ಚಿತ್ರೀಕರಣವನ್ನು ಒಳಗೊಂಡಿರುವ ಸಿನಿಮಾ. ಶೆಷಾಚಲಂ ಅರಣ್ಯದಲ್ಲಿ ನಡೆಯುವ ಕಳ್ಳ ಸಾಗಾಣಿಕೆ ವಿಷಯ ಈ ಚಿತ್ರದ ಕಥಾವಸ್ತು. ಇನ್ನು ಅಲ್ಲು ಅರ್ಜುನ್ ಒಬ್ಬ ಟ್ರಕ್ ಡ್ರೈವರ್ ಆಗಿ ಬೇರೆಯದೇ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆಗೆ ಕನ್ನಡದ ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಖಳನಾಯಕನಾಗಿ ಫಹಾದ್ ಫಾಸಿಲ್ ಮಿಂಚಿದ್ದಾರೆ. ಈ ಎಲ್ಲದರ ಬಗ್ಗೆ ಮಾಹಿತಿಗಳನ್ನು ಹೊರಹಾಕಿದರೂ ಚಿತ್ರದ ನಾಯಕಿಯ ಬಗ್ಗೆ ಅಷ್ಟೇನು ಹೇಳಿರಲಿಲ್ಲ ಚಿತ್ರತಂಡ. ಆದರೆ ಇದೀಗ ಕನ್ನಡತಿ, ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿಯಾಗಿದ್ದು ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದನ್ನು ರಶ್ಮಿಕಾ ತಮ್ಮ ಇನ್ಸ್ಟಾದಲ್ಲಿ ’ಶ್ರೀವಲ್ಲಿ’ ಎಂಬ ಟೈಟಲ್ ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಪುಷ್ಫ ಚಿತ್ರದಲ್ಲಿ ರಶ್ಮಿಕಾ ಅವರ ಪಾತ್ರ ಈ ವರೆಗಿನ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿರುತ್ತೆ ಎನ್ನುವುದು ಈ ಪೋಸ್ಟ್ರ್ ನೋಡಿದ್ರೆನೆ ಗೊತ್ತಾಗತ್ತೆ. ಇನ್ನು ರಶ್ಮಿಕಾ ಹಾಗೂ ನಟ ಧನಂಜಯ್ ಇರುವ ಕಾರಣ ತೆಲುಗು ಚಿತ್ರಕ್ಕೆ ಎಂದಿಗಿಂತ ಹೆಚ್ಚಿನ ಕನ್ನಡ ಅಭಿಮಾನಿಗಳ ಹಾರೈಕೆಯೂ ಇರುವುದು ಸುಳ್ಳಲ್ಲ!